ಬೆಂಗಳೂರು
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ಟೋಲ್ ಸುಂಕದಲ್ಲಿ ಹೆಚ್ಚಳವಾಗಿರುವುದಕ್ಕೆ ವಾಹನ ಚಾಲಕರು ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಮಾನ ನಿಲ್ದಾಣಕ್ಕೆ ತೆರಳುವ ರಾಷ್ಟ್ರೀಯ ಹೆದ್ದಾರಿ 44ರ. ಟೋಲ್ ಸುಂಕವನ್ನು ಸೋಮವಾರದಿಂದ ಹೆಚ್ಚಿಸಲಾಗಿದೆ ಕಾರುಗಳಿಗೆ ಒಂದು ಟ್ರಿಪ್‍ಗೆ ಇದುವರೆಗೂ ಪಾವತಿ ಮಾಡುತ್ತಿದ್ದ 90 ರೂ. ಗಳ ಬದಲಿಗೆ, ಇಂದಿನಿಂದ 95 ರೂ. ಗಳನ್ನು ನೀಡಬೇಕಾಗಿದೆ. ವಾಪಸ್ ಬರುವವರು (ರಿಟರ್ನ್ ಜರ್ನಿ) 130 ರೂ. ಗಳ ಬದಲಿಗೆ, 135 ರೂ. ಗಳನ್ನು ಪಾವತಿಸಬೇಕಾಗಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ
ಮಾಸಿಕ ಟೋಲ್ ಪಾಸ್ ದರವನ್ನು ಕಾರುಗಳಿಗೆ 2,895 ರೂ. ಗಳಿಂದ 3,020 ರೂ. ಗಳಿಗೆ ಹೆಚ್ಚಿಸಲಾಗಿದೆ. ಸ್ಥಳೀಯ ವ್ಯಕ್ತಿಗಳ ವಾಹನಗಳಿಗೆ ಮಾಸಿಕ ಪಾಸ್ ದರವನ್ನು 265 ರೂ. ಗಳಿಗೆ ಏರಿಕೆ ಮಾಡಲಾಗಿದೆ. ಕಳೆದ ವರ್ಷವೂ ಟೋಲ್ ಸುಂಕವನ್ನು ಪರಿಷ್ಕರಣೆ ಮಾಡಲಾಗಿತ್ತು. ಖಾಸಗಿ ವಾಹನ ಮತ್ತು ಸರ್ಕಾರಿ ಸಾರಿಗೆ ಬಸ್‍ಗಳನ್ನು ಅವಲಂಬಿಸಿರುವವರಿಗೂ ಟೋಲ್ ದರ ಏರಿಕೆಯ ಬಿಸಿತಟ್ಟಲಿದೆ. ಟೋಲ್ ಸುಂಕದ ರಸ್ತೆ ಬಳಸುವ ಬಸ್‍ಗಳಿಗೆ ಒಂದು ಟ್ರಿಪ್‍ಗೆ ಸುಂಕದ ದರವನ್ನು 10 ರೂ. ಗಳಿಗೆ ಏರಿಕೆ ಮಾಡಲಾಗಿದೆ.
ಬಸ್‍ಗಳಿಗೆ 280 ರೂ. ಟೋಲ್ ವಸೂಲಿ ಮಾಡಲಾಗುತ್ತಿದೆ. ರಿಟರ್ನ್ ಜರ್ನಿಗೆ 420 ರೂ. ಗಳನ್ನು ಪಾವತಿಸಬೇಕಾಗಿದೆ. ಈ ಬಾಬ್ತಿಗೆ 15 ರೂ. ಗಳನ್ನು ಹೆಚ್ಚಳ ಮಾಡಲಾಗಿದೆ. ಮಾಸಿಕ ಪಾಸ್‍ಗಳ ದರವನ್ನು 9,330 ರೂ. ಗಳನ್ನು ಪಾವತಿಸಬೇಕಾಗಿದೆ. ಇದೇ ಮಾರ್ಗದಲ್ಲಿ ದಿನನಿತ್ಯ ನೂರಾರು ಬಸ್‍ಗಳ ಸಂಚಾರ ವ್ಯವಸ್ಥೆ ಕಲ್ಪಿಸಿರುವ ಬಿಎಂಟಿಸಿಗೂ ದುಬಾರಿ ದರದ ಬಿಸಿತಗುಲಲಿದೆ.
ಈ ಸಂಬಂಧ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಯೊಬ್ಬರು ಸ್ಪಷ್ಟೀಕರಣ ನೀಡಿದ್ದು, ಇದೊಂದು ಮಾಮೂಲಿ ಪರಿಷ್ಕರಣೆಯಾಗಿದೆ. ಕಳೆದ ಆರ್ಥಿಕ ವರ್ಷದಲ್ಲೂ ಏರಿಕೆ ಮಾಡಲಾಗಿದ್ದು, ಈಗ ಪರಿಷ್ಕರಿಸಲಾದ ಟೋಲ್ ದರ 2020ರ ಮಾರ್ಚ್ 31ರವರೆಗೆ ಜಾರಿಯಲ್ಲಿರುತ್ತದೆ ಎಂದು ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
