ಕೊಟ್ಟೂರು
ರಾಂಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೋರನಹಳ್ಳಿ-ಶಿರನಾಯ್ಕನಹಳ್ಳಿ ಅವಳಿ ಗ್ರಾಮಗಳ ಕುಡಿಯುವ ನೀರು ಕೆಟ್ಟವಾಸನೆ ಹಾಗೂ ಸತ್ತ ಗೊದ್ದಿಗೆಗಳು ಕಾಣಿಸಿಕೊಂಡಿವೆ.
ಕಳೆದ ನಾಲ್ಕು ದಿನಗಳಿಂದ ಅವಳಿ ಗ್ರಾಮಸ್ಥರು ಕುಡಿಯುವ ನೀರಿಗಾಗಿ ಪರಿತಪಿಸುತ್ತಿದ್ದಾರೆ. ಪಕ್ಕದ ಸುಟ್ಟಕೋಡಿಹಳ್ಳಿ ಹಾಗೂ ಹೊಲಗಳ ಕೊಳವೆಬಾವಿ ನೀರನ್ನು ಆಶ್ರಯಿಸಿದ್ದಾರೆ.ವಿಷಯ ತಿಳಿಯುತ್ತಿದ್ದಂತೆ ರಾಂಪುರ ಗ್ರಾಮ ಪಂಚಾಯ್ತಿ ಪಿಡಿಓ ಶಶಿಧರ ಅವಳಿ ಗ್ರಾಮಸ್ಥರಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರನ್ನು ಸರಬರಾಜಿಗೆ ವ್ಯವಸ್ಥೆ ಮಾಡುತ್ತಿದ್ದಾರೆ.
ಕೆಲ ವರ್ಷಗಳಿಂದ ಕೊಟ್ಟೂರು ಕೆರೆ ಹತ್ತಿರದ ಕೊಳವೆಬಾವಿಯಿಂದ ಅವಳಿ ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಆಗುತ್ತಿತ್ತು. ಆದರೆ ಕಳೆದ ನಾಲ್ಕೈದು ದಿವಸಗಳಿಂದ ಈ ಕೊಳವೆಬಾವಿ ನೀರು ಕೆಟ್ಟವಾಸನೆ, ಹಾಗೂ ಸತ್ತ ಗೊದ್ದಿಗೆ ತಲೆ, ದೇಹ, ಕೈಕಾಲುಗಳು ಬರುತ್ತಿವೆ ಎಂದು ಗ್ರಾಮದ ಮಹಾಂತೇಶ, ಮೂಗಪ್ಪ, ಬಸವರಾಜ್ ಭಾನುವಾರ ಸುದ್ದಿಗಾರರಿಗೆ ಮಾಹಿತಿ ನೀಡಿದರು.
ವಿಷಯ ತಿಳಿಯುತ್ತಿದ್ದಂತೆ ನಾನು ಗ್ರಾಮಕ್ಕೆ ಭೇಟಿ ನೀಡಿ, ನೀರನ್ನು ಪರೀಕ್ಷಿಸಿದೆ. ಗ್ರಾಮಸ್ಥರು ಹೇಳುವುದು ನಿಜವಿತ್ತು. ನಂತರ ಗ್ರಾಮಕ್ಕೆ ಸರಬರಾಜು ಆಗುತ್ತಿದ್ದ ಕೊಳವೆಬಾವಿ ನೀರನ್ನು ಪರೀಕ್ಷಿಸಿದೆ. ಸತ್ತಗೊದ್ದಿಗೆ ಬರುತ್ತಿವೆ. ಎರಡು ದಿವಸ ಆ ಕೊಳವೆಬಾವಿ ನೀರನ್ನು ಹೊರಗೆ ಬಿಡಲಾಗಿದೆ. ಆದರೂ ಗುದ್ದಿಗೆ ಬರುವುದು ನಿಂತ್ತಿಲ್ಲ ಎಂದು ಪಿಡಿಓ ಸುದ್ದಿಗಾರರಿಗೆ ತಿಳಿಸಿದರು.ನೂರಾರು ಅಡಿ ಆಳದಿಂದ ಗೊದ್ದಿಗೆಗಳು ನೀರಿನಲ್ಲಿ ಬರುವುತ್ತಿವೆ. ಹೇಗೆ ನಿಯಂತ್ರಿಸಬೇಕು. ಬೇರೆ ಮಾರ್ಗೋಪಾಯ ತಿಳಿಯುತ್ತಿಲ್ಲ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ