ಅಂಗವಿಲಕರಿಂದ ಮತದಾನ ಜಾಗೃತಿ ಅಭಿಯಾನ

ಹರಪನಹಳ್ಳಿ

          ಮತದಾನ ಜಾಗೃತಿ ಆಂದೋಲನ ನಿಮಿತ್ತ ತಾಲ್ಲೂಕು ಪಂಚಾಯಿತಿ, ಪುರಸಭೆ ಜಿಲ್ಲಾ ವಿಕಲಚೇತನರ ಕಲ್ಯಾಣ ಇಲಾಖೆ, ಗ್ರಾಮೀಣ ಪುನರ್ವಸತಿ ಯೋಜನೆಯ ಎಂ.ಆರ್.ಡಬ್ಲ್ಯು,ವಿ.ಆರ್.ಡಬ್ಲ್ಯೂ ಮತ್ತು ಯು.ಆರ್.ಡಬ್ಲ್ಯು ವತಿಯಿಂದ ಪಟ್ಟಣದಲ್ಲಿ ಶನಿವಾರ ತ್ರಿಚಕ್ರ ಮೋಟರ್ ಬೈಕ್ ಜಾಥಾ ನಡೆಸಲಾಯಿತು.

       ಜಾಥಾಕ್ಕೆ ಚಾಲನೆ ನೀಡಿದ ಉಪವಿಭಾಗಾಧಿಕಾರಿ ಇಸ್ಮಾಯಿಲಸಾಬ್ ಶಿರಹಟ್ಟಿ, `ಪ್ರಜಾಪ್ರಭುತ್ವ ಯಶಸ್ವಿಯಾಗಲು ಮತದಾನ ಮಹತ್ವದ ಪಾತ್ರ ವಹಿಸುತ್ತದೆ. ಸ್ವಿಪ್ ಕಾರ್ಯಕ್ರಮದ ಮೂಲಕ ಮತದಾರರಿಗೆ ಕಡ್ಡಾಯವಾಗಿ ಮತ ಚಲಾಯಿಸಲು ಪ್ರೋತ್ಸಾಹ ನೀಡಬೇಕು’ ಎಂದು ಹೇಳಿದರು.

       ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಮತಾ ಹೊಸಗೌಡರ, `ಮತದಾರ ಪಟ್ಟಿಯಲ್ಲಿರುವ ಎಲ್ಲ ಮತದಾರರು ಮತದಾನಕ್ಕೆ ಮುಂದಾಗಬೇಕು. ಆಸೆ ಆಮೀಷಗಳಿಗೆ ಒಳಗಾಗದೇ ಅಮೂಲ್ಯ ಮತ ಚಲಾಯಿಸಿ ಉತ್ತಮ ನಾಯಕರ ಆಯ್ಕೆಗೆ ಕಾರಣರಾಗಬೇಕು’ ಎಂದು ಹೇಳಿದರು.

        ಪುರಸಭೆ ಮುಖ್ಯಾಧಿಕಾರಿ ನಾಗರಾಜ ನಾಯ್ಕ, ಎಂ.ಆರ್.ಡಬ್ಲ್ಯು ಮತ್ತು ವಿ.ಆರ್.ಡಬ್ಲ್ಯೂ ಒಕ್ಕೂಟದ ಜಿಲ್ಲಾಧ್ಯಕ್ಷ ಡಿ.ನೇಮ್ಯಾನಾಯ್ಕ, ಎಂ.ಆರ್.ಡಬ್ಲ್ಯೂ ಆರ್.ಧನರಾಜ್, ಮಂಜುನಾಥ, ಪುರಸಭೆಯ ಲೋಕ್ಯಾನಾಯ್ಕ, ಸ್ವಿಪ್ ಸಂಯೋಜಕ ಕೊಟ್ರೇಶ್, ಕಲೀಲಸಾಬ್, ಬುಳ್ಳನಗೌಡ, ಕೆ.ಪಿ.ರಂಜಿತಾ, ಜಿ.ದೀಪಾ, ಎಚ್.ಬ್ರಹ್ಮಾನಂದ, ಎಚ್.ಬಸವರಾಜ್, ಜಿ.ಅಂಜಿನೆಪ್ಪ, ಐ.ಸಿರಾಜ್, ಜುಂಜಪ್ಪ, ಬಿ.ಕೆ.ಇಮ್ರಾನ್ಬಾಷ, ಎಂ.ಡಿ.ಮನ್ಸೂರ್, ಪಟ್ನಾಮದ ವೆಂಕಟೇಶ್, ಮಹಾದೇವಿ ಎಚ್.ಮಂಜಪ್ಪ ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link