ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದಿಂದ ಡಾ. ಬಿ.ಆರ್ ಅಂಬೇಡ್ಕರ್ ಅವರ 128 ನೇ ಜಯಂತಿ

ಹಾವೇರಿ :

      ಸಂವಿಧಾನ ಬದಲಾವಣೆಯ ಅಂಜೆಂಡಾ ಹೊಂದಿರುವ ಬಿಜೆಪಿ ಪಕ್ಷವನ್ನು ಈ ಲೋಕಸಭಾ ಚುನಾವಣೆಯಲ್ಲಿ ಸೋಲಿಸಿ ಭಾರತ ಉಳಿಸಿ ಎಂದು ಡಿಎಸ್‍ಎಸ್ ರಾಜ್ಯ ಸಂಚಾಲಕರಾದ ಹೆಣ್ಣೂರು ಶ್ರೀನಿವಾಸ್ ಹೇಳಿದರು. ನಗರದ ಖಾಸಗಿ ಹೊಟೆಲಿನಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದಿಂದ ಆಯೋಜಿಸಿದ ಡಾ|| ಬಿ.ಆರ್ ಅಂಬೇಡ್ಕರ್ ಅವರ 128 ನೇ ಜಯಂತಿ ನಿಮಿತ್ಯ ಸಂವಿಧಾನ ಉಳಿಸಿ ಮನುವಾದ ಧಿಕ್ಕರಿಸಿ ಆಂದೋಲನದ ವಿಚಾರ ಸಂಕಿರಣವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.

       ದೇಶದಲ್ಲಿ ಮನುವಾದತನವನ್ನು ಅಳವಡಿಸಿಕೊಂಡು ದೇಶದ ದಿಕ್ಕನ್ನೆ ತಪ್ಪಿಸುತ್ತಿರುವ ಬಿಜೆಪಿ ಪಕ್ಷ ದಿನ ದಲಿತರ, ಹಿಂದುಳಿದವರ ಮಾರ್ಗದರ್ಶಿಯಾದ ದೇಶದ ಶ್ರೇಷ್ಠತೆಯಿಂದ ಕೂಡಿದ ಡಾ||ಬಿಆರ್ ಅಂಬೇಡ್ಕರ್ ಅವರು ರಚಿಸಿದ ಭಾರತ ಸವಿಂಧಾನ ಬದಲಾವಣೆ ಮಾಡುವ ಹುನ್ನಾರ ಬಿಜೆಪಿ ಪಕ್ಷ ಮಾಡುತ್ತಿದೆ. ಬಿಜೆಪಿ ಪಕ್ಷದವರಿಗೆ ತಮ್ಮ ಮನುವಾದವೇ ಶ್ರೇಷ್ಠ ಎನ್ನುತ್ತಾರೆ. ಬಿಜೆಪಿಯವರು ಈ ರಾಜಕೀಯ ಸ್ಥಾನ ಮಾನ ಪಡೆದಿರುವ ಸಂವಿಧಾನವನ್ನು ಗೌರವಿಲಾರರು.

         2014 ರಲ್ಲಿ ಬಿಜೆಪಿ ಭರವಸೆ ನೀಡಿದ ಕಪ್ಪು ಹಣ ಎಲ್ಲಿ ? 15 ಲಕ್ಷ ಎಲ್ಲಿ ? ಪ್ರತಿ ವರ್ಷ 2 ಕೋಟಿ ಒಟ್ಟಾರೆ 5 ವರ್ಷದಲ್ಲಿ 10 ಕೋಟಿ ಉದ್ಯೋಗ ಎಲ್ಲಿ ? ಕಳೆದ ಬಾರಿ ಸುಳ್ಳು ಹೇಳಿ ಅಧಿಕಾರಕ್ಕೆ ಬಂದು, 2019 ಚುನಾವಣೆಯಲ್ಲಿ ಬಿಜೆಪಿ ಪಕ್ಷದವರು ಹೇಗೆ ಮತ ಕೇಳುತ್ತಾರೋ ಗೊತ್ತಿಲ್ಲ.

          ಬಿಜೆಪಿ ಪಕ್ಷ ದಿನದಲಿತರ ವಿರೋಧಿ ನೀತಿ ಹೊಂದಿದ್ದು, ಈ ಬಾರಿ ಬಿಜೆಪಿ ಪಕ್ಷ ಸೋಲಿಸಿ ಭಾರತ ಉಳಿಸಿ ಎಂದು ಮತ್ತೊಮ್ಮೆ ಹೆಣ್ಣೂರು ಶ್ರೀನಿವಾಸ್ ಕರೆ ನೀಡಿದರು. ರಾಜ್ಯ ಸಂಘಟನಾ ಸಂಚಾಲಕ ಮರೀಶ್ ನಾಗಣ್ಣನವರ ಮಾತನಾಡಿ ಮಿಸಲಾತಿ ಮುಂಬಡ್ತಿಯಲ್ಲಿ ಬಿಜೆಪಿ ಏನು ಮಾಡುತ್ತದೆ ಗೊತ್ತು. ಬಿಜೆಪಿ ಆರ್‍ಎಸ್‍ಎಸ್ ಅಜೆಂಡಾ ಒಂದೆಯಾಗಿವೆ. ದಲಿತರ ಹಕ್ಕುಗಳನ್ನು ಕಪಾಡುವಲ್ಲಿ ಬಿಜೆಪಿ ಪಕ್ಷ ವಿಫಲವಾಗಿದೆ.

            ಶ್ರೀಮಂತರ ಪರವಾಗಿರುವ ಇವರು 10 % ಮಿಸಲಾತಿ ತರಲು ಹೊರಟಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಡಿಎಸ್‍ಎಸ್ ರಾಜ್ಯ ಸಮಿತಿ ಸದಸ್ಯ ಉಡಚಪ್ಪ ಮಾಳಗಿ ಮಾತನಾಡಿ ದಲಿತರ ಮೇಲೆ ಕಾಳಜಿವಹಿಸದೇ ಡಾ|| ಅಂಬೇಡ್ಕರ್ ನೀಡಿದ ಸಂವಿಧಾನ ಬದ್ದ ಹಕ್ಕುಗಳನ್ನು ಕಾಪಾಡುವಲ್ಲಿ ಬಿಜೆಪಿ ವಿಫಲವಾಗಿದೆ.

            ದೇಶದ ಸಂವಿಧಾನ ಬದಲಾವಣೆಯ ಮನೋಧೋರಣೆ ಹೊಂದಿರುವ ಬಿಜೆಪಿ ಪಕ್ಷವನ್ನು ಬೆಂಬಲಿಸದೇ ಸಂವಿಧಾನ ರಕ್ಷಣೆ ಮಾಡುವವರಿಗೆ ನಮ್ಮ ಬೆಂಬಲ ಎಂದು ವಿಚಾರ ಸಂಕಿರಣದಲ್ಲಿ ಉಡಚಪ್ಪ ಮಾಳಗಿ ಕರೆ ನೀಡಿದರು. ಜಿಲ್ಲಾ ಸಂಚಾಲಕರಾದ ಮಾಲತೇಶ ಯಲ್ಲಾಪೂರ, ವಕೀಲರಾದ ಎಸ್,ಜಿ ಹೊನ್ನಪ್ಪನವರ, ಹೊನ್ನಪ್ಪ ತಗಡಿನಮನಿ,ನೀಲಕಂಠಪ್ಪ ಕೂಸನೂರ,ಹನುಮಂತಪ್ಪ ದೊಡ್ಡಮನಿ ,ಮಾರುತಿ ಸಿಳ್ಳಿಕ್ಯಾತರ,ಸಂಜಯ ಗಾಂಧಿ ಸಂಜೀವಣ್ಣನವರ,ಎಸ್.ಸಿ ಘಟಕದ ಕಾಂಗ್ರೇಸ್ ಅಧ್ಯಕ್ಷ ಎಸ್. ಎಪ್ ಮನಿಕಟ್ಟಿ. ಗಣೇಶ ಪೂಜಾರ,ನಿಂಗಪ್ಪ ನಿಂಬಕ್ಕನವರ,ಸುರೇಶ ಹಳ್ಳಳ್ಳಿ,ಮಂಜಪ್ಪ ಮರೋಳ,ನೀಲಪ್ಪ ಬೆಳವಿಗಿ,ಗುಡ್ಡಪ್ಪ ಚಿಕ್ಕಪ್ಪನವರ,ಭೀಮಣ್ಣ ಯಲ್ಲಾಪೂರ,ಕುಮಾರ ಹುಚ್ಚಮ್ಮನವರ,ಮಲ್ಲೇಶಪ್ಪ ಕೆಂಚಣ್ನನವರ,ಪ್ರಕಾಶ ಶಿಬಾರ ಸೇರಿದಂತೆ ನೂರಾರು ದಲಿತ ಮುಖಂಡರು ಕಾರ್ಯಕರ್ತರು ಪಾಲ್ಗೊಂಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link