ಹಾವೇರಿ :
ಹಾವೇರಿ ಲೋಕಸಭಾ ಕ್ಷೇತ್ರದ ಬಿಎಸ್‍ಪಿ ಪಕ್ಷದ ಅಭ್ಯರ್ಥಿ ಎ,ಎ ಪಠಾಣ ಪರ ರಾಣೆಬೆನ್ನೂರ ನಗರದ ಸಿದ್ದೇಶ್ವರ ನಗರ, ಎಂಜಿ ರೋಡ, ಸುಣಗಾರ ಓಣಿ ನಗರದ, ಹರಳಯ್ಯನಗರ. ಡಾ|| ಬಿಆರ್ ಅಂಬೇಡ್ಕರ್ ಕಾಲನಿ ಅನೇಕ ಸಾರ್ವಜನಿಕ ಸ್ಥಳಗಳಲ್ಲಿ ಪ್ರಚಾರ ಮಾಡಲಾಯಿತು.
ಬಿಎಸ್ಪಿ ಬಿಎಸ್‍ಪಿ ಪಕ್ಷದ ಅಭ್ಯರ್ಥಿ ಎ,ಎ ಪಠಾಣ ಮಾತನಾಡಿ ರಾಣೆಬೆನ್ನೂರ ತಾಲೂಕಿನಲ್ಲಿ ನಮ್ಮ ಪಕ್ಷದ ಬಗ್ಗೆ ಮತದಾರರು ಒಲವು ತೋರುತ್ತಿದ್ದಾರೆ. ಉಭಯ ಪಕ್ಷದಲ್ಲಿನ ಒಳಜಗಳದಿಂದ ಬೇಸತ್ತ ಜನರು ಅಕ್ಕ ಮಾಯಾವತಿಯವರ ಕೆಲಸಗಳನ್ನು ಮೆಚ್ಚಿ ಆನೆ ಗುರುತಿಗೆ ಮತದಾನ ಮಾಡುವ ಹಂಬಲದಲ್ಲಿ ಇದ್ದಾರೆ ಎಂದು ಹೇಳಿದರು.
ಪಕ್ಷದ ಜಿಲ್ಲಾಧ್ಯಕ್ಷರಾದ ಅಶೋಕ ಮರೆಣ್ಣನವರ ಪಕ್ಷದ ಅಭ್ಯರ್ಥಿ ಎ,ಎ ಪಠಾಣ ಎಲ್ಲ ರೀತಿಯಿಂದಲೂ ಉತ್ತಮ ಜನಸೇವೆ ಮಾಡಲು ಅರ್ಹತೆಯುಳ್ಳವರಾಗಿದ್ದು ತಾವೆಲ್ಲರೂ ಮತ ನೀಡಿ ಗೆಲ್ಲಿಸುವಂತೆ ಕೋರಿದರು. ಪ್ರಚಾರದಲ್ಲಿ ಬಿಎಸ್ಪಿ ಪಕ್ಷ ಮುಖಂಡರಾದ ಶಂಭುಲಿಂಗಯ್ಯ ಹನಗೋಡಿಮಠ.ಅಬ್ದುಲ್‍ಖಾದರ ಧಾರವಾಡ, ವಿಜಯಕುಮಾರ ವಿರಕ್ತಮಠ.ಶಿವಕುಮಾರ ತಳವಾರ.ಎಂ.ಕೆ ಮಖಬೂಲ್.ನಾಗರಾಜ ಅಂಗಡಿ,ನಿಲಕಂಠಪ್ಪ ಗುಡಗೂರ, ಅನ್ವರಸಾಬ ಚಿಮ್ಮಲಗಿ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.