ತುರುವೇಕೆರೆ:
ತಾಲೂಕಿನ ಮುನಿಯೂರು ಗ್ರಾಮ ಪಂಚಾಯ್ತಿ ವ್ಯಾಫ್ತಿಯ ಮಾದಪಟ್ಟಣ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಗ್ರಾಮಸ್ಥರು ಪರದಾಡುವಂತಹ ಪರಿಸ್ಥಿತಿ ಉಂಟಾಗಿದೆ.
ತಾಲೂಕಿನ ಮುನಿಯೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಾದಪಟ್ಟಣದಲ್ಲಿ ಸುಮಾರು 90ಕ್ಕೂ ಹೆಚ್ಚು ಮನೆಗಳಿದ್ದು ಸುಮಾರು 400ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಮಾದಪಟ್ಟಣ್ಳ ಗ್ರಾಮದ ಪುರ ರಸ್ತಯಲ್ಲಿರುವ ಕೊಳವೇ ಬಾವಿಯಿಂದ ಗ್ರಾಮದಲ್ಲಿರುವ ಸುಮಾರು 8 ಟ್ಯಾಂಕ್ಗಳಿಗೂ ನೀರು ತುಂಬಿಸಿ ಗ್ರಾಮಸರಿಗೆ ಪೂರೈಸಲಾಗುತ್ತಿತ್ತು. ಆದರೆ ಇತ್ತಿಚೀಗೆ ಕೊಳವೆ ಬಾವಿಯಲ್ಲಿ ಅಂತರ್ ಜಲ ಬತ್ತಿ ನೀರು ಬಾರದಂತಾಗಿದೆ ಗ್ರಾಮಕ್ಕೆ ಕೇವಲ ಒಂದು ಗಂಟೆ ಮಾತ್ರ ನೀರು ನೀಡಲಾಗುತ್ತಿದೆ.
ಕೆಲವು ಟ್ಯಾಂಕ್ಗಳು ತುಂಬದೆ ಜನರು ನೀರು ಪಡೆಯಲು ಟ್ಯಾಂಕ್ನ ಬಳಿ ಬಿಂದಿಗೆ ಇಟ್ಟು ಗಂಟೆಗಟ್ಟಲೇ ಕಾಯುವಂತಹ ಪರಿಸ್ಥಿತಿ ಉಂಟಾಗಿದೆ. ಕೆಲವು ಸಮಯದಲ್ಲಿ ಬೋರ್ವೆಲ್ ನಲ್ಲಿ ನೀರು ಬಾರದಿದ್ದರೆ ನೀರು ಪಡೆಯಲು ಹಗಲು, ರಾತ್ರಿ ಎನ್ನದೆ ದೂರದ ತೋಟಗಳಿಂದ ನೀರು ತರುವಂತಹ ಪರಿಸ್ಥಿತಿ ಉಂಟಾಗಿದೆ. ಕೂಡಲೇ ಅದ್ದರಿಂದ ಕೂಡಲೇ ಸಂಭಂದ ಪಟ್ಟ ಇಲಾಖೆಯವರು ಹೊಸ ಕೊಳವೆ ಬಾವಿ ಕೊರಸಿ ನೀರಿನ ಸಮಸ್ಯೆ ಬಗೆ ಹರಿಸಬೇಕು ಎಂದು ಗ್ರಾಮಸ್ಥರಾದ ರೇಣಕಪ್ಪ, ಶೀಲಾ, ಸಾವಿತ್ರಮ್ಮ, ಕಲಾವತಿ, ಕುಮಾರ, ತೀರ್ಥಕುಮಾರ, ಅಕ್ಷಯ ತಿಳಿಸಿದ್ದಾರೆ.
ಗ್ರಾಮ ಮಹಿಳೆ ಸರ್ವಮಂಗಳಮ್ಮ ಮಾತನಾಡಿ ಕಳೆದ ತಿಂಗಳಿಂದ ಗ್ರಾಮದಲ್ಲಿ ಕುಡಿಯಲು ನೀರಿಲ್ಲದೆ ಪರೆದಾಡುವಂತಾಗಿದೆ. ಪ್ರತಿ ದಿನ ಮನೆ ಕೆಲಸ ಕಾರ್ಯ ಬಿಟ್ಟು ನೀರು ಇಡಿಯುವುದೇ ಕೆಲಸವಾಗಿದೆ. 2 ಬಿಂದಿಗೆ ನೀರು ಹಿಡಿದುಕೊಳ್ಳಲು ದಿನಗಟ್ಟಲೇ ಕಾಯುವಂತಹ ಸ್ಥಿತಿ ಉಂಟಾಗಿದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ