ಪರಿಣಾಮಕಾರಿ ವರದಿಗಾರಿಕೆಗೆ ಕಾರ್ಯಾಗಾರಗಳು ಅವಶ್ಯ

ಬಳ್ಳಾರಿ

        ವರದಿಗಾರಿಕೆಗೆ ಎಲ್ಲಾ ರೀತಿಯ ಜ್ಞಾನ ಇರುವುದಿಲ್ಲ. ಯಾವುದೇ ಯೋಜನೆಗಳ ಬಗ್ಗೆ ಪರಿಣಾಮಕಾರಿ ವರದಿಗಾರಿಕೆಗೆ ಇಂತಹ ಕಾರ್ಯಾಗಾರಗಳು ಅವಶ್ಯ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ ಅವರು ಅಭಿಪ್ರಾಯ ಪಟ್ಟರು.

        ಜಿಲ್ಲಾ ಆರೋಗ್ಯ ಇಲಾಖೆಯ ಕಟ್ಟಡದ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಮಟ್ಟದ ವಿವಿಧ ಮಾಧ್ಯಮಗಳ ಪ್ರತಿನಿಧಿಗಳು ಮತ್ತು ವರದಿಗಾರರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಾರ್ಯಕ್ರಮಗಳು ಮತ್ತು ರೋಗ ನಿಯಂತ್ರಣ ಕುರಿತು ಹಮ್ಮಿಕೊಂಡಿದ್ದ ಆರೋಗ್ಯ ಜಾಗೃತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

        ಯಾವುದೇ ಯೋಜನೆಗಳ ಬಗ್ಗೆ ಕೇವಲ ಅಂಕಿ ಸಂಖ್ಯೆಗಳ ಮಾಹಿತಿ ನೀಡದೆ, ಪರಿಪೂರ್ಣ ಜ್ಞಾನದೊಂದಿಗೆ ವರದಿ ನೀಡಿದರೆ ಅದೂ ಸಮಾಜದ ಜನರ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ. ಸಕರಾತ್ಮಕ ಮತ್ತು ನಕರಾತ್ಮಕ ಅಂಶಗಳ ಬಗ್ಗೆಯೂ ವರದಿಗಾರಿಕೆಯಲ್ಲಿ ಸಮಗ್ರ ಮಾಹಿತಿ ಬೇಕು. ಅದಕ್ಕೆ ಇಂತಹ ಕಾರ್ಯಾಗಾರದಲ್ಲಿ ದೊರೆಯಯುವ ಅಂಶಗಳು ಹೆಚ್ಚಿನ ಸಹಕಾರಿಯಾಗಲಿವೆ ಎಂದರು.

       ಆರೋಗ್ಯ ಇಲಾಖೆ ತಮ್ಮ ಇಲಾಖೆ ಅಡಿ ಲಭ್ಯವಿರುವ ವಿವಿಧ ಸೇವೆಗಳ ಕುರಿತು ಕಾರ್ಯಾಗಾರದ ಮೂಲಕ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ತಿಳಿಸಿಕೊಡುತ್ತಿರುವುದು ಅತ್ಯಂತ ಶ್ಲಾಘನೀಯ. ಮುಂದಿನ ದಿನಗಳಲ್ಲಿ ವಿವಿಧ ಇಲಾಖೆಗಳಲ್ಲಿ ಲಭ್ಯವಿರುವ ಸೇವೆಗಳ ಕುರಿತು ಇದೇ ಮಾದರಿಯ ಕಾರ್ಯಾಗಾರಗಳನ್ನು ಮಾಧ್ಯಮದವರಿಗೆ ಆಯೋಜಿಸಲು ಜಿಲ್ಲಾಧಿಕಾರಿಗಳು,ಜಿಪಂ ಸಿಇಒ ಅವರೊಂದಿಗೆ ಚರ್ಚಿಸಿ ಕ್ರಮವಹಿಸಲಾಗುವುದು ಎಂದು ತಿಳಿಸಿದರು.

        ಹಿರಿಯ ಪತ್ರಕರ್ತ ಎಂ.ಅಹಿರಾಜ್ ಅವರು ಮಾತನಾಡಿ. ಇಲಾಖೆಯ ಅಧಿಕಾರಿಗಳು ಏನೇ ಘಟನೆ ನಡೆದಾಗ ವರದಿಗಾರರು ಕೇಳುವ ಮಾಹಿತಿಯನ್ನು ಹಂಚಿಕೊಂಡರೆ ತಪ್ಪು ಮಾಹಿತಿ ಸಮಾಜಕ್ಕೆ ಹೋಗುವುದು ತಪ್ಪುತ್ತದೆ. ಅಲ್ಲದೆ ಸರಕಾರದಿಂದ ಬರುವ ಪ್ರತಿ ಹೊಸ ಯೋಜನೆಗಳ ಬಗ್ಗೆ ಮಾಹಿತಿಯನ್ನು ತಕ್ಷಣ ಹಂಚಿಕೊಳ್ಳಬೇಕು ಎಂದರು.

         ಜಿಲ್ಲಾ ಶಸ್ತ್ರ ಚಿಕಿತ್ಸಕ ಎನ್.ಬಸರೆಡ್ಡಿ ಅವರು ಮಾತನಾಡಿ, ಇಲ್ಲಿನ ಮಾಧ್ಯಮ ಪ್ರತಿನಿಧಿಗಳು ಆರೋಗ್ಯ ಇಲಾಖೆಗೆ ಸದಾ ಸಹಕಾರ ನೀಡುತ್ತಾ ಬಂದಿದ್ದಾರೆ. ಬಹುತೇಕ ವರದಿಗಾರರು ಮೊಬೈಲ್‍ನಲ್ಲಿಯೇ ಬೇಗನೆ ಮಾಹಿತಿ ಪಡೆಯುವ ಪ್ರಯತ್ನ ಆಗುತ್ತಿದೆ. ಆದರೂ ಇಲಾಖೆಯ ಎಲ್ಲಾ ಯೋಜನೆಗಳ ಬಗ್ಗೆ ಅರಿಯಲು ಈ ಕಾರ್ಯಾಗಾರ ಸೂಕ್ತ ಎಂದು ಹೇಳಿದರು.

        ಅಧ್ಯಕ್ಷೆತೆ ವಹಿಸಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶಿವರಾಜ್ ಹೆಡೆ ಅವರು ಮಾತನಾಡಿ ಇಲಾಖೆಯ ಯೋಜನೆಗಳು ಜನರಿಗೆ ಹೆಚ್ಚಿನದಾಗಿ ಮುಟ್ಟಲು ಬರೀ ಇಲಾಖೆಯಿಂದ ಸಾಧ್ಯವಿಲ್ಲ. ಮಾಧ್ಯಮಗಳ ಸಹಕಾರ ಬಹಳ ಮುಖ್ಯ ಎಂದರು. ಇಲಾಖೆಗಳ ಲೋಪಗಳ ಬಗ್ಗೆ ನಮ್ಮ ಗಮನಕ್ಕೆ ತಂದು ತಿದ್ದಿಕೊಳ್ಳಲು ಅವಕಾಶ ನೀಡಿ, ಪದೇ ಪದೇ ತಪ್ಪು ಮಾಡಿದರೇ ಆ ಬಗ್ಗೆ ವಿಸ್ತøತ ವರದಿ ಮಾಡಿ ಎಂದರು.

        ಪ್ರಾಸ್ತಾವಿಕವಾಗಿ ಮಾತನಾಡಿದ ಆರ್.ಸಿ.ಹೆಚ್ ಅಧಿಕಾರಿ ಡಾ.ರವೀಂದ್ರನಾಥ ಅವರು ಪ್ರತಿನಿತ್ಯ ಪ್ರತಿಯೊಬ್ಬರಿಗೆ ಮಾಹಿತಿ ತಕ್ಷಣ ದೊರೆಯುವುದು ಮಾಧ್ಯಮಗಳಿಂದ. ಅದಕ್ಕಾಗಿ ಈ ಮಾಧ್ಯಮಗಳು ಮಾಹಿತಿ ನೀಡುವ ಪ್ರತಿನಿಧಿಗಳಿಗೆ ಇಲಾಖೆಯಿಂದ ಕೈಗೊಂಡ ಯೋಜನೆ ಮತ್ತು ಕ್ರಮಗಳ ಬಗ್ಗೆ ಸೂಕ್ತ ರೀತಿಯಲ್ಲಿ ನೀಡಿದಲ್ಲಿ ಬೇಗನೇ ಜನರಿಗೆ ಸಹಕಾರಿಯಾಗಲಿದೆ. ಅದಕ್ಕಾಗಿ ಈ ಕಾರ್ಯಾಗಾರದ ಮೂಲಕ ವರದಿಗಾರರಿಗೆ ಯಾವುದನ್ನು ಪ್ರಕಟಿಸಬೇಕು, ಯಾವುದನ್ನು ಪ್ರಕಟಿಸುವುದರಿಂದ ಸಮಾಜಕ್ಕೆ ಹಾನಿ ಆಗುತ್ತದೆ ಎಂಬುವುದನ್ನು ಅರಿಯಬೇಕು ಎಂದರು.

        ಸದ್ಯ ಜಿಲ್ಲೆಯ ವಿಮ್ಸ್ ಆಸ್ಪತ್ರೆಯಲ್ಲಿ ಮಾತ್ರ ಅಪೌಷ್ಠಿಕತೆಯಿಂದ ಬಳಲುವ ಮಕ್ಕಳ ಹಾರೈಕೆ ಕೇಂದ್ರವಿದ್ದು,ಇಲ್ಲಿ 14ದಿನಗಳ ಕಾಲ ಚಿಕಿತ್ಸೆ ನೀಡಿತ್ತಿದೆ. ಆ ಸಂದರ್ಭದಲ್ಲಿ ಮಗುವಿನ ಪೋಷಕರಿಗೆ ಪ್ರತಿನಿತ್ಯ 236 ರೂ.ಗಳಂತೆ ಭತ್ಯೆಯನ್ನು 14 ದಿನಗಳವರೆಗೆ ನೀಡಲಿದೆ. ಇಂತಹ ಕೇಂದ್ರಗಳನ್ನು ಜಿಲ್ಲೆಯ ಹಡಗಲಿ ಮತ್ತು ಹೊಸಪೇಟೆ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಆರಂಭಿಸಲು ಉದ್ದೇಶಿಸಿದೆ. ಜಿಲ್ಲೆಯಲ್ಲಿ ತಾಯಂದಿರ ಮರಣ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಸಾವಿರಕ್ಕೆ ಶೇ.70ರಷ್ಟು ನಮ್ಮ ಜಿಲ್ಲೆಯಲ್ಲಿದೆ.

         ಇದು ರಾಜ್ಯದಲ್ಲಿ ಶೇ.108ರಷ್ಟಿದೆ. ದೇಶದಲ್ಲಿ ಶೇ.130 ರಷ್ಟಿದೆ. ಈ ವರ್ಷದಲ್ಲಿ 40 ಸಾವಿರದ 50 ಹೆರಿಗೆಗಳಾಗಿದ್ದು 27 ತಾಯಂದಿರು ಮರಣವನ್ನಪ್ಪಿದ್ದಾರೆ. ಇನ್ನು ಮಕ್ಕಳ ಮರಣ ಪ್ರಮಾಣ ಶೇ.9 ರಷ್ಟಿದ್ದು, ಈವರೆಗೆ 325 ಶಿಶುಗಳು ಸಾವನ್ನಪ್ಪಿವೆ ಎಂದು ತಿಳಿಸಿದರು.

           ವೇದಕೆಯಲ್ಲಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿಯಾದ ಡಾ.ವಿಜಯಲಕ್ಷ್ಮೀ, ಆರೋಗ್ಯ ತರಬೇತಿ ಅಧಿಕಾರಿ ಗುರುನಾಥ್ ಬಿ.ಚೌವಣ್ಹ್, ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಅನಿಲ್ ಕುಮಾರ್, ಹಿರಿಯ ವರದಿಗಾರ ಎನ್.ವೀರಭದ್ರಗೌಡ, ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ನಿಜಾಮುದ್ದೀನ್ ಮತ್ತು ಮಾಧ್ಯಮ ಪ್ರತಿನಿಧಿಗಳು ಹಾಗೂ ಇತರರು ಇದ್ದರು.

           ಆಶಾ ಕಾರ್ಯಕರ್ತೆ ಪಲ್ಲವಿ ಅವರ ಪ್ರಾರ್ಥಿಸಿದರು. ಜಿಲ್ಲಾ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಅವರು ನಿರೂಪಿಸಿದರು. ನಂತರ ಜಿಲ್ಲಾ ಆರ್‍ಸಿಎಚ್ ಅಧಿಕಾರಿ ಡಾ.ರವೀಂದ್ರ ಅವರು ಯೋಜನೆಗಳ ಸಮಗ್ರ ಮಾಹಿತಿಯನ್ನು ಒದಗಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link