ಸಂವಿಧಾನ ಬದ್ದ ಮತದಾನದ ಹಕ್ಕನ್ನು ಪ್ರತಿಯೊಬ್ಬರು ಚಲಾಯಿಸಿ: ಅಶೋಕ

ಜಗಳೂರು:

     ದೇಶದಲ್ಲಿ ಪ್ರತಿಯೊಬ್ಬ ನಾಗರೀಕನು ಸಂವಿಧಾನ ಬದ್ದ ಮತದಾನದ ಹಕ್ಕನ್ನು ಕಡ್ಡಾಯವಾಗಿ ಚಲಾಯಿಸುವಂತೆ ವಿದ್ಯಾರ್ಥಿಗಳು ಜಾಗೃತಿ ಮೂಡಿಸಬೇಕು ಎಂದು ತಾಲೂಕು ಸಮಾಜಕಲ್ಯಾಣ ಅಧಿಕಾರಿ ಅಶೋಕ್ ಸಲಹೆ ನೀಡಿದರು.

      ಪಟ್ಟಣದ ಮೆಟ್ರಿಕ್ ನಂತರದ ಪ.ಜಾತಿ.ಪಪಂಗಡದ ವಸತಿ ನಿಲಯದಲ್ಲಿ ಮಂಗಳವಾರ ಸಮಾಜಕಲ್ಯಾಣ ಇಲಾಖೆ ಹಾಗೂ ಪ್ರಗತಿಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

       ದೇಶದ ನಿಮಾತೃಗಳಾದ ಯುವಕರು ಮತದಾನದ ಬಗ್ಗೆ ಸಮಾಜದಲ್ಲಿನ ಅನಕ್ಷರಸ್ಥರಿಗೆ ಮನವರಿಕೆಮಾಡಿ ಚುನಾವಣೆಯಲ್ಲಿ ಕಡ್ಡಾಯ ಮತದಾನಮಾಡುವಂತೆ ತಿಳುವಳಿಕೆ ಮೂಡಿಸಬೇಕು. ಸುತ್ತಮುತ್ತಲಿನ ಪರಿಚಯಸ್ಥರಿಗೆ ಹಾಗೂ ಪೋಷಕರಿಗೆ ಯಾವುದೇ ಆಮಿಷೆಗಳಿಗೆ ಬಲಿಯಾಗದೆ ನಿಷ್ಪಕ್ಷಪಾತವಾಗಿ ಆಯ್ಕೆಮಾಡಿಕೊಂಡು ಸೂಕ್ತ ವ್ಯಕ್ತಿಗೆ ಮತಚಲಾಯಿಸಲು ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.

       ಇಂದಿನ ದಿನಮಾನಗಳಲ್ಲಿ ಶೇ.60 ರಷ್ಟು ಮತದಾರರು ಮತದಾನದಿಂದ ವಂಚಿತರಾಗಿ ಚುನಾವಣೆಯಿಂದ ಚುನಾವಣೆಗೆ ಮತದಾನದ ಪ್ರಮಾಣ ಕ್ರಮೇಣ ಕ್ಷೀಣಿಸುತ್ತಿದ್ದು ಮುಂದಿನದಿನಗಳಲ್ಲಿ ಕಡ್ಡಾಯವಾಗಿ ಶೇ.100 ರಷ್ಟು ಮತದಾನ ವಾಗಲು ಸಂಕಲ್ಪ ಮಾಡಬೇಕು ಎಂದರು.

        ಪ್ರಗತಿಪರ ಹೋರಾಟಗಾರ ನಾಗಲಿಂಗಪ್ಪ ಮಾತನಾಡಿ,ದೇಶದಲ್ಲಿ ಪ್ರಪ್ರಥಮಬಾರಿಗೆ ಸಂವಿಧಾನದ ಕೊಡುಗೆಯಾಗಿ ಮಹಿಳೆಯರಿಗೂ ಸಮಾನತೆಯಿಂದ ಮತದಾನದ ಹಕ್ಕನ್ನು ನೀಡಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಕೊಡುಗೆ ಶ್ಲಾಘನೀಯವಾಗಿದೆ.
ಸಾಕ್ಷರತೆಯ ಪ್ರಮಾಣ ಹೆಚ್ಚಾಗಿರುವ ಕೇರಳದ ಮತದಾನ ಮಾದರಿಯಾಗಬೇಕು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಜಾಗೃತಿ ಮುಡಿಸಬೇಕು ವ್ಯಕ್ತಿಯ ಜೀವಂತಿಕೆಯನ್ನು ಸಾಕ್ಷೀಕರಿಸಲು ಮತದಾನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದು ಪಕ್ಷದ ಆಯ್ಕೆ ವೈಯಕ್ತಿಕ ಮತದಾನ ಸಂವಿಧಾನದ ಆಯ್ಕೆ ಎಂದು ತಿಳಿಸಿದರು.

        ಈ ಸಂದರ್ಭದಲ್ಲಿ ಸಮಾಜಕಲ್ಯಾಣ ಇಲಾಖೆಯ ವ್ಯವಸ್ಥಾಪಕ ಮಹೇಶ್. ಎಐಎಸ್‍ಎಫ್ ನ ಜಿಲ್ಲಾದ್ಯಕ್ಷ ಮಾದಿಹಳ್ಳಿ ಮಂಜುನಾಥ್ ಬಿ..ನಿಲಯಪಾಲಕರಾದ ಭಾಷಾ ಹನುಮಂತಪ್ಪ ಮಾನವಬಂಧುತ್ವ ವೇದಿಕೆಯ ಸಂಚಾಲಕ ಧನ್ಯಕುಮಾರ್ ಹೆಚ್.ಎಂ.ಹೊಳೆ ಪ್ರಗತಿಪರ ಹೊರಾಟಗಾರರಾದ ಬಸವರಾಜ್ ಸಿದ್ದಮ್ಮನಹಳ್ಳಿ ತಿಪ್ಪೇಸ್ವಾಮಿ ಗೋಗುದ್ದು ಜಗದೀಶ್ ಕಟ್ಟಿಗೆಹಳ್ಳಿ ಸಿಬ್ಬಂದಿಗಳಾದ ತಿರುಮಲೇಶ್ ಶಫಿವುಲ್ಲಾ ನಾಗಪ್ಪ ಶಿವಕುಮಾರ್ ಸೇರಿದಂತೆ ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ