ಹಂಪ್ಸ್ ಗಳಿಂದಲೇ ಅಪಘಾತ ಹೆಚ್ಚಳ

ತಿಪಟೂರು

       ನಗರದಲ್ಲಿ ಹೆಚ್ಚುತ್ತಿರುವ ಅಪಘಾತಗಳನ್ನು ತಪ್ಪಿಸುವ ಉದ್ದೇಶದಿಂದ ದಿನಾಂಕ 09-03 -2019ರ ರಾತ್ರೋರಾತ್ರಿ ಹಂಪ್ಸ್‍ಗಳನ್ನು ಹಾಕಿದ್ದರು ಇದನ್ನುಕಂಡ ಸ್ಥಳೀಯರು ಸ್ವಲ್ಪ ಸಮಾಧಾನಗೊಂಡರು. ಆದರೆ ಇವುಗಳನ್ನು ಹಾಕಿದ ಒಂದು ವಾರಕ್ಕೆ ಇದರ ಕಳಪೆಕಾಮಗಾರಿಯನ್ನು ಕಂಡ ಜನರು ಈಗ ಪರಿತಪಿಸುವಂತಾಗಿದೆ.

        ಹಂಪ್ಸ್‍ಗಳಿರುವ ಬಗ್ಗೆ ಯಾವುದೇ ಸೂಚನಾಫಲಕಗಳಿಲ್ಲದೇ ಜನರ ಸೊಂಟಮುರಿತ : ಹಂಪ್ಸ್‍ಗಳನ್ನು ಅವೈಜ್ಞಾನಿಕವಾಗಿ ಹಾಕಲಾಗಿದ್ದು ಅವುಗಳ ಪಕ್ಕದಲ್ಲಿ ಹಾಕಲಾಗಿದ್ದ ರಿಫ್ಲೆಕ್ಟರ್‍ಗಳು ಹಾಕಿದ ಒಂದುವಾರ ಕಳೆಯುವದಕ್ಕೆ ಮೊದಲೇ ಹಾಳಾಗಿ ಅವುಗಳು ಗೋಚರಿಸುತ್ತಿಲ್ಲ ಇದರಿಂದ ರಾತ್ರಿ ಸಮಯದಲ್ಲಿ ಸಂಚರಿಸುವ ವಾಹನಗಳಿಗೆ ತುಂಬಾತೊಂದರೆಯಾಗುತ್ತಿದ್ದು ಅಪಘಾತಗಳು ಹೆಚ್ಚುತ್ತಿವೆ.

      ಯೋಜನೆ ಉತ್ತಮವಾಗಿದ್ದು ಇವಗಳಿಗೆ ಸೂಕ್ತವಾದ ಸೂಚನಾಫಲಕ, ಜೀಬ್ರಾ ಪಟ್ಟಿಗಳನ್ನು ಹಾಕಿ ಅವುಗಳು ಗೋಚರಿಸುವಂತೆಮಾಡಿದರೆ ಜನರಿಗೆ ಇನ್ನು ಹೆಚ್ಚಿನ ಅನುಕೂಲವಾಗುತ್ತದೆ ಎಂದು ವಾಹನಸವಾರರು ತಿಳಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link