ಹಾವೇರಿ
ಮತದಾರರ ಜಾಗೃತಿಗಾಗಿ ರಾಣಿಬೆನ್ನೂರ ನಗರದಲ್ಲಿ ಭಾನುವಾರ ಆಯೋಜಿಸಲಾದ ವನಿತೆಯರಿಂದ ಸ್ಕೂಟರ್ ರ್ಯಾಲಿ ಹಾಗೂ ಪುರುಷರಿಂದ ಬೈಕ್ ರ್ಯಾಲಿ ಸಾರ್ವಜನಿಕರ ಗಮನ ಸೆಳೆಯಿತು. ತಾಲೂಕಾ ಸ್ವೀಪ್ ಸಮಿತಿ ವತಿಯಿಂದ ಆಯೋಜಿಸಲಾದ ಬೈಕ್ ರ್ಯಾಲಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಕೆ.ಲೀಲಾವತಿ ಅವರು ಚಾಲನೆ ನೀಡಿದರು. ಇದೇ ಸಂದರ್ಭಧಲ್ಲಿ ಮತದಾನ ಜಾಗೃತಿ ಕುರಿತಂತೆ ಅರಿವು ಮುಡಿಸಿದರು.
ಅತ್ಯಂತ ಶಿಸ್ತುಬದ್ಧವಾಗಿ ಹೆಲ್ಮೆಟ್ ಧರಿಸಿದ ಸವಾರರು, ಮತದಾನ ಮಾಡಿ, ಪ್ರಜಾಪ್ರಭುತ್ವ ಗೆಲ್ಲಿಸಿ, ಆಸೆ-ಆಮಿಷಗಳಿಗೆ ಮರುಳಾಗಬೇಡಿ ಎಂಬ ವಿವಿಧ ಘೋಷಣೆಗಳನ್ನು ಕೂಗುತ್ತ ಬೈಕ್ ಸಂಚಾರ ನಡೆಸಿದರು,ಪೋಲಿಸ್ ಇಲಾಖೆ ಸಿಬ್ಬಂದಿ ಸೇರಿದಂತೆ ವಿವಿಧ ಅಧಿಕಾರಿಗಳು ಹಾಗೂ ಸಾರ್ವಜನಿಕರು ಬೈಕ್ ರ್ಯಾಲಿಯಲ್ಲಿ ಭಾಗವಹಿಸಿದ್ದರು. ರಾಣಿಬೆನ್ನೂರ ತಹಶೀಲ್ದಾರ ಕುಲಕರ್ಣಿ, ಇತರ ಅಧಿಕಾರಿಗಳು ಭಾಗವಹಿಸಿದ್ದರು.
ವನಿತೆಯರಿಂದ ಸ್ಕೂಟರ್ ರ್ಯಾಲಿ : ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಹಯೋಗದಲ್ಲಿ ಸ್ವೀಪ್ ಸಮಿತಿ ವತಿಯಿಂದ ಆಯೋಜಿಸಲಾದ ಮಹಿಳೆಯರ ಸ್ಕೂಟರ್ ರ್ಯಾಲಿ ಎಲ್ಲರ ಗಮನ ಸೆಳೆಯಿತು.ಭಾನುವಾರ ಜರುಗಿದ ಸಂತೆ ಹಾಗೂ ನಗರದ ದಟ್ಟಣೆಯಲ್ಲಿ ಸಾರ್ವಜನಿಕರಿಗೆ ಮತ ಚಲಾಯಿಸುವಂತೆ ಸ್ಕೂಟರ್ ಚಾಲಿತ ಮಹಿಳೆಯರು ಮನವಿ ಮಾಡಿಕೊಂಡರು.