ಮತಗಟ್ಟೆ ಅಧಿಕಾರಿಗಳಿಗೆ ಎರಡನೇ ಹಂತದ ತರಬೇತಿ ಕಾರ್ಯಕ್ರಮ

ಬೆಂಗಳೂರು

        ಲೋಕಸಭಾ ಚುನಾವಣೆಯಲ್ಲಿ ಪಾಲ್ಗೊಳ್ಳುವ ಮತಗಟ್ಟೆ ಅಧಿಕಾರಿಗಳು ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ಎರಡನೇ ಹಂತದ ತರಬೇತಿ ಕಾರ್ಯಕ್ರಮವನ್ನು ನಗರದಲ್ಲಿ ಗುರುವಾರ ನಡೆಸಲಾಯಿತು.

       ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ 159 ಪುಲೀಕೇಶಿನಗರದ ಸವೆಂತ್ ಡೇ ಅಡ್ವನೇಟಿಸ್ಟ್ ಶಾಲೆಯ ಸಭಾಂಗಣದಲ್ಲಿ ವಿವಿಧ ವಿಧಾನಸಭಾ ಮತಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ ಮತಗಟ್ಟೆ ಅಧಿಕಾರಿಗಳು ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಗಳು ತರಬೇತಿಯಲ್ಲಿ ಪಾಲ್ಗೊಂಡಿದ್ದರು.

      ತರಬೇತಿಯಲ್ಲಿ ಪಾಲ್ಗೊಂಡ ಅಧಿಕಾರಿಗಳು ಮತದಾನದ ಎಲ್ಲ ವಿಧಿ ವಿಧಾನಗಳನ್ನು ತಿಳಿದುಕೊಳ್ಳಬೇಕು. ಇವಿಎಂ ಕಾರ್ಯವಿಧಾನಗಳ ಬಗ್ಗೆ ಸ್ಪಷ್ಟವಾಗಿ ಅರಿಯಬೇಕು. ತಮ್ಮ ತಂಡದ ಎಲ್ಲ ಸದಸ್ಯರ ಜತೆಗೂಡಿ ನಿಯಮಾನುಸಾರ ಕರ್ತವ್ಯ ನಿರ್ವಹಿಸಬೇಕು ಎಂದು ಚುನಾವಣಾಧಿಕಾರಿ(ಎಆರ್ ಓ) ಡಾ. ಎಂ.ಜಿ.ಶಿವಣ್ಣ ಸೂಚನೆ ನೀಡಿದರು.

       ಮತಗಟ್ಟೆ ಅಧಿಕಾರಿಗಳು ತಮ್ಮ ತಮ್ಮ ಕಾರ್ಯದ ಬಗ್ಗೆ ಮೊದಲು ಅರಿತುಕೊಳ್ಳಬೇಕು. ಏನಾದರೂ ಅನುಮಾನಗಳಿದ್ದರೆ ವಿಧಾನಸಭಾ ಮಟ್ಟದ ತರಬೇತುದಾರರಿಂದ ಬಗೆಹರಿಸಿಕೊಳ್ಳಬೇಕು.ವಿದ್ಯುನ್ಮಾನ ಮತಯಂತ್ರಗಳ ಕಾರ್ಯಗಳ ಬಗ್ಗೆ ಸಂದೇಹವಿದ್ದರೆ ಮಾಸ್ಟರಿಂಗ್ ಕೇಂದ್ರದಲ್ಲಿ ತರಬೇತಿಗಾಗಿ ಇರಿಸಿರುವ ಯಂತ್ರಗಳನ್ನು ಪ್ರಾಯೋಗಿಕವಾಗಿ ಬಳಸಿ ಮಾಹಿತಿ ಪಡೆಯಬಹುದು ಎಂದು ಹೇಳಿದರು.

       ಮತಯಂತ್ರಗಳ ಕಾರ್ಯನಿರ್ವಹಣೆ, ಅಣಕು ಮತದಾನ, ಮತಗಟ್ಟೆಯಲ್ಲಿ ಅನುಸರಿಸಬೇಕಾದ ಕಾರ್ಯವಿಧಾನಗಳು, ಅರ್ಜಿ ನಮೂನೆಗಳನ್ನು ಭರ್ತಿ ಮಾಡುವ ವಿಧಾನ, ಮತದಾನದ ಸಾಮಗ್ರಿ, ಮತದಾನ ದಿನ ಪಡೆಯಬೇಕಾದ ಸಾಮಗ್ರಿಗಳು, ಮತಗಟ್ಟೆ ತಲುಪಿದ ಮೇಲೆ ಮಾಡುವ ಕೆಲಸ, ಕಂಟ್ರೋಲ್ ಯುನಿಟ್, ಬ್ಯಾಲೆಟ್ ಯುನಿಟ್, ವಿವಿಪ್ಯಾಟ್, ಮತದಾನ ಖಾತ್ರಿ ಮತ್ತು ಪ್ರದರ್ಶಕ ತೆರೆ ಯಂತ್ರಗಳನ್ನು ಜೋಡಿಸುವ ವಿಧಾನ ಕುರಿತು ಮಾಹಿತಿ ನೀಡಲಾಯಿತು

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link