ಹರಪನಹಳ್ಳಿ :

ಗ್ರಾಕೂಸ್ ಸಂಘಟನೆ ನೇತೃತ್ವದಲ್ಲಿ ತಾಲೂಕಿನ ಕಣಿವಿಹಳ್ಳಿಯ ಮಹಿಳೆಯುರು ಮಧ್ಯ ನಿಷೇಧಿಸಲು ರಾಜಕೀಯ ಪಕ್ಷದ ಮುಖಂಡರಿಗೆ ಅಂಚೆಪತ್ರ ಬರೆದಿದ್ದಾರೆ.ಮುಖ್ಯಮಂತ್ರಿ ಕುಮಾರಸ್ವಾಮಿ, ರಾಜಕೀಯ ಪಕ್ಷಗಳಾದ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೆಗೌಡ, ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದು ಸಂಪೂರ್ಣವಾಗಿ ಮಧ್ಯಪಾನ ನಿಷೇಧಿಸಿ ಎಂದು ಆಗ್ರಹಿಸಿದ್ದಾರೆ.
ಕಳೆದ ಮೂರ್ನಾಲ್ಕು ವರ್ಷಗಳಿಂದ ಗ್ರಾಕೂಸ್ ಸಂಸ್ಥೆ ಮಧ್ಯ ನಿಷೇಧಕ್ಕಾಗಿ ಹೋರಾಟ ಆರಂಭಿಸಿದೆ. ಜ.19 ರಿಂದ ಜ.30ರ ವರೆಗೆ ನಡೆದ 12 ದಿನದ ಪಾದಯಾತ್ರೆಯ ಮೂಲಕ ಸರ್ಕಾರಕ್ಕೂ ಹಕ್ಕೊತ್ತಾಯ ಮಂಡಿಸಲಾಗಿತ್ತು. ಆದರೆ ಸರ್ಕಾರ ಮಾತ್ರ ನೂರಾರು ಮಹಿಳೆಯರ ಮನವಿ ಸ್ವೀಕರಿಸಿ ಕಣ್ಮುಚ್ಚಿ ಕುಳಿತಿದೆ. 3 ಸಾವಿರ ಮಹಿಳೆಯರ ಬೇಡಿಕೆ ಈಡೇರಿಸದೇ, ಅವರ ಮನವಿಗೆ ಪ್ರತಿಕ್ರಿಯೆಯನ್ನು ಸಹ ನೀಡಿಲ್ಲ ಎಂದು ಪತ್ರದಲ್ಲಿ ದೂರಲಾಗಿದೆ.
ಎಲ್ಲ ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಸಂಪೂರ್ಣ ಮಧ್ಯ ನಿಷೇಧ ಮಾಡುತ್ತೇವೆ ಎಂದು ಘೋಷಣೆ ಮಾಡಬೇಕು. ಇಲ್ಲವಾದಲ್ಲಿ ನಮ್ಮ ಮತವನ್ನು ಯಾರಿಗೂ ಹಾಕುವುದಿಲ್ಲ ಎಂದು ಎಚ್ಚರಿಕೆ ಸಂದೇಶ ಪತ್ರದಲ್ಲಿದೆ.ಸಂಯೋಜಕಿ ಭಾಗ್ಯ, ಶಶಿಕಲಾ, ನೀಲಮ್ಮ, ಪ್ರಿಯಾಂಕ, ಗಂಗಮ್ಮ, ಮಂಗಳಗೌಡಿ, ರೇಖಾ, ಹನುಮಮ್ಮ, ಬಸಮ್ಮ, ಪುಷ್ಪ, ಜ್ಯೋತಿ ಇತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








