ಹಗರಿಬೊಮ್ಮನಹಳ್ಳಿ:
ರಾಜ್ಯದಲ್ಲಿ 20ಕ್ಕೂ ಹೆಚ್ಚು ಸ್ಥಾನಗಳಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲ ಹಾಗೂ ಮುಜರಾಯಿ ಖಾತೆ ಸಚಿವ ಪಿ.ಟಿ.ಪರಮೇಶ್ವರನಾಯ್ಕ ಆತ್ಮ ವಿಶ್ವಾಸ ವ್ಯಕ್ತಪಡಿಸಿದರು.
ತಾಲೂಕಿನ ಸೊನ್ನದಲ್ಲಿ ಸೋಮವಾರ ಲೋಕಸಭಾ ಅಭ್ಯರ್ಥಿ ವಿ.ಎಸ್.ಉಗ್ರಪ್ಪನವರ ಪರ ಮತಯಾಚಿಸಿದ ಬಳಿಕ ಪತ್ರಕರ್ತರೊಂದಿಗೆ ಅವರು ಮಾತನಾಡಿದರು. ರಾಜ್ಯ ಸ್ಟಾರ್ ಕ್ಯಾಂಪೇನರ್‍ರನ್ನಾಗಿ ನನ್ನನ್ನು ಕೆಪಿಸಿಸಿ ಆಯ್ಕೆಮಾಡಿದ್ದು ಪಕ್ಷ ನನಗೆ ಹೆಚ್ಚಿನ ಜವಬ್ದಾರಿಯನ್ನು ನೀಡಿದೆ ಎಂದರು. ಜಿಲ್ಲೆಯಲ್ಲಿ ಎಲ್ಲಾ ಶಾಸಕರು ಅಭ್ಯರ್ಥಿಯಪರವಾಗಿ ಚುನಾವಣೆಯಲ್ಲಿ ಪಾಲ್ಗೊಂಡು ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡುಬರುವಲ್ಲಿ ಯಶಸ್ವಿಯಾಗುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬಿಜೆಪಿ ಏನೇ ಕಸರತ್ತು ಮಾಡಿದರು ರಾಜ್ಯದಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಸಾಧ್ಯವಿಲ್ಲ. ಕಾರಣ ಸಮ್ಮಿಶ್ರ ಸರ್ಕಾರ ದೀನ, ದಲಿತರ,ಆರ್ಥಿಕವಾಗಿ ಹಿಂದುಳಿದವರ ಪರವಾಗಿ ಮತ್ತು ರೈತರ ಶ್ರಯೋಭಿವೃದ್ಧಿ ಕೆಲಸಗಳನ್ನು ಮಾಡಿದೆ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದ ಮೇಲೆ ಮತದಾರರಿಗೆ ಬಲವಾದ ನಂಬಿಕೆ ಇರುವುದರಿಂದ ಅವರ ಆಶೀರ್ವಾದ ಇರುತ್ತದೆ ಎಂದರು.ವಿ.ಎಸ್.ಉಗ್ರಪ್ಪ ಸಂಪೂರ್ಣ 5ವರ್ಷದ ಲೋಕಸಭಾ ಸದಸ್ಯರಾಗುವ ಯೋಗವಿದ್ದು ಅವರ ಗೆಲುವು ಖಚಿತವೆಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
