ಕುಣಿಗಲ್
ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ವಿಜೃಂಭಣೆಯಿಂದ ಶ್ರೀ ರಾಮನವಮಿಯನ್ನು ಸಹಸ್ರಾರು ಜನರಿಗೆ ತಮ್ಮ ತಮ್ಮ ದೇವಾಲಯಗಳ ಬಳಿ ಬಿಸಿಲಿನ ತಾಪದ ದಣಿವು ನೀಗಿಸಲು ಪಾನಕ,ಮಜ್ಜಿಗೆ, ಕೋಸಂಬರಿಯನ್ನು ವಿತರಿಸಿ ಸಂಭ್ರಮದಿಂದ ಆಚರಿಸಲಾಯಿತು.
ಶ್ರೀ ಆಂಜನೇಯಸ್ವಾಮಿ ವಿಗ್ರಹಗಳಿಗೆ ಬೆಣ್ಣೆ ಅಲಂಕಾರ ಮತ್ತು ಹೂವಿನ ಅಲಂಕಾರ ಸೇರಿದಂತೆ ವಿವಿಧ ರೀತಿಯ ಅಲಂಕಾರವನ್ನು ಮಾಡಲಾಗಿತ್ತು. ಐತಿಹಾಸಿಕ ಪ್ರಸಿದ್ಧ ಕೋಟೆ ಶ್ರೀ ವೀರಾಂಜನೇಯಸ್ವಾಮಿ ದೇವಾಲಯ ಸೇರಿದಂತೆ ಖಾಸಗಿ ಬಸ್ ನಿಲ್ದಾಣದ ಪರ್ವತಾಂಜನೇಯಸ್ವಾಮಿ, ದೊಡ್ಡಪೇಟೆಯ ಶ್ರೀ ತುಪ್ಪದಾಂಜನೇಯಸ್ವಾಮಿ, ರಮಣಾಬ್ಲಾಕ್‍ನ ಶ್ರೀ ಕೋದಂಡರಾಮಸ್ವಾಮಿ ದೇವಾಲಯ ಶ್ರೀ ಚಾವಡಿಗಣಪತಿದೇವಾಲಯ, ಶ್ರೀ ಪಂಚಮುಖಿ ಆಂಜನೇಯಸ್ವಾಮಿ, ಪಿಡಬ್ಲ್ಯೂಡಿ ಶ್ರೀ ಬಾಲಾಂಜನೇಯಸ್ವಾಮಿ, ಶ್ರೀ ಪಂಚವಟಿ ಶ್ರೀ ಆಂಜನೇಯಸ್ವಾಮಿ, ತಾವರೇಕೆರೆ ಶ್ರೀ ವರದಾಂಜನೇಯಸ್ವಾಮಿ, ಎಡೆಯೂರು ಶ್ರೀ ಆಂಜನೇಯಸ್ವಾಮಿ ದೇವಾಲಯ, ಅಮೃತೂರು ವೀರಾಂಜನೇಯಸ್ವಾಮಿ ದೇವಾಲಯ ಹಾಗೂ ಹುಲಿಯೂರುದುರ್ಗದ ಅಭಯಾಂಜನೇಯಸ್ವಾಮಿ ದೇವಾಲಯ ಸೇರಿದಂತೆ ತಾಲ್ಲೂಕಿನಾದ್ಯಂತ ಶ್ರೀ ರಾಮನವಮಿಯನ್ನು ಶ್ರೀ ಆಂಜನೇಯಸ್ವಾಮಿ ದೇವಾಲಯ , ಶ್ರೀ ರಾಮ ಮಂದಿರದಲ್ಲಿ ಹಾಗೂ ಗಣಪತಿ ದೇವಾಲಯಗಳಲ್ಲಿ ಆಚರಿಸುವ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
