ಕೊಟ್ಟೂರು
ಸುಡು ಬಿಸಿನಲ್ಲಿ ಪಟ್ಟಣದ ಪಂಚಾಯ್ತಿಗೆ ಆಗಮಿಸುವ ಜನರಿಗೆ ಕುಡಿಯಲು ತಣ್ಣನೆಯ ಸಿಹಿ ನೀರು ಕೊಟ್ಟು, ಸವಿಯಲು ಬೆಲ್ಲ ನೀಡಿ ಜನರನ್ನು ಸಂತೃಷ್ಟಗೊಳಿಸುವ ಕಾರ್ಯವನ್ನು ಇಲ್ಲಿನ ಪಟ್ಟಣ ಪಂಚಾಯ್ತಿ ಆಡಳಿತ ಹಮ್ಮಿಕೊಂಡು ಸಾರ್ವಜನಿಕರ ಮೆಚ್ಚುಗೆ ಪಾತ್ರವಾಗಿದೆ.
ಪ್ರತಿದಿನ ಮನೆ ತೆರಿಗೆ, ನೀರಿನ ಕರ, ಖಾತಾ ನಕಲು ಸೇರಿದಂತೆ ಬೀದಿ ದೀಪವಿಲ್ಲ. ಚರಂಡಿ ಸ್ವಚ್ಚಮಾಡಿಲ್ಲ ಹೀಗೆ ಹಲವು ಸಮಸ್ಯೆಗಳನ್ನು ಹೊತ್ತು ಪಟ್ಟಣ ಪಂಚಾಯ್ತಿ ಕಾರ್ಯಲಯಕ್ಕೆ ಬರಯವ ಜನರ ಬಾಯಾರಿಕೆ ನೀಗಿಸಲು ಕಚೇರಿಯಲ್ಲಿ ಗುರುವಾರ ನೀರಿನ ಅರವಟ್ಟಿಗೆ ಸ್ಥಾಪಿಸಿದ್ದಾರೆ.
ದಿನೇ ದಿನೆ ಹೆಚ್ಚುತ್ತಿರುವ ಬಿಸಿಲಿನ ತಾಪ ಹಾಗೂ ಬಿಸಿ ಗಾಳಿಗೆ ಜನ ತತ್ತರಿಸಿಹೋಗಿದ್ದು, ಜನರು ಮನೆಯಿಂದ ಹೊರ ಬರುವುದಕ್ಕೆ ಹಿಂಜರಿಯುತ್ತಿದ್ದಾರೆ. ಇಂತಹ ಸಮಯದಲ್ಲಿ ಪಟ್ಟಣ ಪಂಚಾಯ್ತಿ ಕಚೇರಿ ಬರುವ ಜನರಿಗೆ ಕುಡಿಯಲು ತಂಪಾಗಿರುವ ನೀರುಕೊಟ್ಟು ಸವಿಯಲು ಬೆಲ್ಲ ಕೊಡುತ್ತಿದ್ದಾರೆ ಇದು ಒಳ್ಳಯ ಕೆಲಸ ಎಂದು ಪಟ್ಟಣ ಪಂಚಾಯ್ತಿ ಸದಸ್ಯರಾದ ತೋಟದ ರಾಮಣ್ಣ, ಬಾವಿಕಟ್ಟಿ ಶಿವಾನಂದ ಸೇರಿದಂತೆ ಹಲವಾರು ಜನರು ಸಂತಸ ವ್ಯಕ್ತಪಡಿಸಿದ್ದಾರೆ.