ತುರುವೇಕೆರೆ:
ತುಮಕೂರು ಲೋಕಸಭಾ ಕ್ಷೇತ್ರದ ಜೆಡಿಎಸ್- ಕಾಂಗ್ರೇಸ್ ಮೈತ್ರಿ ಅಭ್ಯರ್ಥಿ ಮಾಜಿ ಪ್ರದಾನಿ ಹೆಚ್.ಡಿ.ದೇವೇಗೌಡರು 3 ಲಕ್ಷ ಅಧಿಕ ಮತಗಳಿಂದ ಗೆಲುವು ಸಾದಿಸಲಿದ್ದಾರೆ ಎಂದು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ತಾಲೂಕಿನ ದಬ್ಬೇಘಟ್ಟ ಹೋಬಳಿ ಮುತ್ತುಗದಹಳ್ಳಿ ಗ್ರಾಮದಲ್ಲಿ ಮೈತ್ರಿ ಅಭ್ಯರ್ಥಿ ದೇವೇಗೌಡರ ಪರ ಮತಯಾಚನೆಗೆ ಆಯೋಜಿಸಿದ್ದ ಜೆಡಿಎಸ್ – ಕಾಂಗ್ರೇಸ್ ಮುಖಂಡರ ಬೈಕ್ ರ್ಯಾಲಿ ಹಾಗೂ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಈಗಾಗಲೇ ಮೈತ್ರಿ ಅಭ್ಯರ್ಥಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಜಿಲ್ಲೆಯಲ್ಲಿ ಗೆಲುವು ಸಾದಿಸಿದ್ದಾರೆ. ಚುನಾವಣೆಯಲ್ಲಿನ ಪಲಿತಾಂಶದಿಂದ ಮಾತ್ರ ಮತಗಳ ಅಂತರವನ್ನು ತಿಳಿಯಬೇಕಿದೆ.
ತುರುವೇಕೆರೆ ಕ್ಷೇತ್ರದ ಜೆಡಿಎಸ್ ಭದ್ರಕೋಟೆಯಾಗಿದ್ದು ಮಾಜಿ ಪ್ರಧಾನಿ ದೇವೇಗೌಡರೇ ಸ್ಪರ್ಧಿಸಿರುವುದು ನಮ್ಮ ನಿಮ್ಮೆಲ್ಲರ ಸೌಭಾಗ್ಯ. ಅದ್ದರಿಂದ ತಾಲೂಕಿನಿಂದ 1 ಲಕ್ಷಕ್ಕೂ ಅಧಿಕ ಮತಗಳು ದೇವೇಗೌಡರಿಗೆ ಬೀಳವ ಮೂಲಕ ಗೆಲವು ಸಾದಿಸಲಿದ್ದಾರೆ ಎಂದರು.
ಕಾಂಗ್ರೇಸ್ ಹಿರಿಯ ಮುಖಂಡ ಚೌದ್ರಿ ರಂಗಪ್ಪ ಮಾತನಾಡಿ ನಮ್ಮ ರಾಷ್ಟ್ರ ಹಾಗೂ ದೇಶದ ಸಂವಿಧಾನ ಉಳಿಯಬೇಕಾದರೆ ಈ ಚುನಾವಣೆ ಅತ್ಯವಶ್ಯಕವಾಗಿದೆ. ತುಮಕೂರು ಜಿಲ್ಲೆಯ ಅಭಿವೃದ್ದಿಗೆ ಹೆಚ್.ಡಿ.ದೇವೇಗೌಡರನ್ನು ಬೆಂಬಲಿಸಿ ಹೆಚ್ಚು ಮತಗಳ ಅಂತರದಲ್ಲಿ ಗೆಲ್ಲಿಸಬೇಕೆಂದು ವಿನಂತಿಸಿದರು.
ನೂರಾರು ಬೈಕ್ ಗಳ ಮೂಲಕ ಕಾರ್ಯಕರ್ತರು ದೆಬ್ಬೆಘಟ್ಟ ಹೋಬಳಿಯ ಗ್ರಾಮಗಳಲ್ಲಿ ಪ್ರಚಾರ ಕಾರ್ಯ ನೆಡೆಸಿದರು. ಪ್ರಚಾರ ಕಾರ್ಯಕ್ರಮದಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಸ್ವಾಮಿ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರುಗಳಾದ ನಾಗೇಶ್, ಪ್ರಸನ್ನಕುಮಾರ್, ಎಐಸಿಸಿ ಸದಸ್ಯ ಸುಬ್ರಮಣಿ ಶ್ರೀಕಂಠೆಗೌಡ, ಮುಖಂಡರಾದ ಶಿವರಾಜು, ರಾಜೀವ್‍ಕೃಷ್ಣಪ್ಪ, ವಿಜಿಕುಮಾರ್, ನಂಜುಂಡಪ್ಪ, ಟಾಕೀಸ್ ಟಿ.ಕೆ.ಸತೀಶ್, ಪ್ರಕಾಶ್, ಬೋರೇಗೌಡ, ಸೋಮಣ್ಣ, ಬಸವರಾಜು ಸೇರಿದಂತೆ ಆನೇಕ ಮುಖಂಡರುಗಳು ಪಾಲ್ಗೋಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
