ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಬೆಳೆಯಬೇಕು

ಚಿತ್ರದುರ್ಗ

     ವಿಧ್ಯಾರ್ಥಿಗಳು ಬರೀ ಪದವಿ ಹಾಗೂ ಅಂಕಗಳು ಪಡೆಯುವುದು ಮುಖ್ಯವಲ್ಲ ಉದ್ಯೋಗಕ್ಕೆ ಹಾಗೂ ಜೀವನಕ್ಕೆ ಬೇಕಾಗುವ ವೃತ್ತಿ ಕೌಶಲ್ಯತೆ. ಮಾನವೀಯ ಮೌಲ್ಯಗಳು ಹಾಗೂ ಸೇವಾ ಮನೋಭಾವನೆ ಉತ್ತಮ ಪರಿಣಿತಿ ಹೊಂದಿರಬೇಕು ಎಂದು ಎಸ್.ಜೆ.ಎಂ ವಿದ್ಯಾಪೀಠದ ಕಾರ್ಯದರ್ಶಿಯಾದ ಎ.ಜೆ ಪರಮಶಿವಯ್ಯನವರು ತಿಳಿಸಿದರು.

     ಚಂದ್ರವಳ್ಳಿ ಎಸ್.ಜೆ.ಎಂ ಕಾಲೇಜುನಲ್ಲಿ ಗುರುವಾರ ನಡೆದ ಶೈಕ್ಷಣಿಕ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿ ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳು ಸಾಮಾಜಿಕ ಕಳಕಳಿ ಶಿಸ್ತು, ಶ್ರದ್ದೆ ಸತತ ಅಧ್ಯಯನ ಬೆಳೆಸಿಕೊಂಡು ಸುಂದರ ಜೀವನ ನಿರ್ಮಾಣ ಮಾಡಿಕೊಳ್ಳಬೇಕೆಂದು ತಿಳಿಸಿದರು.

      ಯಾವುದೇ ಸಮಸ್ಯೆ ಬಂದರೂ ದೃತಿಗೆಡೆದೆ ಧೈರ್ಯದಿಂದ ಮುನ್ನಡೆಯಬೇಕು ಸಮಯ ವ್ಯರ್ಥ ಮಾಡದೇ ತಮ್ಮ ಗುರಿಯನ್ನು ಸಾಧಿಸಿ ಸುಂದರ ಜೀವನ ಬದುಕು ರೂಪಿಸಿಕೋಳ್ಳಬೇಕು ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಏಕಾಗ್ರತೆ ಗುರು ಹಿರಿಯರಲ್ಲಿ ಗೌರವ ಉತ್ತಮ ಚಿಂತನೆ ಆಲೋಚನೆ ಅವಶ್ಯಕವಾಗಿದೆ ಎಂದರು

       ಸರ್ಕಾರಿ ವಿಜ್ಣಾನ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ.ಪಿ.ಲಿಂಗಣ್ಣಯ್ಯ ರವರು ಮಾತನಾಡಿ ವಿದ್ಯಾರ್ಥಿಗಳಲ್ಲಿ ಸಂಸ್ಕತಿ, ಸಂಸ್ಕಾರ ಜಾಗೃತಿ ಮನಸ್ಸು ಇರಬೇಕು ದೇಶಕ್ಕಾಗಿ ಶ್ರಮಿಸಿದ ಬುದ್ಧ, ಬಸವ, ಅಂಬೇಡ್ಕರ್, ಗಾಂಧೀಜಿಯವರ ಆದರ್ಶ ಪಾಲಿಸುವುದರೊಂದಿಗೆ ದೇಶಾಭಿಮಾನ ಬೆಳೆಸಿಕೊಳ್ಳಬೇಕು ಎಂದರು

        ಸಾಮಾಜಿಕ ಪ್ರಜ್ಞೆ, ಪರಿಸರ ಪ್ರಜ್ಞೆ, ಸಾಂಸ್ಕøತಿಕ ಕಳಕಳಿ ಅಗತ್ಯ ಉತ್ತಮ ಪರಿಸರ ನಿರ್ಮಾಣ ಮಾಡಿಕೊಳ್ಳದಿದ್ದರೆ ಮುಂದಿನ ಪೀಳಿಗೆಗೆ ಹಾನಿ ಮಾಡಿದಂತಾಗುತ್ತದೆ ವಿದ್ಯಾರ್ಥಿಗಳು ಜಾಗೃತಿ ಗೊಂಡು ಸಾಮಾಜಿಕ ಮುಖಿಯಾಗಿ ಕೆಲಸ ನಿರ್ವಹಿಸಬೇಕೆಂದು ತಿಳಿಸಿದರು.

       ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್.ಜೆ.ಎಂ ಮಹಾವಿದ್ಯಾಲಯದ ಪ್ರಾಚಾರ್ಯಾರಾದ ಡಾ.ಕೆ.ಸಿ ರಮೇಶ್‍ರವರು ಮಾತನಾಡಿ ಪಠ್ಯದ ಜೊತೆ ಕ್ರೀಡೆ ಹಾಗೂ ಸಾಂಸ್ಕøತಿಕ ಚಟುವಟಿಕೆಯಲ್ಲಿ ತೊಡಗಬೇಕು ಶಿಸ್ತು,ಶ್ರದ್ಧೆ, ನಾಯಕತ್ವ ಗುಣಗಳು ಕೌಶಲ್ಯತೆ, ಭಾಷಾ ಸಂಹವನಕಲೆ ಸ್ವಾವಲಂಬನೆ ಬದುಕು ಕಲಿಯಬೇಕಾಗಿದೆ. ಈಗ ಚುನಾವಣೆ ಇರುವುದರಿಂದ ಪ್ರತಿಯೊಬ್ಬರು ಮತದಾನ ಮಾಡಬೇಕು ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗಬೇಡಿ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಿದರೆ ಸದೃಡ ದೇಶ ಮಾಡುವ ಶಕ್ತಿ ಯುವಜನರ ಮೇಲಿದೆ ಎಂದು ತಿಳಿಸಿದರು.

       ಮುಖ್ಯ ಅತಿಥಿಗಳಾಗಿ ಆಗಮಿಸಿದ ದಾವಣಗೆರೆಯ ವಿ.ವಿ.ಖಾಸಗಿ ಕಾಲೇಜಿನ ಅದ್ಯಾಪಕರ ಸಂಘದ ಕಾರ್ಯದರ್ಶಿ ಪ್ರೋ|| ಬಿ.ಎಸ್.ಉಮಾಮಹೇಶ್ವರ್‍ರವರು ಮಾತನಾಡಿ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು ಹಲವರು ದುಶ್ಚಟಗಳಿಗೆ ಬಲಿಯಾಗಿ ಪ್ರೀತಿ ಪ್ರೇಮ ಹೆಸರಿನಲ್ಲಿ ಜೀವನ ಹಾಳು ಮಾಡಿಕೊಳ್ಳುತಿದ್ದಾರೆ ಗುರಿ ಆದರ್ಶಗಳು ಇಲ್ಲದಿರುವುದೇ ಕಾರಣವಾಗಿದೆ ಸಾಮಾಜಿಕ ಹೊಣೆಗಾರಿಕೆ ಅರಿತು ಕೆಲಸ ನಿರ್ವಹಿಸಿದರೆ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯವಿದೆ ಎಂದು ತಿಳಿಸಿದರು.

         ಇದೇ ಸಂದರ್ಭದಲ್ಲಿ ದಾವಣಗೆರೆ ವಿಶ್ವ ವಿದ್ಯಾಲಯದ ಕಲಾ ವಿಭಾಗದಲ್ಲಿ 3 ನೇ ರ್ಯಾಂಕ್ ಗಳಿಸಿದ ವಿಕಾಸ ಕುಮಾರ್ ಹಾಗೂ ಬೆಂಗಳೂರಿನಲ್ಲಿ ನಡೆದ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಬಿ.ಆರ್. ಅವಿನಾಶ್ ರವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಯಿತು.ಕ್ರೀಡಾ ಹಾಗೂ  ವಿಜೇತರಾದವರಿಗೆ ಕಂಚಿನ ಪದಕ ಹಾಗೂ ಪ್ರಶಸ್ತಿ ಪತ್ರ ನೀಡಲಾಯಿತು. ವಿದ್ಯಾರ್ಥಿನಿ ಸುಶ್ಮಿತಾ ಸ್ವಾಗತಿಸಿದರು, ಎಂ.ಪೂಜಾ ವಂದಿಸಿದರು, ನಾಗಶ್ರೀ ಹಾಗೂ ಮೇಘನಾ ಕಾರ್ಯಕ್ರಮವನ್ನು ನಿರೂಪಿಸಿದರು ನಂತರ ವಿದ್ಯಾಥಿಗಳಿಂದ ಸಾಂಸ್ಕತಿಕ ಕಾರ್ಯಕ್ರಮಗಳು ಜರುಗಿದವು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link