ಪರಭಣಿ
ಇಲ್ಲಿನ ಜಯಕವಾಡಿ ಪಾಲಿಕೆಯ ಸದಸ್ಯ ಅಮರ್ದೀಪ್ ರೋಡೆ ಅವರನ್ನು ಭಾನುವಾರ ದುಷ್ಕರ್ಮಿಗಳಿಬ್ಬರು ಕೊಲೆಗೈದಿದ್ದಾರೆ.
ಕೊಲೆ ಬಳಿಕ ಆರೋಪಿಗಳಾದ ಕಿರಣ್ ಡಾಕೆ ಮತ್ತು ರವಿ ಗಾಯಕ್ವಾಡ್ ಮೋಂಡಾ ಪೊಲೀಸ್ ಠಾಣೆಗೆ ಶರಣಾಗಿದ್ದಾರೆ.ಭಾನುವಾರ ಕುಡಿಯುವ ನೀರಿನ ವಿಷಯದಲ್ಲಿ ಜಗಳವಾಗಿದೆ. ಆಗ ಸ್ಥಳೀಯರು ಆ ಭಾಗದ ಪಾಲಿಕೆ ಸದಸ್ಯ ರೋಡೆಗೆ ಸ್ಥಳಕ್ಕೆ ಬರುವಂತೆ ಆಹ್ವಾನಿಸಿದ್ದಾರೆ.
ಈ ವೇಳೆ ಜಗಳ ಉಲ್ಬಣಗೊಂಡಿದ್ದು, ರೋಡೆ ಆರೋಪಿಗಳಿಬ್ಬರ ಮೇಲೆ ಮಚ್ಚಿನಿಂದ ದಾಳಿ ನಡೆಸಿದ್ದಾರೆ. ಆತ್ಮರಕ್ಷಣೆಗಾಗಿ ಇಬ್ಬರು ರೋಡೆ ಅವರನ್ನು ತಳ್ಳಿ, ಅವರ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








