ನವದೆಹಲಿ 
1984ರ ಸಿಖ್ ವಿರೋಧಿ ಗಲಭೆಗಳಿಗೆ ಸಂಬಂಧಿಸಿದ 186 ಪ್ರಕರಣಗಳ ತನಿಖೆಯನ್ನು ಪೂರ್ಣಗೊಳಿಸಲು ವಿಶೇಷ ತನಿಖಾ ತಂಡಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ಇನ್ನೂ ಎರಡು ತಿಂಗಳ ಕಾಲವಕಾಶ ಮಂಜೂರು ಮಾಡಿದೆ.ಇದುವರೆಗೆ ಶೇ.50ರಷ್ಟು ಮುಗಿಸಲಾಗಿದ್ದು, ಎಲ್ಲ ಪ್ರಕರಣಗಳ ತನಿಖಾ ಕಾರ್ಯವನ್ನು ಪೂರ್ಣಗೊಳಿಸಲು ಎರಡು ತಿಂಗಳಿಗೂ ಹೆಚ್ಚು ಅವಧಿಯ ಅಗತ್ಯವಿದೆ ಎಂದು ವಿಶೇಷ ತನಿಖಾ ತಂಡ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳಾದ ಎಸ್.ಎ.ಬೋಬ್ಡೆ ಹಾಗೂ ಎಸ್.ಅಬ್ದುಲ್ ನಜೀರ್ ಅವರೊನ್ನಳಗೊಂಡ ನ್ಯಾಯಪೀಠ ಅವಧಿಯನ್ನು ಹೆಚ್ಚಿಸಿದೆ.
ಈ ಹಿಂದೆ ತನಿಖೆ ಮಗಿದಿದೆ ಎಂದು ಸಮಾಪ್ತಿ ವರದಿ ಸಲ್ಲಿಸಿದ್ದ 186 ಗಲಭೆ ಪ್ರಕರಣಗಳ ಮರು ತನಿಖೆಯ ಮೇಲುಸ್ತವಾರಿ ವಹಿಸಲು ಸುಪ್ರೀಂಕೋರ್ಟ್ ಕಳೆದ ಜನವರಿ 11ರಂದು ವಿಶೇಷ ತನಿಖಾ ತಂಡವನ್ನು ರಚಿಸಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








