ಮಧುಗಿರಿ :
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಭಾವನೆಗಳಿಗೆ ವಿರುದ್ದವಾದ ಯಾವುದೇ ತೀರ್ಮಾನಗಳು ಸಫಲವಾಗಿಲ್ಲ. ಸುಪ್ರೀಂ ಕೋರ್ಟನ ಆದೇಶಗಳು ಸಹ ಹಲವು ಬಾರಿ ಬದಲಾವಣೆಯಾಗಿವೆ ಕಾಂಗ್ರೆಸ್ ಹೈಕಮಾಂಡ್ ಪುನರ್ ಪರಿಶೀಲಿಸಿ ನನಗೆ ಭಿ ಫಾರಂ ನೀಡುವಂತೆ ಮತ್ತೋಮ್ಮೆ ಮನವಿ ಮಾಡುತ್ತೇನೆ ಎಂದು ಸಂಸದ ಎಸ್.ಪಿ ಮುದ್ದಹನುಮೇಗೌಡ ತಿಳಿಸಿದರು.
ಪಟ್ಟಣದ ಪುರಸಭೆಯ ಮಾಜಿ ಸದಸ್ಯರೊಬ್ಬರ ನಿವಾಸದಲ್ಲಿ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕರ್ತರ ಮತ್ತು ಬೆಂಬಲಿಗರ ಸಭೆಯಲ್ಲಿ ಮಾತನಾಡಿದರು. ಈಗಾಗಲೇ ಕೆಲ ಪಕ್ಷಗಳಲ್ಲಿ ಟಿಕೆಟ್ ಹಂಚಿಕೆಯಲ್ಲಿ ಕೂಡ ಬದಲಾವಣೆ ಮಾಡಲಾಗಿದೆ. ಸಂಸದನಾದ ನಂತರ ಕ್ಷೇತ್ರದ ಅಭಿವೃದ್ದಿಗೆ ಬಹಳಷ್ಟು ಶ್ರಮಿಸಿ ಕೇಂದ್ರದಲ್ಲಿ ರಾಜ್ಯದ ಧ್ವನಿಯಾಗಿ ಕ್ರಿಯಾಶೀಲನಾಗಿ ಕೆಲಸ ಮಾಡಿದ್ದೇನೆ ದೇಶದಲ್ಲೇ 44 ಕಾಂಗ್ರೆಸ್ ಸಂಸದರು ಅಯ್ಕೆಯಾಗಿದ್ದು, ಅದರಲ್ಲಿ ನಾನೂ ಸಹ ಒಬ್ಬನಾಗಿದ್ದೆ ನನ್ನನ್ನು ಹೊರತು ಪಡಿಸಿ ಹಾಲಿ 9 ಜನರಿಗೆ ಪಕ್ಷದ ಟಿಕೆಟ್ ನೀಡಲಾಗಿದೆ ನನಗೆ ಟಿಕೆಟ್ ನಿರಾಕರಿಸಿರುವ ಬಗ್ಗೆ ಹೈಕಮಾಂಡ್ ಸೂಕ್ತ ಕಾರಣಗಳನ್ನು ನೀಡಬೇಕಾಗಿದೆ ಎಂದರು.
ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರ ಮತ್ತು ಮುಖಂಡರ ಒತ್ತಾಯಕ್ಕೆ ಮಣಿದು ಸೋಮವಾರ ಬೆಳಗ್ಗೆ 11 ಗಂಟೆಗೆ ಮೆರವಣೆಗೆಯಲ್ಲಿ ಟೌನ್ ಹಾಲ್ ಮೂಲಕ ತೆರಳಿ ತುಮಕೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದೆನೆ. ಮಧುಗಿರಿ ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನನಗೆ ಬೆಂಬಲ ನೀಡಬೇಕೆಂದು ಕೋರಿದರು.
ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಆರ್. ರಾಜೇಂದ್ರ ಮಾತನಾಡಿ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಿರುವ ಹಾಗೂ ಯಾವುದೇ ಅಪದಾನೆಗಳನ್ನು ಹೊತ್ತಿಲ್ಲದ ಕಾಂಗ್ರೆಸ್ನ ಸಂಸದ ಎಸ್ಪಿಎಂ ರವರನ್ನು ಹೊರತುಪಡಿಸಿ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಬೆಂಬಲಿಸುತ್ತಿರುವುದು ಯಾವ ಪುರುಷಾರ್ಥಕ್ಕೆಂದು ತಿಳಿಯುತ್ತಿಲ್ಲ. ಈ ಚುನಾವಣೆಯಲ್ಲಿ ಏನಾದರೂ ಒಂದು ವೇಳೆ ಜೆಡಿಎಸ್ ನವರು ಗೆದ್ದರೆ ಮುಂದಿನ ದಿನಗಳಲ್ಲಿ ನಡೆಯುವ ಚುನಾವಣೆಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಬಳಿ ಯಾವ ಆಧಾರದ ಮೇಲೆ ಮತಯಾಚನೆಗೆ ಹೋಗಬೇಕೆಂಬ ವಾತವರಣ ಸೃಷ್ಟಿಯಾಗುತ್ತದೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಉಳಿವು ಹಾಗೂ ಮುದ್ದಹನುಮೇಗೌಡರ ಸ್ಪರ್ಧೆಯ ಅನಿವಾರ್ಯತೆ ಇದೆ ಎಂದರು.
ಸಭೆಯಲ್ಲಿ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಎನ್. ಗಂಗಣ್ಣ, ಜಿ.ಪಂ ಸದಸ್ಯ ಚೌಡಪ್ಪ, ಮಂಜುಳಾ ಆದಿನಾರಾಯಣ ರೆಡ್ಡಿ, ತಾ.ಪಂ ಅಧ್ಯಕ್ಷೆ ಇಂದಿರಾ ದೇನಾನಾಯ್ಕ, ಪುರಸಭೆ ಮಾಜಿ ಅಧ್ಯಕ್ಷರಾದ ಎಂ.ಕೆ. ನಂಜುಂಡಯ್ಯ, ಎಂ.ವಿ. ಗೋವಿಂದರಾಜು, ಡಿ.ಜಿ. ಶಂಕರನಾರಾಯಣ ಶೆಟ್ಟಿ, ಸದಸ್ಯರಾದ ಎಂ.ಎಸ್. ಚಂದ್ರಶೇಖರ್, ಅಲೀಂ, ಎಪಿಎಂಸಿ ಸದಸ್ಯರಾದ ಪಿಟಿ ಗೋವಿಂದಯ್ಯ, ರಾಜಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಸ್.ಆರ್. ರಾಜಗೋಪಾಲ್, ಎಂ.ಎಸ್. ಮಲ್ಲಿಕಾರ್ಜುನಯ್ಯ, ಮುಖಂಡರಾದ ಚಿಕ್ಕಯಲ್ಕೂರು ನಾಗಭೂಷಣ್ ಎಂ.ಎಸ್. ಶಂಕರನಾರಾಯಣ, ಎಂ.ಜಿ. ಉಮೇಶ್, ಪಿ.ಸಿ. ಕೃಷ್ಣಾರೆಡ್ಡಿ, ಎಸ್.ಬಿ.ಟಿ ರಾಮು, ತಾಲೂಕು ಯೂತ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಇತರರು ಇದ್ದರು.