ಮನೆ ಬಾಗಿಲು ಮುರಿದು ಕಳ್ಳತನ !!

ಬೆಂಗಳೂರು

        ಮನಗೆ ಮುಂಭಾಗಿಲು ಮುರಿದು ನುಗ್ಗಿದ ಕಳ್ಳರು ಮನೆಯಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ 60 ಸಾವಿರ ನಗದು ದೋಚಿ ಪರಾರಿಯಾಗಿರುವ ದುರ್ಘಟನೆ ಹಾಡಹಗಲೇ ಕೆ.ಆರ್.ಪುರದ ಜೆಸಿ ಲೇಔಟ್‍ನಲ್ಲಿ ನಡೆದಿದೆ

        ಖಾಸಗಿ ಕಂಪನಿಯ ಉದ್ಯೋಗಿ ಬಾಲಚಂದ್ರ ಎಂಬುವರ ಮನೆಯ ಬೀಗ ಕಳೆದು ಹೋಗಿದ್ದರಿಂದ ತಾತ್ಕಾಲಿಕವಾಗಿ ಹೊರ ಭಾಗದ ಡೋರ್ ಲಾಕ್‍ಗೆ ಚಿಕ್ಕ ಬೀಗ ಹಾಕಿದ್ದರು. ಇದನ್ನು ಗಮನಿಸಿದ ಕಳ್ಳರು ಅಕ್ಕ ಪಕ್ಕದ ಮನೆಯವರಿಗೂ ಸದ್ದು ಕೇಳಿಸಿದಂತೆ ಮನೆಯ ಬೀಗ ತೆರೆದು ಒಳಗಡೆ ಬಂದು ತಮ್ಮ ಕೆಲಸ ಮುಗಿಸಿಕೊಂಡು ಪರಾರಿಯಾಗಿದ್ದಾರೆ.

         ಮನೆಯೊಡತಿ ಶಿಕ್ಷಕಿಯಾಗಿದ್ದ ಮಾಲತಿ ಸಂಜೆ ಕೆಲಸ ಮುಗಿಸಿ ಶಾಲೆಯಿಂದ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಕೂಡಲೆ ಕೆ.ಆರ್.ಪುರ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.ಮಾಲತಿ, ಮನೆಯ ಮಾಲೀಕರು ಮಾತನಾಡಿ, ನಿನ್ನೆ ಡೊರ್ ಲಾಕ್ ಕೀ ಕಳೆದು ಹೋಗಿತ್ತು.

          ಆದ್ದರಿಂದ ಇವತ್ತು ಒಂದು ಬೀಗ ಹಾಕಿ ಕೆಲಸಕ್ಕೆ ಹೊಗಿದ್ದೆವು. ಆದರೆ ಕೆಲಸ ಮುಗಿಸಿ ಬಂದಾಗ ಬಾಗಿಲಿಗೆ ಬೀಗ ಹಾಕಿರಲಿಲ್ಲ. ಮನೆ ಒಳಗೆ ಎಲ್ಲಾ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.ಸುಮಾರು ಆರು ಲಕ್ಷ ರೂಪಾಯಿ ಮೌಲ್ಯದ ಆಭರಣಗಳು ಹಾಗೂ ಅರವತ್ತು ಸಾವಿರ ರೂಪಾಯಿ ಹಣವನ್ನು ಕಳ್ಳರು ದೋಚಿದ್ದಾರೆ ಎಂದರು.ಕೆಆರ್ ಪುರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link