ಮುಂಬೈ:
ಜಾಗತಿಕ ಪ್ರಮುಖ ಷೇರು ಮಾರುಕಟ್ಟೆಗಳಲ್ಲಿ ಒಂದಾದ ಭಾರತದ ಸೆಸೆಕ್ಸ್ ಇಂದು ಮುಂಜಾನೆಯಿಂದ ಆದ ಧನಾತ್ಮಕತೆ ಮತ್ತು ಹೆಚ್ಚಿದ ವಿದೇಶೀ ಬಂಡವಾಳದ ಒಳ ಹರಿವಿನ ಕಾರಣದಿಂದ ಷೇರು ಪೇಟೆ ಇಂದು ಆರಂಭಿಕ ವಹಿವಾಟಿನಲ್ಲಿಯೇ 200ಕ್ಕೂ ಅಧಿಕ ಅಂಶಗಳ ಜಿಗಿತ ಕಂಡಿದೆ.
ರಾಷ್ಟ್ರೀಯ ಷೇರು ಮಾರುಕಟ್ಟೆ ನಿಫ್ಟಿ ಸೂಚ್ಯಂಕ 11,600 ಅಂಶಗಳ ಗಡಿಯನ್ನು ದಾಟಿ ಮುನ್ನುಗ್ಗುವಲ್ಲಿ ಸಫಲವಾಗಿದೆ .
ಮಧ್ಯಾಹ್ನ 1.45ರ ಸುಮಾರಿಗೆ ಸೆನ್ಸೆಕ್ಸ್ 66.79 ಅಂಕಗಳ ಮುನ್ನಡೆ ಕಾಯ್ದುಕೊಂಡು 38,665.51 ಅಂಕಗಳ ಮಟ್ಟದಲ್ಲಿದೆ ಮತ್ತು ನಿಫ್ಟಿ 18.30 ಅಂಕಗಳ ಮುನ್ನಡೆಯನ್ನು ಉಳಿಸಿಕೊಂಡು 11,608.35 ಅಂಕಗಳನ್ನು ಮಟ್ಟಿದ್ದು ವ್ಯವಹಾರ ಮುಂದುವರೆಸಿವೆ .
ಆರಂಭಿಕ ವಹಿವಾಟಿನಲ್ಲಿ ಎಸ್ ಬ್ಯಾಂಕ್, ಮಾರುತಿ ಸುಜುಕಿ, ಎಸ್‌ಬಿಐ, ರಿಲಯನ್ಸ್, ಟಿಸಿಎಸ್‌ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳು : ವೇದಾಂತ, ಎಚ್‌ಪಿಸಿಎಲ್, ಜೆಎಸ್‌ಡಬ್ಲ್ಯು ಸ್ಟೀಲ್, ಟಾಟಾ ಸ್ಟೀಲ್, ಟಾಟಾ ಮೋಟರ್; ಟಾಪ್ ಲೂಸರ್‌ಗಳು : ಇಂಡಸ್ ಇಂಡ್ ಬ್ಯಾಂಕ್, ಟೈಟಾನ್ ಕಂಪೆನಿ, ಗೇಲ್, ಈಶರ್ ಮೋಟರ್, ಬಜಾಜ್ ಆಟೋ.