ಹಗರಿಬೊಮ್ಮನಹಳ್ಳಿ
ತಾಲೂಕಿನಲ್ಲಿ ಪ್ರಾಗೈತಿಹಾಸಿಕ ಕಾಲದಿಂದಲೂ ಜನವಸತಿ ವಾಸವಾಗಿತ್ತು ಎನ್ನುವುದಕ್ಕೆ ತಾಲೂಕಿನಲ್ಲಿ ಪತ್ತೆ ಹಚ್ಚಲಾದ ನೂತನ ಶಿಲಾ ಸಂಸ್ಕøತಿಯ ನೆಲೆಗಳು ಸಾಕ್ಷಿ ಒದಗಿಸುತ್ತವೆ ಎಂದು ಹೂವಿನಹಡಗಲಿ ಎಸ್.ಆರ್.ಎಂ.ಪಿ.ಪಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ಸಹಾಯಕ ಪ್ರಾಧ್ಯಾಪಕರಾದ ಡಾ.ಕೆ.ಸತೀಶ್ ತಿಳಿಸಿದರು.
ಪಟ್ಟಣದ ಜಿ.ವಿ.ಪಿ.ಪಿ.ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಇತಿಹಾಸ ಪರಂಪರೆ ಕೂಟದ ಉಪನ್ಯಾಸ ಮಾಲಿಕೆಯಲ್ಲಿ ವಿಶೇಷ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ದೇಶದ ಇತಿಹಾಸದ ಜೊತೆಯಲ್ಲಿ ವಿದ್ಯಾರ್ಥಿಗಳು, ಸ್ಥಳೀಯ ಇತಿಹಾಸವನ್ನುಕೂಡ ಅರಿಯುವ ಕೆಲಸ ಮಾಡಬೇಕಿದೆ, ಆ ಮೂಲಕ ನಮ್ಮ ಪರಂಪರೆಯುನ್ನು ಅರಿಯುವ ಕೆಲಸ ಮಾಡಬೇಕು. ಕಣ್ಣಿಗೆ ಕಾಣುವ ನಮ್ಮ ಪರಂಪರೆ ಕೋಗಳಿ, ಬಾಗಳಿ, ಮೋರಿಗೇರಿಗಳಲ್ಲಿ ಮೂರ್ತ ಪರಂಪರೆ ಕೇಂದ್ರಗಳನ್ನು ಕಾಣುತ್ತೇವೆ. ಸಾಹಿತ್ಯದ ಮತ್ತು ಮೌಖಿಕ ಆಕರಗಳನ್ನು ಅಮೂರ್ತ ಪರಂಪರೆ ಎಂದು ಕರೆಯುತ್ತಾರೆ.
ಇವು ಸಹ ಸ್ಥಳೀಯ ಇತಿಹಾಸವನ್ನು ಅರಿಯುವ ಪ್ರಮುಖ ಅಂಶಗಳಾಗಿವೆ ಎಂದರು. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಅಧ್ಯಾಯನ ಮಾಡಬೇಕು ಎಂದು ಕರೆ ನೀಡಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ.ಗುರುರಾಜ.ಎ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಕಾಲೇಜಿನ ಬೋಧಕ ಸಿಬ್ಬಂದಿಗಳಾದ ಎ.ಎಂ.ಚಂದ್ರಮೌಳಿ, ಡಾ.ಡಿ.ಬಿ.ಜ್ಯೋತಿ, ಡಾ.ಹರಾಳು ಬುಳ್ಳಪ್ಪ, ಆರ್.ಅಣ್ಣೋಜಿರೆಡ್ಡಿ, ಗೊಂಚಿಗಾರ ತಿಪ್ಪೇಸ್ವಾಮಿ, ಡಾ.ಜಿ.ವೀರೇಶ್ವರನಾಯ್ಕ, ಡಾ.ಎಂ.ಮಲ್ಲಿಕಾರ್ಜುನ, ವಸಂತಕುಮಾರ, ಎಚ್.ಎಂ.ಬಸವರಾಜ, ಪ್ರೀತಿ, ಸಂಧ್ಯಾ, ಎಸ್.ಗಜೇಂದ್ರಿ ಮತ್ತು ಬೋಧಕೇತರ ಸಿಬ್ಬಂದಿಗಳಾದ ಸಿ.ಎಂ.ಶ್ರೀನಿವಾಸ, ಬಿ.ಸುರೇಶ್ ಇತರರು ಉಪಸ್ಥಿತರಿದ್ದರು.
ಕಾಲೇಜ್ ವಿದ್ಯಾರ್ಥಿನಿ ಶಿಲ್ಪಾ ಪ್ರಾರ್ಥಿಸಿದರು. ಪ್ರಾಧ್ಯಾಪಕ ಎಚ್.ಈಶಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕರಾದ ಎಸ್.ಎಂ.ಸುಬ್ಬಯ್ಯ, ಪಿ.ಶಾಂತಮ್ಮ, ಟಿ.ಜಗದೀಶ ನಿರ್ವಹಿಸಿದರು.