ಹಾವೇರಿ:
ತಾಲೂಕಿನ ನೆಗಳೂರ ಗ್ರಾಮದಲ್ಲಿ ವೀರಭದ್ರೇಶ್ವರ ಜಾತ್ರಾಮಹೋತ್ಸವದ ಅಂಗವಾಗಿ 108 ಕೊಡಗಳ ಗುಗ್ಗಳ ವಿಜೃಂಭಣೆಯಿಂದ ಜರುಗಿತು. ಗ್ರಾಮದ ಸಂಸ್ಥಾನ ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿಯವರಿಂದ ಗುಗ್ಗಳಕ್ಕೆ ಅಗ್ನಿ ಪಟು ಮಾಡುವುದರ ಮೂಲಕ ಚಾಲನೆ ನೀಡಿದರು. ವೀರಭದ್ರೇಶ್ವರ ದೇವಸ್ಥಾನದಿಂದ ಪ್ರಾರಂಭಗೊಂಡ ಗುಗ್ಗಳದ ಮೇರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮರಳಿ ವೀರಭದ್ರೇಶ್ವರ ದೇವಸ್ಥಾನಕ್ಕೆ ತಲುಪಿ ಸಂಪನ್ನ ಗೊಂಡಿತು.
ಮೇರವಣಿಗೆಯೂದ್ದಕ್ಕೂ ಪುರುವಂತರ ವೀರಭದ್ರೇಶ್ವರ ಒಡಪುಗಳನ್ನು ಹೇಳುತ್ತಾ ಸಾಂಬಲದ ಶಬ್ದಕ್ಕೆ ಕುಣಿದು ಕುಪ್ಪಳಿಸಿದರು. ಮಹಿಳೆಯರು ಕುಂಭ ಆರತಿಗಳನ್ನು ಹಿಡಿದು ಭಕ್ತರು ಶಸ್ತ್ರಗಳನ್ನು ಚುಚ್ಚಿಸಿಕೊಂಡು ಭಕ್ತಿಯ ಪರಾಕಾಷ್ಟೆ ಮೆರೆದರು.ಊರಿನ ಮುಖಂಡರುಗಳಾದ ಫಕ್ಕೀರಪ್ಪ ಹೊಸಮನಿ ಸೋಮಶೇಖರ ಸಪ್ಪಣ್ಣನವರ ಕೊಟ್ರೇಶ ಮಠದ ಈಶ್ವರ ಶಿಡೇನೂರ ಶಿವಕುಮಾರ ಮಾಹೂರ ಶಿವನಾಗಯ್ಯ ಮಠಪತಿ ಲಿಂಗಯ್ಯ ಮಠದ ರಮೇಶ ಶಿಡೇನೂರ ಗುರುರಾಜ ಪತ್ರಿ ಬಸವರಾಜ ಮರಗಬ್ಬಿನ್ ಸೇರಿದಂತೆ ನೆಗಳೂರ ಕೋಡಬಾಳ ಹಾಗೂ ವಿವಿಧ ಗ್ರಾಮಗಳಿಂದ ಆಗಮಿಸಿದ ಸದ್ಭಕ್ತರು ಭಕ್ತಿ ಭಾವ ಮೆರೆದರು. ನಂತರ ಪ್ರಸಾದ ವಿತರಣೆ, ಸಂಜೆ ಓಕಳಿ ಕಾರ್ಯಕ್ರಮ ನಡೆಯಿತು.