ದಿ.ಎಂ.ಪಿ.ರವೀಂದ್ರ ಅವರ ಜನ್ಮ ದಿನಾಚರಣೆ ಕಾರ್ಯಕ್ರಮ

ಹರಪನಹಳ್ಳಿ:

     ದಿವಗಂತ ಎಂ.ಪಿ.ರವೀಂದ್ರ ಅವರು ಕೈಗೊಂಡ ಅಭಿವೃದ್ಧಿ ಕಾರ್ಯಗಳ ಸ್ಮರಣೆ ಹಾಗೂ ಅವರ ಕನಸುಗಳನ್ನು ಸಕಾರಗೊಳಿಸುವ ನಿಟ್ಟಿನಲ್ಲಿ ರವಿ ಯುವಶಕ್ತಿ ಪಡೆ ಕೆಲಸ ಮಾಡುತ್ತಿದೆ ಎಂದು ಕೆಪಿಸಿಸಿ ಮಹಿಳಾ ಘಟಕದ ಕಾರ್ಯದರ್ಶಿ ಎಂ.ಪಿ.ಲತಾ ಹೇಳಿದರು.ಪಟ್ಟಣದ ಹಡಗಲಿ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಶುಕ್ರವಾರ ದಿ.ಎಂ.ಪಿ.ರವೀಂದ್ರ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

     `ಸಾಹಿತ್ಯ, ಸಾಂಸ್ಕೃತಿಕ, ಜಾನಪದ ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದ ಸಹೋದರ ರವೀಂದ್ರ, ಯುವಕರ ಕಣ್ಮಣಿಯಾಗಿದ್ದರು. ಹೀಗಾಗಿ ಯುವ ಅಭಿಮಾನಿಗಳು ಒಳಗೊಂಡ ರವಿ ಯುವಶಕ್ತಿ ಪಡೆ ಕಟ್ಟಲಾಗಿದೆ. ರಾಜಕೀಯ ಕ್ಷೇತ್ರದ ಜತೆಗೆ ಸಮಾಜಮುಖಿ ಕಾರ್ಯಗಳಲ್ಲೂ ತೊಡಗಿಸಿಕೊಳ್ಳಬೇಕು’ ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದರು.

      ಎಂ.ಪಿ.ರವೀಂದ್ರ ಯುವಶಕ್ತಿ ಪಡೆ ಅಧ್ಯಕ್ಷ ಉದಯಶಂಕರ, `ವೈಚಾರಿಕತೆ, ರಾಜಕೀಯ ಪ್ರಜ್ಞೆ ಹೊಂದಿದ್ದ ಎಂ.ಪಿ.ರವೀಂದ್ರ ಅವರು, ದೂರದೃಷ್ಠಿಯುಳ್ಳ ನಾಯಕರಾಗಿದ್ದರು. ಯುವಕರಲ್ಲಿ ನಾಯಕತ್ವ ಬೆಳೆಸುವ ಗುಣ ಅವರಲ್ಲಿತ್ತು. ಮಂಡ್ಯ, ಮೈಸೂರಿನಂತೆ ಹರಪನಹಳ್ಳಿ ಸಹ ನೀರಾವರಿಗೆ ಒಳಪಡಬೇಕು ಎಂಬ ಕನಸು ರವೀಂದ್ರ ಹೊಂದಿದ್ದರು’ ಎಂದು ಸ್ಮರಿಸಿದರು.

        ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಬಿ. ಪರಶುರಾಮಪ್ಪ, `ಹರಪನಹಳ್ಳಿಗೂ 371ಜೆ ಸೌಲಭ್ಯ ನೀಡಬೇಕು ಎಂದು ಹೋರಾಟ ನಡೆಸಿ ಸೌಲಭ್ಯ ಕಲ್ಪಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಜನಪರ ಕೆಲಸ ಮಾಡಿದ ಎಂ.ಪಿ.ರವೀಂದ್ರ ಅವರನ್ನು ತಾಲ್ಲೂಕಿನ ಜನತೆ ಯಾವತ್ತು ಮರೆಯಲು ಸಾಧ್ಯವಿಲ್ಲ’ ಎಂದು ಹೇಳಿದರು.

        ಈ ಸಂದರ್ಭದಲ್ಲಿ ಎಂ.ಪಿ.ರವೀಂದ್ರ ಜನ್ಮದಿನದ ಅಂಗವಾಗಿ ಬೆಳಗ್ಗೆ ಸರ್ಕಾರಿ ಆಸ್ಪತ್ರೆ ಸೇರಿದಂತೆ ಪಟ್ಟಣದ ವಿವಿಧ ಆಸ್ಪತ್ರೆಗಳ ರೋಗಿಗಳಿಗೆ ಹಣ್ಣು-ಹಂಪಲು ವಿತರಿಸಲಾಯಿತು. ನಂತರ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಕೇಕ್ ಕತ್ತರಿಸಿ ಕಾರ್ಯಕರ್ತರಿಗೆ ವಿತರಿಸಲಾಯಿತು. ವಕೀಲ ವೆಂಕಟೇಶ, ಸುಷ್ಮಾ ಪಾಟೀಲ, ಅಗ್ರಹಾರ ಅಶೋಕ ಮಾತನಾಡಿದರು.

        ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಎಂ.ವಿ.ಅಂಜಿನಪ್ಪ, ಮುಖಂಡರಾದ ಕೆ.ಎಂ.ಬಸವರಾಜಯ್ಯ, ಚಿಕ್ಕೇರಿ ಬಸಪ್ಪ, ಡಿ.ರೆಹಮಾನಸಾಬ್, ಇರ್ಫಾನ್ ಮುದಗಲ್, ಜಯಲಕ್ಷ್ಮಿ, ನೀಲಗುಂದ ವಾಗೀಶ, ರಾಯದುರ್ಗದ ವಾಗೀಶ, ಕನಕನ ಬಸಾಪುರ ಮಂಜುನಾಥ, ಎಲ್.ಮಂಜನಾಯ್ಕ, ತೆಲಿಗಿ ಉಮಾಕಾಂತ, ಬಾಣದ ಅಂಜಿನಪ್ಪ, ಶಮಿವುಲ್ಲಾ, ಜಾಕೀರಹುಸೇನ್, ಅರುಣ ಪೂಜಾರ, ಹಾಲೇಶನಾಯ್ಕ, ಜಿಶಾನ್, ಸಿದ್ದಿಕ್ಕಿ, ಮತ್ತೂರು ಬಸವರಾಜ ಇವರೂ ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link