ಏ.10ಕ್ಕೆ ಉದ್ಗಾಟನಾ ಪೂರ್ವ ಸಿದ್ದತಾ ಸಭೆ..!!

ಹಾವೇರಿ :

      ಕಾಗಿನೆಲೆ ಮಹಾ ಸಂಸ್ಥಾನ ಕನಕಗುರು ಪೀಠ ವತಿಯಿಂದ ಬಳ್ಳಾರಿ ಜಿಲ್ಲೆಯ ಹೂಲಿನಹಡಗಲಿ ತಾಲೂಕಿನ ಶ್ರೀ ಕ್ಷೇತ್ರ ಮೈಲಾರದಲ್ಲಿ ಭವ್ಯವಾದ ಶಾಖಾ ಮಠ ನಿರ್ಮಾಣ ಮಾಡಲಾಗಿದ್ದು, ಈ ಶಾಖಾ ಮಠ ಉದ್ಘಾಟನಾ ಸಮಾರಂಭ ಕುರಿತು ಏಪ್ರಿಲ್ 10 ಬುಧವಾರ ಬೆಳಿಗ್ಗೆ 10 ಗಂಟೆ ಸಮಯಕ್ಕೆ ಪೂರ್ವಭಾವಿ ಸಭೆಯನ್ನು ಮೈಲಾರ ಶಾಖಾ ಮಠದಲ್ಲಿ ಕರೆಯಲಾಗಿದೆ.

     ಶ್ರೀಮದ್ ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳು ಈ ಪೂರ್ವಭಾವಿ ಸಭೆಯ ದಿವ್ಯ ಸಾನಿಧ್ಯವನ್ನು ವಹಿಸಿಕೊಳ್ಳಲಿದ್ದಾರೆ. ಜಿಲ್ಲೆಯ ಶ್ರೀ ಮಠದ ಸದ್ಭಕ್ತರು, ಸಮಾಜದ ಹಾಲಿ, ಮಾಜಿ ಶಾಸಕರು, ಜಿ.ಪಂ. ತಾ.ಪಂ. ಗ್ರಾ.ಪಂ ಅಧ್ಯಕ್ಷರು, ಸದಸ್ಯರು ಹಾಗೂ ಸಮಾಜ ಸಂಘಟನೆಯ ಅಧ್ಯಕ್ಷರು, ಪದಾಧಿಕಾರಿಗಳು, ನೌಕರರ ಸಂಘದ ಅಧ್ಯಕ್ಷರು ಪದಾಧಿಕಾರಿಗಳು, ಸಮಾಜದ ಮುಖಂಡರು, ಗುರು ಹಿರಿಯರು, ಕನಕಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಜಿಲ್ಲಾ ಪ್ರದೇಶ ಕುರುಬ ಸಂಘ ಅಧ್ಯಕ್ಷರಾದ ಮಾರುತಿ ಹರಿಹರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಹನುಮಂತಗೌಡ ಗಾಜೀಗೌಡ್ರ ಜಂಟಿ ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link