ಸಮಾನತೆಯ ಹಾದಿಯಲ್ಲಿ ಎಲ್ಲರನ್ನು ತಂದ ಪಕ್ಷ ಕಾಂಗ್ರೇಸ್ : ಬಿ ಆರ್ ಪಾಟೀಲ್

ಹಾನಗಲ್ಲ :

       ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ಜವಾಬ್ದಾರಿಯಿಂದ ಜನರ ಮನಸ್ಸನ್ನು ಒಲಿಸಿದರೆ ರಾಜ್ಯದ 28 ಲೋಕಸಭಾ ಸ್ಥಾನಗಳನ್ನು ಗೆಲ್ಲುವ ಶಕ್ತಿ ಇರುವಾಗ ಅದು ಸಾಧ್ಯವಾಗುವಂತೆ ಕ್ರಿಯಾಶೀಲರಾಗುವಂತೆ ಕಾರ್ಯಕರ್ತರಿಗೆ ಹಾವೇರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಿ.ಆರ್.ಪಾಟೀಲ ಮನವಿ ಮಾಡಿದರು.

       ತಾಲೂಕಿನ ಬೊಮ್ಮನಹಳ್ಳಿಯಲ್ಲಿ ನಡೆದ ಕಾಂಗ್ರೇಸ್ ಪಕ್ಷದ ಲೋಕಸಭೆ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೇಸ್ ಪಕ್ಷವೇ ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದೆ. ಸಮಾನತೆಯ ಹಾದಿಯಲ್ಲಿ ಎಲ್ಲರನ್ನು ತಂದ ಪಕ್ಷ ಕಾಂಗ್ರೇಸ್ ಪಕ್ಷ ಮಾತ್ರ. ಶಿಕ್ಷಣ, ಉದ್ಯೋಗ, ರಾಜಕೀಯ ರಂಗದಲ್ಲಿಯೂ ಸಮಾತನತೆ ನೀಡಿದ ಪಕ್ಷ ಕಾಂಗ್ರೇಸ್ ಪಕ್ಷ.

      ಮಹಿಳಾ ಮೀಸಲಾತಿ ನೀಡಿದವರು ಕಾಂಗ್ರೇಸ್ ಪಕ್ಷದವರು. ಹಿಂದುಳಿದವರಿಗೆ ನ್ಯಾಯ ಒದಗಿಸಲು ಮೀಸಲಾತಿ ನೀಡಿ ಇಡೀ ದೇಶದಲ್ಲಿ ಒಂದೇ ರೀತಿ ಜೀವನಕ್ಕೆ ಹಾದಿ ಮಾಡಿಕೊಟ್ಟಿರುವುದು ಕಾಂಗ್ರೇಸ್ ಪಕ್ಷದ ಅಧಿಕಾರದಲ್ಲಿ ಎಂಬುದನ್ನು ಅರಿಯಬೇಕು. ಬಿಜೆಪಿಯವರು ಹಿಂದುಳಿದವರ ವಿರುದ್ಧ ನ್ಯಾಯಲಯಕ್ಕೆ ಹೋದವರು. ಇಂಥವರಿಗೆ ಮತ ನೀಡಬೇಡಿ ಎಂದು ಮನವಿ ಮಾಡಿದರು.

      ರೈತರ ಸಾಲ ಮನ್ನಾ ಮಾಡುವ ಘೋಷಣೆ ಮಾಡಿದ ಮೋದಿ ರೈತರ ಒಂದು ಪೈಸೆ ಸಾಲವನ್ನೂ ಮನ್ನಾ ಮಾಡಲಾಗಿಲ್ಲ. ಕೇಂದ್ರ ಜನ್‍ಧನ್ ಯೋಜನೆ ಜನ ಧನ ಪ್ರಧಾನಿಗೆ ಎಂಬ ಯೋಜನೆಯಾಗಿದೆ. ರಾಜ್ಯದ ಸಮ್ಮಿಶ್ರ ಸರಕಾರ ಭದ್ರವಾಗಿದೆ. ಮುಂದೆಯೂ ಭದ್ರವಾಗಿರುತ್ತದೆ. ಬಿಜೆಪಿಗರ ಸುಳ್ಳು ಹೇಳಿಕೆಗೆ ಮರುಳಾಗಬೇಡಿ. ಸಿದ್ಧರಾಮಯ್ಯ ಸರಕಾರ ಪ್ರತಿ ಮನೆಗೆ ಕನಿಷ್ಟ ಐದು ಯೋಜನೆ ತಲುಪುವಂತೆ ಮಾಡಿದೆ. ಆದರೆ ಬಿಜೆಪಿ ಕೇವಲ ಘೋಷಣೆ ಮಾಡುತ್ತದೆಯೇ ಹೊರತು ಕೆಲಸ ಮಾಡುವುದಿಲ್ಲ ಎಂದ ಡಿ.ಆರ್.ಪಾಟೀಲ ದೂರಿದರು.

       ಮಾಜಿ ಸಚಿವ ಮನೋಹರ ತಹಶೀಲ್ದಾರ ಮಾತನಾಡಿ, ಸರಳ ಸಜ್ಜನಿಕೆಯ ಡಿ.ಆರ್. ಪಾಟೀಲ ರೈತರು ಹಾಗೂ ಸಮಾಜದ ಎಲ್ಲ ಜನಾಂಗಗಳಿಗೆ ನ್ಯಾಯ ಒದಗಿಸಿ ಕೊಡುವ ಗಾಂಧೀವಾದಿಯಾಗಿದ್ದಾರೆ. ಬಿಜೆಪಿಯಿಂದ ಆಯ್ಕೆಯಾಗಿ 10 ವರ್ಷ ಈ ಕ್ಷೇತ್ರ ಪ್ರತಿನಿಧಿಸಿ ಶಿವಕುಮಾರ ಉದಾಸಿ ಯಾವುದೇ ಅಭಿವೃದ್ಧಿ ಮಾಡಿರುವ ದಾಖಲೆಗಳೇ ಇಲ್ಲ. ರೈತರ ಸಮಸ್ಯೆಗಳಿಗಂತೂ ಸ್ಪಂಧಿಸಲೇ ಇಲ್ಲ. ರಾಜ್ಯದ ಜ್ವಲಂತ ಸಮಸ್ಯೆಗಳಿಗೆ ಸ್ಫಂದಿಸಿಲ್ಲ.

       ಜಿಲ್ಲೆಗೆ ಯಾವುದೇ ವಿಶೇಷ ಅನುದಾನ ತರಲಿಲ್ಲ. ಹೊಸ ಯೋಜನೆಗಳನ್ನು ಈ ಜಿಲ್ಲೆ ಕಾಣಲೇ ಇಲ್ಲ. ಮೋದಿ ಹೆಸರಿನಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿರುವ ಶಿವಕುಮಾರ ಉದಾಸಿ ಅವರಿಗೆ ಅಧಿಕಾರ ಬೇಕು. ಆದರೆ ಅಭಿವೃದ್ಧಿ ಬೇಡ. ಇಂಥವರು ಬೇಕೆ ನಮಗೆ ಎಂದು ಪ್ರಶ್ನಿಸಿದ ಅವರು, ಬರಗಾಲದಿಂದ ತತ್ತರಿಸಿದ ರೈತರು ದಿಲ್ಲಿಗೆ ಹೋಗಿ ನಿಯೋಗದೊಂದಿಗೆ ಮಾತನಾಡಿದರೂ ಏನೂ ಪ್ರಯೋಜನವಾಗಿಲ್ಲ ಎಂದರು.

        ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಮಾತನಾಡಿ, ದೇಶದ ಜನರಿಗೆ ಮೋಸ ಮಾಡಿ ಕನಸುಗಳನ್ನು ಕಟ್ಟಿ ಮರೆ ಮಾಚಿದ ಪ್ರಧಾನಿ ಮೋದಿ ಕೇವಲ ಮತಕ್ಕಾಗಿ ಮಾತನಾಡುವ ಪ್ರಧಾನಿಯಾಗಿದ್ದಾರೆ. ಇವರ ಅಧಿಕಾರದಲ್ಲಿ ಹಣದುಬ್ಬರ ಹೆಚ್ಚಾಗಿದೆ. ಕಾಂಗ್ರೇಸ್ ಪಕ್ಷ ಭದ್ರ ಸರಕಾರ ನೀಡಬಲ್ಲದು. ಆದರೂ ಕಳೆದ ಹಾನಗಲ್ಲ ಕ್ಷೇತ್ರದ ವಿಧಾಸಭೆ ಚುನಾವಣೆಯಲ್ಲಿ ಮೋಡಿ ಮಾಡಿ ಮತ ಪಡೆದು ಬಿಜೆಪಿ ಆಯ್ಕೆಯಾಗಿದೆ. ಆದರೆ ಇನ್ನು ಮುಂದೆ ಅದು ಸಾಧ್ಯವಿಲ್ಲ.

      10 ವರ್ಷಗಳಲ್ಲಿ ಸಂಸದ ಶಿವಕುಮಾರ ಉದಾಸಿ ಭೇಟಿ ನೀಡಿದ ಗ್ರಾಮಗಳೆಷ್ಟು ಎಂದು ಕೇಳಿದರೆ ಅವರಲ್ಲಿಯೇ ಉತ್ತರವಿಲ್ಲ. ಅಪ್ಪಟ ಗಾಂಧೀವಾದಿ ಡಿ.ಆರ್.ಪಾಟೀಲರನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.

       ಕಾಂಗ್ರೇಸ್ ಮುಖಂಡರಾದ ಎ.ಎಂ.ಹಿಂಡಸಗೇರಿ, ಯಾಸಿರಖಾನ ಪಠಾಣ, ಬಿ.ಶಿವಪ್ಪ, ಪ್ರಕಾಶಗೌಡ ಪಾಟೀಲ, ಎಂ.ಎಂ.ಹಿರೇಮಠ ಮಾತನಾಡಿದರು. ಶೇಕಣ್ಣ ಮಲ್ಲಮ್ಮನವರ, ದಾನಪ್ಪ ಗಂಟೇರ, ವಿಷ್ಣುಕಾಂತ ಜಾಧವ, ಸರಳಾ ಜಾಧವ, ರಾಘವೇಂದ್ರ ತಹಶೀಲ್ದಾರ, ವಿಕಾಸ ನಿಂಗೋಜಿ ವೇದಿಕೆಯಲ್ಲಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link