ಶಿರಾ
ತಾಲ್ಲೂಕಿನ ದ್ವಾರಾಳು ಗ್ರಾಮದ ಹರ್ಷಿತಾ ಡಿ. ಕೃಷಿ ವಿಶ್ವ ವಿದ್ಯಾನಿಲಯದಲ್ಲಿ ಅಧ್ಯಯನ ಮಾಡುತ್ತಿದ್ದು, ಕೃಷಿ ವಿಜ್ಞಾನ ಕೇಂದ್ರದ ಸ್ನಾತಕೋತ್ತರ ಅಧ್ಯಯನ ಮಂಡಳಿ ಹಾಗೂ ವಿದ್ಯಾ ವಿಷಯಕ ಪರಿಷತ್ತಿನ ಮೇರೆಗೆ ಆಕೆಯು ಮಂಡಿಸಿದ ಪ್ರಬಂಧಕ್ಕೆ ಡಾಕ್ಟರ್ ಆಫ್ ಫಿಲಾಸಫಿ ಪದವಿಯನ್ನು ನೀಡಿ ಗೌರವಿಸಲಾಗಿದೆ.
ಶಿರಾ ತಾ.ದ್ವಾರಾಳು ಗ್ರಾಮದ ಧರಣೇಂದ್ರಕುಮಾರ್ ಮತ್ತು ರಾಜಮ್ಮ ಅವರ ಪುತ್ರಿ ಹಾಗೂ ರಂಗನಾಥ್ ಅವರ ಧರ್ಮಪತ್ನಿಯೂ ಆದ ಹರ್ಷಿತ ಅವರು ಬೆಂಗಳೂರು ಕೃಷಿ ವಿ.ವಿ.ಯಲ್ಲಿ ಸ್ನಾತಕೋತ್ತರ ಪದವಿ ಓದುತ್ತಿದ್ದು, ಜಾರ್ಖಂಡ್‍ನಲ್ಲಿ 2018 ರಲ್ಲಿ ನಡೆದ ಆಹಾರ ಮತ್ತು ಕೃಷಿಯ ಬಗೆಗಿನ ಸಮಾವೇಶದಲ್ಲಿ ಯುವ ವಿಜ್ಞಾನಿ ಎಂಬ ಪ್ರಶಸ್ತಿಗೂ ಭಾಜನರಾಗಿದ್ದರು.
ಕೃಷಿ ವಿಶ್ವ ವಿದ್ಯಾನಿಲಯಕ್ಕೆ ಆಕೆಯು ಮಂಡಿಸಿದ ತುಮಕೂರು ಜಿಲ್ಲೆಯ ಮಹಿಳಾ ಮುಖ್ಯಸ್ಥ ಕುಟುಂಬಗಳ ಕೌಟುಂಬಿಕ ಕೃಷಿ ಸಾಮಥ್ರ್ಯ ಮತ್ತು ಜೀವನೋಪಾಯ ಭದ್ರತೆ ಎಂಬ ವಿಷಯಕ್ಕೆ ಮಾರ್ಚ್ 25 ರಂದು ಬೆಂಗಳೂರಿನಲ್ಲಿ ನಡೆದ 53ನೇ ಘಟಿಕೋತ್ಸವದಲ್ಲಿ ಡಾಕ್ಟರೇಟ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.