ಮಕ್ಕಳಲ್ಲಿ ಕಲೆ, ಸಾಂಸ್ಕೃತಿಕತೆ ಬಗ್ಗೆ ಆಸಕ್ತಿ ಬೆಳೆಸಿ

ಚಿತ್ರದುರ್ಗ
      ಮಕ್ಕಳಲ್ಲಿ ಕಲೆ, ಸಾಂಸ್ಕ್ರತಿಕತೆಯ ಬಗ್ಗೆ ಆಸಕ್ತಿ ಮೂಡಿಸುವ ಕೆಲಸವನ್ನು ಶಿಕ್ಷಕರು ಮಾಡಬೇಕು ಎಂದು ಕೆ.ಕೆ.ನ್ಯಾಷನಲ್ ಸ್ಕೂಲ್‍ನ ಡಾ.ಕೃಪಾ ಫಡುಕೆ ಹೇಳಿದರು
   
      ಇಲ್ಲಿನ ಕೆ.ಕೆ.ನ್ಯಾಷನಲ್ ಸ್ಕೂಲ್ ಹಾಗೂ ಡಾ ಹೆಚ್ ಆರ್ ಮಂಜುನಾಥ್ ಪೌಂಡೇಶನ್ ಇವರುಗಳ ಸಂಯುಕ್ತಾಶ್ರಯದಲ್ಲಿ ನಡೆದ  2018-19 ರ ಸಾಲಿನ ಸಂಚಿಕೆ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು
 
      ಮಕ್ಕಳನ್ನು ಕಲೆಯತ್ತ ನಡೆಸಿ ಬೆಳೆಸಿ ಇದರಿಂದ ಮಕ್ಕಳು ಏಕಾಗ್ರತೆ ಹೊಂದಿ ಕಲೆಯಲ್ಲಿ ಬಲಿಷ್ಟವಾಗಲು ಸಾಧ್ಯವಾಗುತ್ತದೆ. ಮಕ್ಕಳ ಮನೋಸ್ಥಿತಿಯನ್ನು ಅರಿಯಲು ಕಲೆ ಬಹು ಮುಖ್ಯವಾಗಿದೆ. ನೃತ್ಯ, ಸಂಗೀತ, ನಾಟಕದಂತಹ ಕಲೆಗಳಿಂದ ಪ್ರತಿಯೊಬ್ಬ ಮಗು ಸತ್ಪ್ರಜೆಯಾಗಲು ಸಾದ್ಯ ಎಂದರು.
     ಮುಖ್ಯ ಅತಿಥಿಗಳಾದ ಶ್ರೀಮತಿ ನಂದಿನಿ ಶಿವಪ್ರಕಾಶ್ ಅವರು ಮಾತನಾಡುತ್ತಾ. “ಕಲೆ ಮಾನವನನ್ನು ದೈವತ್ವಕ್ಕೆ ತೆಗೆದುಕೊಂಡು ಹೋಗುತ್ತದೆ. ಈ ಕಲೆ ಮಕ್ಕಳನ್ನು ಆಸ್ವಾದಿಸಿ, ಮನಸ್ಸು ಪ್ರಪುಲ್ಯವಾಗಿ ಓದಿನ ಕಡೆಗೆ ಮಕ್ಕಳ ಮನಸ್ಸನ್ನು ತುಡಿಯುವಂತೆ, ಮಿಡಿಯುವಂತೆ ಮಾಡುತ್ತದೆ. ಮನಸ್ಸು ತೃಪ್ತಿಯಾಗಿ, ಮನಸ್ಸಿನ ಮೂಲಕ ಶ್ರೀಮಂತನಾಗಲು ಸಾಧ್ಯ ಎಂದು ನುಡಿದರು.
       ಅಧ್ಯಕ್ಷರಾದ ಡಾ ಹೆಚ್ ಆರ್ ಮಂಜುನಾಥ್ ರವರು ಸಂಚಿಕೆಯನ್ನು ಕುರಿತು ಮಾತನಾಡುತ್ತಾ “ಮಕ್ಕಳ ಶಿಕ್ಷಕರ ಕ್ರಿಯಾಶೀಲತೆಗೆ ಹಿಡಿದ ಕೈಗನ್ನಡಿ” ಇಂದಿನ ಈ ಮಕ್ಕಳು ದೇಶದ ಬೆನ್ನೆಲುಬು ಪೋಷಕರು ವಿದ್ಯಾಭ್ಯಾಸದ ಜೊತೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಿ ಎಂದು ಪೋಷಕರಿಗೆ ತಿಳಿಸಿದರು.
     
    ಎನ್ ಗೌತಮಿ ಮತ್ತು ತಾಹ್ಸೀನಾ ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಡಾ ಹೆಚ್ ಆರ್ ಮಂಜುನಾಥ್ ರವರು ವಂದಿಸಿದರು, ನಂತರ ರಾಜ್ಯ ಪ್ರಶಸ್ತಿ ವಿಜೇತೆ ವಿಧುಷಿ ಡಾ  ಕೃಪಾ  ಫಡುಕೆ ಮೈಸೂರು ಇವರ ತಂಡದವರಿಂದ ಭರತ ನಾಟ್ಯ ಪ್ರದರ್ಶನ ನಡೆಯಿತು.
 ಶಿವತಾಂಡ, ಶಿವಸ್ತುತು, ಭಾರತಾಂಬೆಯ ಸ್ತುತಿ ಮೊದಲಾದವುಗಳು ಜನಮನ ಸೂರೆಗೊಂಡಿತು.
       
    ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀಮತಿ. ದೇವಿಕಾ ಮಂಜುನಾಥ್ ರವರು ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರಿಗೆ ನೆನಪಿನ ಕಾಣಿಕೆಯೊಂದಿಗೆ ಹೂಗುಚ್ಚವನ್ನು ನೀಡಿದರು.
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link