ಸ್ಪರ್ಧಾತ್ಮಕ ಕಾಲದಲ್ಲಿ ವಿದ್ಯಾರ್ಥಿಗಳಿಗೆ ಭವಿಷ್ಯದ ಹಾದಿ ಸುಗಮವಾಗಿಲ್ಲ:ಕೆಂಚವೀರಪ್ಪ

ಹಾನಗಲ್ಲ :

      ವರ್ತಮಾನದ ಸ್ಪರ್ಧಾತ್ಮಕ ಕಾಲದಲ್ಲಿ ವಿದ್ಯಾರ್ಥಿಗಳಿಗೆ ಭವಿಷ್ಯದ ಹಾದಿ ಸುಗಮವಾಗಿಲ್ಲ. ಕಾಲಕ್ಕೆ ತಕ್ಕಂತೆ ತಮ್ಮನ್ನು ತಾವು ಸತತ ಪರಿಶ್ರಮದ ಪ್ರಯತ್ನದಿಂದ ಜ್ಞಾನದ ಆಧುನೀಕರಣ ಮತ್ತು ಅದನ್ನು ಉನ್ನತೀಕರಣಗೊಳಿಸಿಕೊಂಡಾಗ ಭವಿಷ್ಯತ್ತಿನ ಜಯದ ಹಾದಿ ಎಂದು ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಎನ್. ಕೆಂಚವೀರಪ್ಪ ಕರೆ ನೀಡಿದರು.

      ಹಾನಗಲ್ಲಿನ ಶ್ರೀಕುಮಾರೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಇಂದಿನ ಯುವಕರಿಗೆ ಅನೇಕ ಕನಸುಗಳಿವೆ. ಇಂತಹ ಕನಸುಗಳನ್ನು ನನಸಾಗಿಸಿ ಪೋಷಿಸಿ-ಬೆಳೆಸಿ ಸಾಧನೆಯ ಉತ್ತುಂಗಕ್ಕೇರಿಸುವ ಕೆಲಸ ಶಿಕ್ಷಣದಿಂದಾಗಬೇಕು. ಜೀವನವನ್ನು ಗಂಭೀರವಾಗಿತೆಗೆದುಕೊಂಡು ಸಾಧನೆಯದಾರಿಯನ್ನು ಸ್ಪಷ್ಟವಾಗಿಸಿಕೊಂಡಿರುವ ವ್ಯಕ್ತಿಯ ಬದುಕು ಎಂದೂಸೋತಿಲ್ಲ ಎಂದರು.

      ಜನತಾ ಶಿಕ್ಷಣ ಸೌಹಾರ್ದ ಸಹಕಾರಿಸಂಸ್ಥೆಯ ಅಧ್ಯಕ್ಷ ಎ.ಎಸ್.ಬಳ್ಳಾರಿ ಅಧ್ಯಕ್ಷೀಯ ನುಡಿಗಳನ್ನಾಡಿ, ಮಹಾನ್ ವ್ಯಕ್ತಿಗಳಿಂದ ಕಟ್ಟಿದ ಈ ಶಿಕ್ಷಣ ಸಂಸ್ಥೆ ಅನೇಕ ಏಳು-ಬೀಳುಗಳ ಮಧ್ಯಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಣ ದಾಸೋಹ ಮಾಡಿ ಉನ್ನತ ಮಟ್ಟತಲುಪಿರುವುದು ಅನೇಕ ಮಹನೀಯರ ಶ್ರಮದ ಫಲ.ಇಂಥ ಶ್ರಮದ ಭಾವನೆಗಳನ್ನು ಆಡಳಿತ ಮಂಡಳಿಯ ಎಲ್ಲ ನಿರ್ದೇಶಕರು ತಿಳಿದುಕೊಂಡು ಮೂಲ ಶೈಕ್ಷಣಿಕ ಉದ್ದೇಶಗಳನ್ನು ಮರೆಯದಂತೆ ಈಡೇರಿಸಲು ಕರೆ ನೀಡಿದರು.

      ಸಂಸ್ಥೆಯಅಧ್ಯಕ್ಷ ಪಿ.ವಾಯ್.ಗುಡಗುಡಿ ಮಾತನಾಡಿ ಬದುಕುವ ಉತ್ತಮ ಮಾರ್ಗಗಳನ್ನು ಗುರುಗಳ ಮಾರ್ಗದರ್ಶನ ಮತ್ತು ಜೀವಂತ ಅನುಭವಗಳ ಮೂಲಕ ತಿಳಿದಾಗ ಶಿಕ್ಷಣದ ಉಪಯೋಗ ತೆಗೆದುಕೊಳ್ಳಬಹುದೆಂದರು.

     ಕಾಲೇಜಿನ ಪ್ರಾಂಶುಪಾಲ ಪ್ರೊ.ಸಿ. ಮಂಜುನಾಥಕಾಲೇಜಿನ ಪ್ರಗತಿ ವರದಿ ವಾಚಿಸಿದರು. ವಿದ್ಯಾರ್ಥಿಒಕ್ಕೂಟದಕಾರ್ಯಾಧ್ಯಕ್ಷಡಾ. ಎಂ.ಎಚ್. ಹೊಳಿಯಣ್ಣನವರ ಒಕ್ಕೂಟದ ಸಾಧನೆಗಳ ಮಾಹಿತಿ ನೀಡಿದರು.ಕರ್ನಾಟಕ ವಿಶ್ವವಿದ್ಯಾಲಯ ಪ್ರಧಾನ ಮಾಡುವ ಡಾ..ಸಿ.ಪಾವಟೆ ಅತ್ಯುತ್ತಮ ಎನ್‍ಎಸ್‍ಎಸ್‍ಅಧಿಕಾರಿ ಪ್ರಶಸ್ತಿ ಪಡೆದಿರುವ ಹಾಗೂ ಹಾವೇರಿ ಜಿಲ್ಲಾ ಎನ್‍ಎಸ್‍ಎಸ್ ನೋಡಲ್ ಅಧಿಕಾರಿಯಾಗಿ ನೇಮಕವಾದ ಡಾ. ಪ್ರಕಾಶ ಹೊಳೇರ ಇವರನ್ನು ಗಣ್ಯರು ಸನ್ಮಾನಿಸಿದರು.

      2018-19ನೇ ವರ್ಷದಕಾಲೇಜಿನ ಅತ್ಯುತ್ತಮ ವಿದ್ಯಾರ್ಥಿಗಳಾಗಿ ಆಯ್ಕೆಯಾದ ಕಲಾ ವಿಭಾಗದಿಂದ ಅಕ್ಷತಾ ವಾಣಿಜ್ಯ ವಿಭಾಗದಿಂದ ರಂಜಿತಾ ಕೆಂಗಣ್ಣನವರರವರಿಗೆ ಪ್ರಶಸ್ತಿ ಪ್ರಧಾನ ಮಾಡಿದರು. ಕ್ರೀಡೆ, ಸಾಂಸ್ಕøತಿಕ ಸ್ಪರ್ಧೆಯಲ್ಲಿ ವಿಜೇತರಾ ದವರಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರಾದ ಸುರೇಶರಾಯ್ಕರ, ವಿನೋದ ಅಚಲಕರ , ರಾಮಪ್ಪ ತಿತ್ತಿ, ಹನುಮಂತಪ ಕಾಮನಹಳ್ಳಿ, ಭದ್ರಪ್ಪ ಅಗಸಿಮನಿ ಉಪಸ್ಥಿತರಿದ್ದರು.

      ವಿದ್ಯಾರ್ಥಿನಿಯರಾದ ಕೀರ್ತನಾ ಪೂಜಾರ ಮತ್ತು ಶ್ರೀಲಕ್ಷ್ಮಿ ಪಾಟೀಲ ಪ್ರಾರ್ಥಿಸಿದರು. ಪ್ರೊ.ಪ್ರೇಮಕಿಶನ್ ಬಳ್ಳಾರಿ ಸ್ವಾಗತಿಸಿದರು. ಪ್ರೊ.ಬೋವಿ ಹೊನ್ನಪ್ಪ ಅತಿಥಿಗಳನ್ನು ಪರಿಚಯಿಸಿದರು. ಪ್ರೊ.ದೀಪಿಕಾ ಪಾಟೀಲ ಸುನಿತಾ ವಂದಿಸಿದರು. ಪ್ರೊ.ಭಾಗ್ಯಲಕ್ಷ್ಮಿ ಹುಳ್ಳಿಕುಪ್ಪಿ ಕಾರ್ಯಕ್ರಮ ನಿರ್ವಹಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link