5 ತುಲ ಬಂಗಾರ ಎಗರಿಸಿದ ಕಳ್ಳರು

ಪಾವಗಡ

       ಮೂವರು ಆಗಂತುಕರು ಹಾಡಹಗಲೆ ಜನಸಂದಣಿ ಇರುವ ಸ್ಥಳದಲ್ಲಿ ಮಹಿಳೆಗೆ ಮೋಸವೆಸಗಿ 5 ತೊಲ ಬಂಗಾರ ಎಗರಿಸಿ, ಕಲ್ಲಿನ ಪಟ್ಟಣ ಕೊಟ್ಟು, ಪರಾರಿಯಾದ ಪ್ರಕರಣ ಪಟ್ಟಣದ ಶಿರಾರಸ್ತೆಯ ಮಾರ್ಗದ ಜಯಂತಿ ನರ್ಸಿಂಗ್ ಹೋಂ ಮುಂಭಾಗ ಶುಕ್ರವಾರ ಬೆಳಿಗ್ಗೆ 10 ಘಂಟೆಗೆ ಜರುಗಿದೆ.

      ತಾಲ್ಲೂಕಿನ ಹರಿಹರಪುರ ಗ್ರಾಮದ ಲಕ್ಷ್ಮಮ್ಮ (60 ವರ್ಷ) ಮೋಸಹೊದ ಮಹಿಳೆಯಾಗಿದ್ದು, 1.50 ಸಾವಿರ ಮೌಲ್ಯದ ಬಂಗಾರ ಕಳೆದುಕೊಂಡಿದ್ದಾರೆ.

       ಘಟನೆ ನಡೆದದ್ದು ಹೇಗೆ : ಶನಿವಾರ ಕೆಲಸದ ನಿಮಿತ್ತ ಲಕ್ಷ್ಮಮ್ಮ ಪಟ್ಟಣಕ್ಕೆ ಬಂದಿದ್ದು, ಘಟನೆ ನಡೆದ ಸ್ಥಳದಲ್ಲಿ ಮೂವರು ಅಪರಿಚಿತರು ಮಹಿಳೆ ಬಳಿ ಬಂದು, ಬಂಗಾರವನ್ನು ಕದಿಯುವ ಕಳ್ಳರಿದ್ದು ಬೆಳಿಗ್ಗೆ ಮಹಿಳೆಯೊಬ್ಬಳ ಸರ ಕದ್ದಿದ್ದಾರೆ ನಿನ್ನ ಸರವನ್ನು ಕದಿಯುತ್ತಾರೆ ಎಂದು ತಿಳಿಸಿ ಮಹಿಳೆಯ ಕತ್ತಿನಲ್ಲಿರುವ ಚಿನ್ನದ ಸರ ಮತ್ತು ಕೈಯಲ್ಲಿರುವ ಉಂಗುರವನ್ನು ತೆಗೆಸಿ ಕಾಗದದ ಪಟ್ಟಣದಲ್ಲಿ ಸುತ್ತಿ ಮಹಿಳೆಗೆ ಕೊಟ್ಟು ಪರಾರಿಯಾಗಿದ್ದಾರೆ. ತಕ್ಷಣ ಮಹಿಳೆ ಕಾಗದ ಬಿಚ್ಚಿ ನೋಡಿದಾಗ ಕಲ್ಲಿನ ಚೂರುಗಳಿದ್ದು ತಾನು ಮೋಸವಾಗಿರುವ ವಿಷಯ ಗೊತ್ತಾಗಿದೆ.ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪಾವಗಡ ಠಾಣಾ ಎಸ್.ಐ. ಮಧುಸೂಧನ್ ಆಗಮಿಸಿ ಮಾಹಿತಿಯನ್ನು ಕಲೆಹಾಕಿದ್ದಾರೆ.

ಇರಾನಿ ಗ್ಯಾಂಗ್ ಬೆಚ್ಚಿಬಿದ್ದ ಪಾವಗಡದ ಜನತೆ:

       ಮೊನ್ನೆಯಷ್ಟೆ ಹಾಡಹಗಲಿನಲ್ಲಿ ಮಹಿಳೆಯನ್ನು ಕೊಚ್ಚಿಕೊಲೆಮಾಡಲಾಗಿತ್ತು. ಕಳೆದವಾರ ಶಿರಾ ರಸ್ತೆಯ ಮಾರ್ಗದ ನಾಗರಕಟ್ಟೆಬಳಿ ಐದು ಜನ ಆಗಂತುಕರು, ವ್ಯಾಪಾರಿಯೊಬ್ಬರು, ದ್ವಿಚಕ್ರವಾಹನದಲ್ಲಿಟ್ಟಿದ್ದ 50 ಸಾವಿರಗಳನ್ನು ಎಗರಿಸಿದ್ದರು. ಶುಕ್ರವಾರ ಬೆಳಿಗ್ಗೆ ಈ ಕಳ್ಳತನ ನಡೆದಿರುವುದರಿಂದ ಪಾವಗಡದ ಸಾರ್ವಜನಿಕರು ಭಯದ ಭೀತಿಯಲ್ಲಿದ್ದಾರೆ.

        ಆಂಧ್ರದ ಇರಾನಿ ಗ್ಯಾಂಗ್ ಪಾವಗಡಕ್ಕೆ ಪ್ರವೇಶಿಸಿದ್ದು, ಕಳೆದೆರಡು ವರ್ಷಗಳ ಹಿಂದೆ ಈ ಗ್ಯಾಂಗ್ ಪಾವಗಡ ಪಟ್ಟಣದ ಸುಮಾರು 15 ಮಹಿಳೆಯರ ಚಿನ್ನದ ಸರಗಳನ್ನು ಕದ್ದು ಪರಾರಿಯಾಗಿದ್ದರು. ಆದರೆ ಪೊಲೀಸರು ಈ ಗ್ಯಾಂಗ್‍ನ್ನು ಪತ್ತೆ ಮಾಡುವಲ್ಲಿ ವಿಫಲರಾಗಿದ್ದರು. ಮತ್ತೆ ಇದೇ ತಂಡ ಪಾವಗಡಕ್ಕೆ ನುಸುಳಿದ್ದು, ಚಾಕಚಕ್ಯತೆಯಿಂದ ಮಹಿಳೆಯರ ಬಳಿ ಇರುವ ಚಿನ್ನದ ಸರಗಳನ್ನು ಕದ್ದು ಕ್ಷಣಾರ್ಧದಲ್ಲಿ ಪರಾರಿಯಾಗುತ್ತಿದ್ದು, ಕೂಡಲೆ ಪಾವಗಡ ಪೊಲೀಸರು ಈ ತಂಡವನ್ನು ಮಟ್ಟಹಾಕಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link