ಮೋದಿ ಪ್ರಧಾನಿಯಾದ್ರೆ, ರೇವಣ್ಣ ರಾಜಕೀಯ ನಿವೃತ್ತಿ!?

ಮೈಸೂರು:

      ‘ನರೇಂದ್ರ ಮೋದಿ ಮತ್ತೆ ಪ್ರಧಾನಿಯಾದ್ರೆ ನಾನು ರಾಜಕೀಯ ನಿವೃತ್ತಿ ಪಡೆಯುವೆ’ ಎಂದು ಸಚಿವ ಹೆಚ್‌.ಡಿ.ರೇವಣ್ಣನವರು ಹೇಳಿಕೆ ನೀಡಿದ್ದಾರೆ.

     ಅವರು ಇಂದು ಮೈಸೂರಿನ ಹುಣಸೂರಿನಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡುತ್ತಾ, ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದಿಲ್ಲ. ಒಂದು ವೇಳೆ ಅವರು ಪ್ರಧಾನಿಯಾದ್ರೆ ನಾನು ನಿವೃತಿ ತೆಗೆದುಕೊಳ್ಳುವೆ ಎಂದು ಹೇಳಿದ್ದಾರೆ.

      ಇನ್ನು ಬಿಎಸ್‌ವೈಗೆ 22 ನಂಬರ್‌ ಆಗಿ ಬರೋದಿಲ್ಲ ಅಂತ ಹೇಳಿದ ಅವರು, ನಮಗೆ ಆ ನಂಬರ್‌ ಆಗಿ ಬರುತ್ತದೆ ಹೀಗಾಗಿ ನಾವು 22 ಸೀಟುಗಳನ್ನು ಗೆಲ್ಲುತ್ತೇವೆ ಎಂದು ಭವಿಷ್ಯ ನುಡಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ