ಸ್ವಚ್ಚ ಸರ್ವೇಕ್ಷಣಾ ಅಭಿಯಾನದ ಉತ್ತಮ ಸಾಕ್ಷ್ಯ ಚಿತ್ರ: ಇಂಡಸ್ ವ್ಯಾಲಿ ಚಿಕ್ಕಣ್ಣಗೆ ಪ್ರಶಸ್ತಿ

ಚಳ್ಳಕೆರೆ

          ಸ್ವಚ್ಚತೆಯ ಬಗ್ಗೆ ಅನೇಕ ಕಾರ್ಯಕ್ರಮಗಳನ್ನು ಸರ್ಕಾರ ರೂಪಿಸಿದೆಯಾದರೂ ಸಾರ್ವಜನಿಕರಿಗೆ ಮನಮುಟ್ಟಿಸುವ ನಿಟ್ಟಿನಲ್ಲಿ ಸ್ವಚ್ಚ ಸರ್ವೇಕ್ಷಣ ಅಭಿಯಾನದಡಿ ಉತ್ತಮವಾಗಿ ಸಾಕ್ಷ್ಯ ಚಿತ್ರಗಳ ಸಮೇತ ಉತ್ತಮ ಪ್ರದರ್ಶನಕ್ಕೆ ಆಯ್ಕೆಯಾದ ಸಾಕ್ಷ್ಯ ಚಿತ್ರಕ್ಕೆ ಪ್ರಶಸ್ತಿಯನ್ನು ಪೌರಾಯುಕ್ತ ಜೆ.ಟಿ.ಹನುಮಂತರಾಜು ಮಂಗಳವಾರ ತಮ್ಮ ಕಚೇರಿಯಲ್ಲಿ ವಿತರಿಸಿದರು.

          ನಗರದ ಇಂಡಸ್ ವ್ಯಾಲಿ ಪಬ್ಲಿಕ್ ಶಾಲೆಯ ಆಡಳಿತಾಧಿಕಾರಿ ಚಿಕ್ಕಣ್ಣ ಸ್ವಚ್ಚತೆಗೆ ಸಂಬಂಧಪಟ್ಟಂತೆ ಹಲವಾರು ವಿಷಯಗಳನ್ನು ಚಿತ್ರೀಕರಿಸಿ ಪ್ರದರ್ಶನಕ್ಕೆ ಯೋಗ್ಯವಾದ ರೀತಿಯಲ್ಲಿ ಸಿದ್ದಪಡಿಸಿ ಅದನ್ನು ನಗರಸಭೆ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಪ್ರದರ್ಶನ ಮಾಡಿದ್ದರು. ಚಿತ್ರದಲ್ಲಿ ಕುಡಿಯುವ ನೀರಿನ ಸದ್ಬಳಕೆ, ಪ್ಲಾಸ್ಟಿಕ್‍ನಿಂದ ಪರಿಸರದ ಮೇಲೆ ಉಂಟಾಗುವ ಪರಿಣಾಮ, ಗಿಡ-ಮರಗಳ ಉಳಿವು, ಪ್ರಾಣಿ, ಪಕ್ಷಿಗಳ ರಕ್ಷಣೆ, ನೀರಿನ ಅಮೂಲ್ಯತೆಯ ಬಗ್ಗೆ ಚಿತ್ರೀಕರಣದ ಮೂಲಕ ಪ್ರದರ್ಶಿಸಿದ್ದರು.

            ಚಿಕ್ಕಣ್ಣನವರ ನೈಸರ್ಗಿಕ ಸಂಪತ್ತು ಉಳಿಕೆಯ ಬಗ್ಗೆ ಉತ್ತಮವಾಗಿ ಮೂಡಿಬಂದ ಸಾಕ್ಷ್ಯ ಚಿತ್ರಕ್ಕೆ ನಗರಸಭೆ ಪೌರಾಯುಕ್ತ ಪ್ರಥಮ ಬಹುಮಾನ ಪಡೆದಿದ್ದು, ಪ್ರಶಸ್ತಿ ನೀಡಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಆರ್.ಪ್ರಸನ್ನಕುಮಾರ್, ರಮೇಶ್‍ಗೌಡ, ವೈ.ಪ್ರಕಾಶ್, ಎಚ್.ಮಹಲಿಂಗಪ್ಪ, ಆರೋಗ್ಯ ನಿರೀಕ್ಷಕ ಮಹಲಿಂಗಪ್ಪ, ಗಣೇಶ್, ನೈರ್ಮಲ್ಯ ಇಂಜಿನಿಯರ್ ನರೇಂದ್ರಬಾಬು, ರುಕ್ಮಿಣಿ ಮುಂತಾದವರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap