ಎಂ ಎನ್ ಕೋಟೆ
ತುಮಕೂರು ಜಿಲ್ಲೆಯ ಐತಿಹಾಸಿಕ ಶಕ್ತಿದೇವತೆ ಹಾಗಲವಾಡಿ ಕರಿಯಮ್ಮ ದೇವಿಯ ಮಹಾ ರಥೋತ್ಸವ ಸಾವಿರಾರು ಭಕ್ತರ ನಡುವೆ ವೈಭವದಿಂದ ನಡೆಯಿತ್ತು.
ಬೆಳಿಗ್ಗೆಯಿಂದಲೇ ದೇವಾಲಯದಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳು ಜರುಗಿದವು. ರಥೋತ್ಸವ ಅಂಗವಾಗಿ ಅಮ್ಮನವರಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ರಥೋತ್ಸವಕ್ಕೂ ಕೂಡ ಹೂವಿನಿಂದ ಶೃಂಗಾರ ಮಾಡಿದ್ದರು. ಕರಿಯಮ್ಮ ದೇವಿಯ ರಥೋತ್ಸವ ಬೆಳಗಿನ ಜಾವ ನಡೆಯಿತ್ತು. ರಥೋತ್ಸವಕ್ಕೆ ಸಾವಿರಾರು ಭಕ್ತರು ಪಾಲ್ಗೊಂಡು ದೇವಿಯ ರಥವನ್ನು ಎಳೆದರು.
ರಥೋತ್ಸವಕ್ಕೆ ಅಪ್ಪಣ್ಣನಹಳ್ಳಿ ಶ್ರೀ ಆಂಜನೇಯಸ್ವಾಮಿ , ಹಾಗಲವಾಡಿ ಕೋಲ್ಲಾಪುರದಮ್ಮ ದೇವರ ಆಗಮನದೊಂದಿಗೆ ಮಹಾ ರಥೋತ್ಸವ ಜರುಗಿತ್ತು. ಭಕ್ತಾಧಿಗಳು ಜಯ ಘೋಷಣೆಗಳನ್ನು ಕೊಗುತ್ತ ರಥವನ್ನು ಎಳೆದು ಅಮ್ಮನವರ ಕೃಪೆಗೆ ಪಾತ್ರರಾದರು.
ರಥೋತ್ಸವದಲ್ಲಿ ಮದುವೆಯಾದ ಹೊಸ ಜೋಡಿಗಳು ರಥೋತ್ಸವದಲ್ಲಿ ಭಾಗವಹಿಸಿ ರಥಕ್ಕೆ ಹೂ ಬಾಳೆಹಣ್ಣು ಎಸೆದು ಅಮ್ಮನವರ ಕೃಪೆಗೆ ಪಾತ್ರರಾದರು. ಪ್ರತಿ ವರ್ಷವು ಕೂಡ ಭಕ್ತಾಧಿಗಳು ವಾಡಿಕೆಯಂತೆ ಬಾಯಿಬೀಗವನ್ನು ಹಾಕಿಸಿಕೊಂಡು ತಮ್ಮ ಹರಕೆಯನ್ನು ತೀರಿಸಿದರು.
ಭಕ್ತಾಧಿಗಳಿಗೆ ಸಂಜೆಯಿಂದಲೇ ನಿರಂತರವಾಗಿ ಮಹಾ ದಾಸೋಹವನ್ನು ಏರ್ಪಡಿಸಲಾಗಿತ್ತು. ರಥೋತ್ಸವದಲ್ಲಿ ಯಾವುದೇ ಅಹಿತರ ಘಟನೆ ನಡೆಯದಂತೆ ಚೇಳೂರು ಪೋಲೀಸರು ಸೂಕ್ತ ಬಂದೂಬಸ್ತ್ ವಹಿಸಿದ್ದರು.
ಶಂಕರ್ ಮಾತನಾಡಿ ಹಾಗಲವಾಡಿ ಶಕ್ತಿ ದೇವತೆ ಈ ತಾಯಿ ರಥೋತ್ಸವಕ್ಕೆ ಜಿಲ್ಲೆಯ ಸಾವಿರಾರು ಭಕ್ತರು ಬಂದು ಅಮ್ಮನವರ ದರ್ಶನ ಪಡೆಯುತ್ತಾರೆ. ಹೊರ ರಾಜ್ಯಗಳಿಂದ ಕೂಡ ಭಕ್ತರು ಈ ದೇವಾಲಯಕ್ಕೆ ಬರುತ್ತಾರೆ. ಬರುವ ಭಕ್ತರಿಗೆ ಮೂಲಭೂತ ಸೌಕರ್ಯಗಳನ್ನು ನೀಡಲಾಗಿದ್ದು ಯಾವುದೇ ಅಹಿತರ ಘಟನೆ ನಡೆಯದಂತೆ ಚೇಳೂರು ಪೋಲೀಸರು ಬಂದೂಬಸ್ತ್ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಹಾಗಲವಾಡಿ ಶಂಕರ್ , ಶಿವರಾಜು , ವಿಜಿಯಣ್ಣ , ಕೇಶವಮೂರ್ತಿ ಹಾಗೂ ಪ್ರಧಾನ ಅರ್ಚಕ ಜೈರಾಮಯ್ಯ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.