ಚಿತ್ರದುರ್ಗ:
ಸ್ಪರ್ಧಾತ್ಮಕಕಾಲದಲ್ಲಿರುವ ನಾವು ಪ್ರತಿಕ್ಷಣವೂಆತಂಕದಿಂದಜೀವನ ಸಾಗಿಸಬೇಕಾದ ಪರಿಸ್ಥಿತಿಗಳಿದ್ದು, ಅವುಗಳ ಮಧ್ಯೆಯೂ ವಿದ್ಯಾರ್ಥಿಯುವಜನರು ಸಾಂಸ್ಕೃತಿಕವಾಗಿ ಬದುಕು ಕಟ್ಟಿಕೊಳ್ಳುವಂತಹ ಪ್ರಯತ್ನ ನಡೆಸಬೇಕುಎಂದು ಶರಣ ಸಾಹಿತ್ಯ ಪರಿಷತ್ತಿನಅಧ್ಯಕ್ಷ ಕೆ.ಎಂ. ವೀರೇಶ್‍ಅಭಿಪ್ರಾಯ ಪಟ್ಟರು.
ಬಾಪೂಜಿ ಸಮೂಹ ಸಂಸ್ಥೆಗಳ ಕಾಲೇಜಿನಲ್ಲಿ ವಿಮುಕ್ತಿ ವಿದ್ಯಾಸಂಸ್ಥೆ, ಅರಳಿ ಯುವ ಸಂಸ್ಥೆ ವತಿಯಿಂದಏರ್ಪಡಿಸಲಾಗಿದ್ದ ವಿದ್ಯಾರ್ಥಿಗಳಿಗೆ ಚರ್ಚಾ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಕವಿಗೋಷ್ಠಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.ಪ್ರತಿಯೊಂದುಕ್ಷೇತ್ರದಲ್ಲೂ ಸ್ಪರ್ಧೆಏರ್ಪಡುತ್ತಿದ್ದು, ಇಂತಹಕಾಲಘಟ್ಟದಲ್ಲಿ ವಿದ್ಯಾರ್ಥಿಯುವಜನರು ಸಾಹಿತ್ಯ, ಬರಹ, ಕವಿತೆಗಳನ್ನು ರಚಿಸುವ ಮೂಲಕ ಸಾಂಸ್ಕೃತಿಕವಾಗಿತಮ್ಮ ಬದುಕನ್ನುಕಟ್ಟಿಕೊಂಡರೇ ನೆಮ್ಮದಿಯಾಗಿಇರಬಹುದೆಂದು ವಿರೇಶ್ ಹೇಳಿದರು.
ಕವಿಯಿತ್ರಿ ಶ್ರೀಮತಿ ಡಾ|| ಶೀತಲ್ ಪ್ರಶಾಂತ್‍ಅವರು ಮಾತನಾಡಿ, ಮನುಷ್ಯನ ಬದುಕಿನಲ್ಲಿ ನೆಮ್ಮದಿ ಕಂಡುಕೊಳ್ಳಬೇಕೆಂದರೆ ಸಾಹಿತ್ಯ ಮತ್ತು ಕವನಗಳ ರಚನೆಯ ಮೂಲಕ ಸಾಧ್ಯವಿದ್ದು, ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ಪ್ರಯತ್ನಿಸಬೇಕುಎಂದು ಹೇಳಿದರು.
ಕರ್ನಾಟಕರಾಜ್ಯರೈತ ಸಂಘದ ಪ್ರಧಾನ ಕಾರ್ಯದರ್ಶಿ ಈಚಗಟ್ಟದ ಸಿದ್ಧವೀರಪ್ಪ ಮಾತನಾಡಿ, ಸಾಂಪ್ರದಾಯಿಕ ಮತ್ತುಆಧುನಿಕಕೃಷಿಯಲ್ಲಿ ಸಾಕಷ್ಟು ಬದಲಾವಣೆಗಳಿದ್ದು, ಆಧುನಿಕಕೃಷಿಯ ಮೂಲಕ ಕೃಷಿ ಉತ್ಪನ್ನಗಳನ್ನು ಅತಿ ಹೆಚ್ಚು ಬೆಳೆಯುವ ಮೂಲಕ ಜನರ ಬೇಡಿಕೆಗೆಅನುಗುಣವಾಗಿ ಕೃಷಿ ಬೆಳೆಗಳ ಇಳುವರಿಯನ್ನು ಪಡೆದುಕೊಳ್ಳಲಾಗಿದೆ ಎಂದರು.
ಸಾಂಪ್ರಾದಾಯಿಕ ಕೃಷಿ ಕೈಗೊಳ್ಳುವಾಗ ಕೃಷಿ ಉತ್ಪನ್ನಗಳ ಕೊರತೆಯಿಂದ ವಿದೇಶಗಳಿಂದ ದವಸ ಧಾನ್ಯಗಳನ್ನು ಆಮದುಮಾಡಿಕೊಳ್ಳುತ್ತಿದ್ದ ದಿನಗಳಿದ್ದವು.ನಂತರದಕಾಲಘಟ್ಟದಲ್ಲಿ ಕೃಷಿ ಉತ್ಪನ್ನಗಳನ್ನು ಅತಿ ಹೆಚ್ಚು ಬೆಳೆಯುವ ಮೂಲಕ ಜನರಅಗತ್ಯಕ್ಕೆಅನುಗುಣವಾಗಿ ಬೆಳೆಯಲಾಗುತ್ತಿದೆ ಎಂದರು.
ವಿಮುಕ್ತಿ ವಿದ್ಯಾಸಂಸ್ಥೆಯ ನಿರ್ದೇಶಕಆರ್. ವಿಶ್ವಸಾಗರ್ ಮಾತನಾಡಿ, ವಿದ್ಯಾರ್ಥಿಯುವಜನರಲ್ಲಿ ಸಾಹಿತ್ಯಾಸಕ್ತಿ ಮತ್ತು ಸಾಂಸ್ಕತಿಕ ವಾತಾವರಣದ ಬಗ್ಗೆ ಪರಿಚಯಿಸುವಉದ್ದೇಶದಿಂದಚರ್ಚಾ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಕವಿಗೋಷ್ಠಿಗಳನ್ನು ನಡೆಸುವ ಮೂಲಕ ವಿದ್ಯಾರ್ಥಿಯುವಜನರಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸುವುದೇ ಈ ಕಾರ್ಯಕ್ರಮದಉದ್ದೇಶವಾಗಿದೆಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಾಹಿತಿ ಕೆ. ಷರಿಫಾಬಿ, ಜನಪರ ಹೋರಾಟಗಾರ ನರೇನಹಳ್ಳಿ ಅರುಣ್‍ಕುಮಾರ್ ಕರ್ನಾಟಕರಾಜ್ಯರೈತ ಸಂಘದಜಿಲ್ಲಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ, ಪಾಪಣ್ಣ, ವಿಮುಕ್ತಿ ವಿದ್ಯಾಸಂಸ್ಥೆಯ ಶ್ರೀಮತಿ ಅನ್ನಪೂರ್ಣ ವಿಶ್ವಸಾಗರ್, ಪ್ರೋ.ಪರಮೇಶ್ವರಪ್ಪ, ಅರಳಿ ಸಂಸ್ಥೆಯ ಹೊಳೆಯಪ್ಪ, ಪಾಟೀಲ್, ಗುರುರಾಜು, ಕುಮಾರ್, ಮುಂತಾದವರು ಉಪಸ್ಥಿತರಿದ್ದರು.