ಸಾಹಿತ್ಯಶ್ರೀ ಗೌರವ ಪ್ರಶಸ್ತಿ ಪುರಸ್ಕೃತ ಸತೀಶ ಕುಲಕರ್ಣಿಯವರಿಗೆ ಸನ್ಮಾನ

ಹಾವೇರಿ :

     ಕರ್ನಾಟಕ ಸಾಹಿತ್ಯ ಅಕಾಡೆಮಿ ಈ ಸಾಲಿನ ಸಾಹಿತ್ಯಶ್ರೀ ಗೌರವ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಸಾಹಿತಿ ಸತೀಶ ಕುಲಕರ್ಣಿಯವರನ್ನು ಸನ್ಮಾನಿಸುವ ಸಮಾರಂಭ ಮತ್ತು ಅವರ ಸಾಹಿತ್ಯ ಕುರಿತಾದ ವಿಚಾರ ಸಂಕಿರಣ ಇಲಲಿನ ಲೋಡಾಯಾ ಸಭಾಂಗಣದಲ್ಲಿ ಜರುಗಿತು.

      ಸಾಹಿತಿ ಕಲಾವಿದರ ಬಳಗ ಮತ್ತು ಗೆಳೆಯರ ಬಳಗ ಸಂಯುಕ್ತ ಆಶ್ರಯದಲ್ಲಿ ನಡೆದ ಸಮಾರಂಭವನ್ನು ದೀಪ ಬೆಳಗಿಸುವುದರ ಮೂಲಕ ನಾಡಿನ ಹಿರಿಯ ಕವಿ ಡಾ. ಧರಣೇಂದ್ರ ಕುರಕರಿ ಉದ್ಘಾಟಿಸಿದರು. ಅವರು ಮಾತನಾಡಿ ತಾನು ಮಾತ್ರ ಬೆಳೆಯದೇ ತನ್ನ ಸುತ್ತಲಿನ ಪ್ರತಿಭೆಗಳನ್ನು ಬೆಳೆಸುವ ಕವಿಗಳಾದವರು ಸತೀಶ ಕುಲಕರ್ಣಿ. ಕಾವ್ಯ , ನಾಟಕ , ಸಂಘಟನೆಗಳ ಮೂಲಕ ಜಿಲ್ಲೆಯ ಸಾಂಸ್ಕøತಿಕ ಛಾಪನ್ನು ನಾಡಿಗೆ ಪರಿಚಯಿಸುತ್ತಿರುವ ಸಾಂಸ್ಕೃತಿಕ ರಾಯಭಾರಿ ಎಂದು ಕುರಕುರಿ ಹೇಳಿದೆರು. ಅಧ್ಯಕ್ಷತೆ ವಹಿಸಿ ಡಾ. ಜೆ. ಆರ್ ಗುಡಿ ವಹಿಸಿದ್ದರು. ಸಾಹಿತಿ ಕಲಾ ಬಳಗದ ಎಸ್ ಆರ್ ಪ್ರಸ್ತಾವಿಕ ಮಾತನಾಡಿದರು. ಕೆ. ಆರ್ ಹಿರೇಮಠ ಹಾಗೂ ಸಂಗಡಿಗರು ಸತೀಶ ಕುಲಕರ್ಣಿಯವರು ಬರೆದ ಹಾಡುಗಳನ್ನು ಹಾಡಿದರು.

       ಈ ಸಂದರ್ಭದಲ್ಲಿ ಕವಿ ಸತ್ಯಾನಂದ ಪಾತ್ರೋಟ, ಡಾ. ವಾಯ್ ಎಮ ಭಜಂತ್ರಿ, ಡಾ. ಶಶಿಧರ ನರೇಂದ್ರ, ಪತ್ರಕರ್ತ ಮಾಲತೇಶ ಅಂಗೂರ ಹಾಗೂ ಚಂದ್ರಶೇಖರ ಮಾಳಗಿ,ಜಗದೀಶ ಚೌಟಗಿ, ನಾಗರಾಜ ನಡುವಿನಮಠ, ಪ್ರಕಾಶ ಇಚ್ಚಂಗಿ ಅನೇಕರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link