ಹಾವೇರಿ :
ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿ ಶಿವಕುಮಾರ ಉದಾಸಿ ಏ.04 ನಾಮಪತ್ರ ಸಲ್ಲಿಸುವರು ಎಂದು ಶಾಸಕ ಸಿಎಂ ಉದಾಸಿ ಹೇಳಿದರು. ನಗರದ ಬಿಜೆಪಿ ಪಕ್ಷದ ಕಛೇರಿಯಲ್ಲಿ ಪತ್ರಿಕಾ ಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು.ಈ ಲೋಕಸಭಾ ಚುನಾವಣೆ ಪ್ರಪಂಚದ ಗಮನ ಸೆಳೆದಿದೆ.
ಕೇಂದ್ರದಲ್ಲಿ ಮತ್ತೆ ಬಿಜೆಪಿ ನೇತೃತ್ವದ ಸರ್ಕಾರ ಆಡಳಿತಕ್ಕೆ ಬರಲಿದೆ. ಹಾವೇರಿ ಲೋಕಸಭಾ ಚುನಾವಣೆಯಲ್ಲಿ ಕಳೆದ ಎರಡು ಬಾರಿ ಜಯ ಬಾರಿ ಮತ್ತೆ ಕಣದಲ್ಲಿ ಶಿವಕುಮಾರ ಉದಾಸಿ ಇದ್ದು, ಅವರು ಸುಮಾರು 25 ಸಾವಿರ ಜನಸ್ತೋಮದೊಂದಿಗೆ ಹ್ಯಾಟ್ರಿಕ್ ಬಾರಿಸಲು ನಾಮಪತ್ರ ಸಲ್ಲಿಸಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಭಾಗಿಯಾಗಿ ಯಶ್ವಸಿಗೊಳಿಸಬೇಂಕೆಂದು ಸಿಎಂ ಉದಾಸಿ ವಿನಂತಿಸಿಕೊಂಡರು.
ನಗರದ ಪುರಸಿದ್ದೇಶ್ವರ ದೇವಸ್ಥಾನದಿಂದ ಬೃಹತ್ ರ್ಯಾಲಿ ಪ್ರಾರಂಭವಾಗಿ ಮುನ್ಸಿಪಲ್ ಗ್ರೌಂಡ್ ನಲ್ಲಿ ಸಭಾ ಕಾರ್ಯಕ್ರಮ ಜರುಗಲಿದೆ. ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾದ ಬಿ ಎಸ್ ಯಡಿಯೂರಪ್ಪ ದಾವಣಗೇರಿಯಿಂದ ಸುಮಾರ 1 ಘಂಟೆಗೆ ಬರುವ ನಿರೀಕ್ಷೆ ಇದೆ. ಕಳೆದ ಎರಡು ಬಾರಿ ಕ್ಷೇತ್ರದಲ್ಲಿ ಮೂಲಭೂತ ಸೌಲಭ್ಯಗಳಿಗೆ ಒತ್ತು ನೀಡಿ ಕೆಲಸ ಮಾಡಿದ್ದಾರೆ. ಕ್ಷೇತ್ರದಲ್ಲಿ ಉತ್ತಮ ಪ್ರತಿಕ್ರಿಯ ಬರುತ್ತಿದ್ದು, ಈ ಬಾರಿ ಗೆಲವು ಸಾಧಿಸಲಿದ್ದು, ಕ್ಷೇತ್ರದ ನೀರಾವರಿ ವಲಯಕ್ಕೆ ನೀಡಿ ರೈತರಿಗೆ ನೆರವು ನೀಡಲಿದ್ದಾರೆ ಎಂದರು.
ರಾಷ್ಟೀಯ ಅಧ್ಯಕ್ಷ ಅಮಿತ್ ಶಾ ಆಗಮನ : ಬಿಜೆಪಿ ಪಕ್ಷದ ರಾಷ್ಟೀಯ ಅಧ್ಯಕ್ಷರಾದ ಅಮಿತ್ ಶಾ ಹಾಲಿ ಸಂಸದ ಶಿವಕುಮಾರ ಉದಾಸಿಯವರ ಮೇಲೆ ಪ್ರೀತಿ ಇರುವ ಕಾರಣ ಅವರು ಕ್ಷೇತ್ರಕ್ಕೆ ಬರುವ ಸಾಧ್ಯತೆ ಹೆಚ್ಚಾಗಿದೆ. ಎಲ್ಲರ ಸಹಕಾರದಿಂದ ಈ ಬಾರಿ ಬಿಜೆಪಿ ಪಕ್ಷದ ಅಭ್ಯರ್ಥಿ ಗೆಲವು ಸಾಧಿಸಿಲಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಶಿವರಾಜ ಸಜ್ಜನರ.ಶಾಸಕ ನೆಹರೂ ಓಲೇಕಾರ.ಸಿದ್ದರಾಜ ಕಲಕೋಟಿ ಅನೇಕರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
