ವೀರಶೈವ-ಲಿಂಗಾಯತ ಧರ್ಮದ ಪ್ರತ್ಯೇಕತೆಗೆ ಸೋನಿಯಾಗಾಂಧಿ ಕೈವಾಡ-ಯಡಿಯೂರಪ್ಪ

ಚಳ್ಳಕೆರೆ

       ಪ್ರಸ್ತುತ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಸರ್ಕಾರದ ಎಚ್.ಡಿ.ಕುಮಾರಸ್ವಾಮಿ ಕಳೆದ 11 ತಿಂಗಳಿನಿಂದ ಆಡಳಿತ ನಡೆಸುತ್ತಿದ್ದು, ರೈತರ ಸಾಲ ಮನ್ನಾವೂ ಸೇರಿದಂತೆ ಯಾವುದೇ ಯೋಜನೆ ಜಾರಿಗೊಳಿಸಿಲ್ಲ. ಬರಿ ಸುಳ್ಳು ಭರವಸೆಯ ಮೂಲಕ ರಾಜ್ಯದ ಅಭಿವೃದ್ಧಿಯನ್ನು ಕಡೆಗಣಿಸಿದೆ.

        ರಾಜ್ಯದಲ್ಲಿ ನೂರಾರು ವರ್ಷಗಳ ಕಾಲ ಅನ್ಯೂನ್ಯವಾಗಿ ಬಾಳುತ್ತಯಿದ್ದ ವೀರಶೈವ ಸಮಾಜವನ್ನು ವೀರಶೈವ-ಲಿಂಗಾಯತ ಎಂದು ವಿಭಜಿಸಿ ಬಿಜೆಪಿ ಮತ ಬ್ಯಾಂಕ್‍ನ್ನು ಕ್ಷೀಣಗೊಳಿಸಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸಹಕಾರ ನೀಡಿದ್ದು, ಮುಂಬರುವ ದಿನಗಳಲ್ಲಿ ರಾಜ್ಯದ ಜನತೆ ಇವರಿಗೆ ಪಾಠ ಕಲಿಸಿದ್ದಾರೆಂದು ವಿರೋಧ ಪಕ್ಷದ ನಾಯಕ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

         ಅವರು, ಮಂಗಳವಾರ ಇಲ್ಲಿನ ಬಿ.ಎಂ.ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಅಭ್ಯರ್ಥಿ ಎ.ನಾರಾಯಣಸ್ವಾಮಿ ಪರ ಮತಯಾಚನೆ ಮಾಡಲು ಬಂದಿದ್ದು, ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಕಳೆದ ಐದು ವರ್ಷಗಳ ಅವಧಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರಮೋದಿಯವರ ಆಡಳಿತ ವಿಶ್ವಮಟ್ಟದಲ್ಲಿ ಎಲ್ಲರಿಗೂ ಮೆಚ್ಚುಗೆಯಾಗಿದ್ದು, ಭಾರತವನ್ನು ವಿರೋಧೀಸುತ್ತಿದ್ದ ಅನೇಕ ರಾಷ್ಟ್ರಗಳು ನರೇಂದ್ರಮೋದಿಯವರ ಕಾರ್ಯದಕ್ಷತೆಯನ್ನು ಮೆಚ್ಚಿ ಭಾರತ ಸ್ನೇಹವನ್ನು ಬಯಸುತ್ತಿವೆ.

         ಕಾಂಗ್ರೆಸ್‍ನ ಎಐಸಿಸಿ ಅಧ್ತಕ್ಷ ರಾಹುಲ್ ಗಾಂಧಿ ರಾಜಕೀಯ ಸ್ಥಿತಿಯನ್ನು ಅರಿಯದೇ ಮನಬಂದಂತೆ ಮಾತನಾಡುತ್ತಾರೆ. ಕೇಂದ್ರ ಸರ್ಕಾರಗಳ ಸಾಧನೆಯ ಬಗ್ಗೆ ಅವರಿಗೆ ಯಾವುದೇ ಮಾಹಿತಿ ಇಂದ್ದಂತಿಲ್ಲ. ಅನವಶ್ಯಕವಾಗಿ ನರೇಂದ್ರಮೋದಿಯವರನ್ನು ಚೌಕಿದಾರ್ ಚೌರ ಎಂದು ಟೀಕಿಸಿ ಈಗ ಸುಪ್ರೀಂ ಕೋರ್ಟ್‍ನಿಂದ ವಿಚಾರಣೆ ನಡೆಸುವ ಹಂತ ತಲುಪಿಸಿದ್ಧಾರೆ. ರಾಷ್ಟ್ರದಲ್ಲಿ ಮೋದಿಯವರ ಆಡಳಿತಕ್ಕೆ ಬಾರಿ ಜನ ಬೆಂಬಲ ವ್ಯಕ್ತವಾಗುತ್ತಿದ್ದು, ಚಿತ್ರದುರ್ಗ ಲೋಕಸಭಾ ಸೇರಿದಂತೆ ರಾಜ್ಯದ 22 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸಲಿದೆ ಎಂದರು.

          2008ರಲ್ಲಿ ನಾನು ರಾಜ್ಯದ ಮುಖ್ಯಮಂತ್ರಿಯಾದಾಗ ಭದ್ರ ಮೇಲ್ದಂಡೆ ಯೋಜನೆ ಕಾಮಗಾರಿಗೆ 1500 ಕೋಟಿ ಹಣ ಬಿಡುಗಡೆಗೊಳಿಸಿ ಚಾಲನೆ ನೀಡದೆ. ಆದರೆ, ಸಿದ್ದರಾಮಯ್ಯ ಮತ್ತು ಎಚ್.ಡಿ.ಕುಮಾರಸ್ವಾಮಿ ಸರ್ಕಾರಗಳು ಯೋಜನೆ ಪೂರೈಕೆಗೆ ಅವಶ್ಯವಿರುವ ಹಣವನ್ನು ಇದುವರೆಗೂ ಬಿಡುಗಡೆ ಮಾಡಿಲ್ಲ. ಹಾಗಾಗಿ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಕುಂಠಿತಸಾಗಿದೆ.

         ಮತ್ತೊಮ್ಮೆ ರಾಷ್ಟ್ರದಲ್ಲಿ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕೂಡಲೇ ಈ ಯೋಜನೆಗೆ ಕೇಂದ್ರದಿಂದಲೇ ಹಣ ಬಿಡುಗಡೆ ಮಾಡಿಸುವ ಅಭಿಲಾಷೆ ವ್ಯಕ್ತ ಪಡಿಸಿದರು. ರಾಜ್ಯದ ನಿರುದ್ಯೋಗಿ ಯುವಕ ಯುವತಿರು ಉದ್ಯೋಗ, ಕೈಗಾರಿಕ ವಲಯಗಳ ಸ್ಥಾಪನೆಗಾಗಿ 100 ಲಕ್ಷ ಕೋಟಿ ಬೃಹತ್ ಯೋಜನೆಯೊಂದನ್ನು ಜಾರಿಗೆ ತರುವ ಉದ್ದೇಶವಿದ್ದು, ಇದರಿಂದ ರಾಜ್ಯದ ಬಹುತೇಕ ನಿರುದ್ಯೋಗಿಗಳು ಉದ್ಯೋಗ ಪಡೆಯುತ್ತಾರಲ್ಲದೆ, ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ ನಿರೀಕ್ಷಿಸ ಬಹುದು ಎಂದರು.

       ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್‍ರವರು ರಚಿಸಿದ ಸಂವಿಧಾನವನ್ನು ಮೋದಿ ಸರ್ಕಾರ ಬದಲಾಯಿಸುತ್ತದೆ ಎಂಬ ಸುಳ್ಳು ಪ್ರಚಾರವನ್ನು ಕಾಂಗ್ರೆಸ್ ಹಾಗೂ ಜೆಡಿಎಸ್ ಪ್ರತಿನಿತ್ಯ ಮಾಡುತ್ತಿದ್ದು, ಇದು ಸತ್ಯಕ್ಕೆ ದೂರವಾದ ಸಂಗತಿಯಾಗಿದೆ. ಅಂಬೇಡ್ಕರ್‍ರವರ ಬಗ್ಗೆ ಮತ್ತು ಅವರ ಸಂವಿಧಾನದ ಬಗ್ಗೆ ಹೆಚ್ಚು ಗೌರವವನ್ನು ಬಿಜೆಪಿ ಹೊಂದಿದೆ. ಅಂಬೇಡ್ಕರವರನ್ನು ಚುನಾವಣೆಯಲ್ಲಿ ಸೋಲಿಸಿದ ಕೀರ್ತಿ ಕಾಂಗ್ರೆಸ್ ಪಕ್ಷದ್ದು.

        ಅಂಬೇಡ್ಕರ್‍ರವರ ನಿಧನದ ಸಂದರ್ಭದಲ್ಲಿ ನವದೆಹಲಿಯಲ್ಲಿ ಅವರ ಶವಸಂಸ್ಕಾರಕ್ಕೆ ಕಾಂಗ್ರೆಸ್ ಅವಕಾಶ ನೀಡಲಿಲ್ಲ. ಮಹರಾಷ್ಟ್ರದಲ್ಲಿ ಅವರ ಶವಸಂಸ್ಕಾರ ಮಾಡಬೇಕಾಯಿತು. ಅಂಬೇಡ್ಕರ್‍ರವರಿಗೆ ಯಾವುದೇ ರೀತಿಯ ಗೌರವವನ್ನು ನೀಡದ ಕಾಂಗ್ರೆಸ್ ಅನಗತ್ಯವಾಗಿ ಸಂವಿಧಾನ ಬದಲಾವಣೆ ಪುಕಾರು ಎಬ್ಬಿಸಿ ಬಿಜೆಪಿ ಮತಬ್ಯಾಂಕ್‍ನ್ನು ಒಡೆಯಲು ಹೊಂಚು ಹಾಕಿದೆ ಎಂದರು.

        ಇತ್ತೀಚಿನ ದಿನಗಳಲ್ಲಿ ಪ್ರಧಾನ ಮಂತ್ರಿ ನರೇಂದ್ರಮೋದಿ ಕರ್ನಾಟಕ ನಾನಾ ಪ್ರದೇಶಗಳಲ್ಲಿ ಚುನಾವಣಾ ಭಾಷಣಾ ಮಾಡಿದ್ದು, ಲಕ್ಷ ಲಕ್ಷ ಸಂಖ್ಯೆಯಲ್ಲಿ ಮೋದಿಯವರ ಭಾಷಣ ಕೇಳಲು ಜನ ಸೇರಿ ಮೋದಿ ಮೋದಿ ಕೂಗುತ್ತಾರೆ. ಇದಕ್ಕೆ ಕಾಂಗ್ರೆಸ್ ಪಕ್ಷ ಆಕ್ಷೇಪ ವ್ಯಕ್ತ ಪಡಿಸಿದೆ. ನರೇಂದ್ರಮೋದಿ ಐದು ವರ್ಷಗಳ ಕಾಲ ಆಡಳಿತ ನೀಡಿ, ಬಿಜೆಪಿ ಸೇರಿದಂತೆ ಎಲ್ಲಾ ಪಕ್ಷಗಳ ವಿಶ್ವಾಸವನ್ನು ಗಳಿಸಿದ್ಧಾರೆ.

        ವಿರೋಧ ಪಕ್ಷಗಳ ನಾಯಕರೂ ಸಹ ಮೋದಿಯವರ ಕಾರ್ಯಸಾಧನೆಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಆದರೆ, 10 ವರ್ಷಗಳ ಕಾಲ ಯುಪಿಎ ಸರ್ಕಾರದಲ್ಲಿ ಪ್ರಧಾನ ಮಂತ್ರಿಯಾಗಿದ್ದ ಮನಮೋಹನ್ ಸಿಂಗ್ ಹೆಸರನ್ನು ಕಾಂಗ್ರೆಸ್ ಪಕ್ಷದ ಯಾವ ನಾಯಕರು ಎಲ್ಲೂ ಹೇಳುವುದಿಲ್ಲ. ಆದರೆ, 10 ವರ್ಷಗಳ ಕಾಲ ಆಡಳಿತ ನಡೆಸಿದ ಪ್ರಧಾನ ಮಂತ್ರಿಗಳ ಹೆಸರು ಹೇಳಲು ಹಿಂದೇಟು ಹೊಡೆಯುತ್ತದೆ. ಮೋದಿಯವರ ಹೆಸರು ಹೇಳಿ ಬಿಜೆಪಿ ಗೆಲುವು ಸಾಧಿಸಲು ಹೊರಟಿದೆ ಎಂದು ಲೇವಡಿ ಮಾಡುತ್ತಾರೆ. ಆದರೆ, ನರೇಂದ್ರಮೋದಿಯವರ ಆಡಳಿತ ವಿಶ್ವಮಾನ್ಯತೆ ಪಡೆದಿದೆ. ಇಂತಹ ಸರ್ವಶ್ರೇಷ್ಠ ನಾಯಕ ಹೆಸರು ಹೇಳಲು ಬಿಜೆಪಿ ಹೆಮ್ಮೆ ಪಡುತ್ತದೆ ಎಂದರು.

       ಬಿಜೆಪಿ ಅಭ್ಯರ್ಥಿ ಎ.ನಾರಾಯಣಸ್ವಾಮಿ ಮಾತನಾಡಿ, ಪಕ್ಷದ ಸಾಮಾನ್ಯ ಕಾರ್ಯಕರ್ತನಾದ ನನಗೆ ಎರಡು ಬಾರಿ ಶಾಸಕನಾಗಿ ಮಾಡಿ, ಒಂದು ಬಾರಿ ಸಚಿವನಾಗಿ ಆಡಳಿತ ನಡೆಸಲು ಬಿಜೆಪಿ ಅವಕಾಶ ಮಾಡಿಕೊಟ್ಟಿದೆ. ಈಗ ಲೋಕಸಭಾ ಕ್ಷೇತ್ರಕ್ಕೆ ಪರಿಶಿಷ್ಟ ಸಮುದಾಯ ಸಾಮಾನ್ಯ ಕಾರ್ಯಕರ್ತನಾದ ನನಗೆ ಮತ್ತೊಮ್ಮೆ ಅವಕಾಶ ನೀಡಿದೆ. ಶೋಷಿತ ಸಮುದಾಯವೂ ಸೇರಿದಂತೆ ಎಲ್ಲಾ ಸಮುದಾಯಗಳ ಕಲ್ಯಾಣವನ್ನು ಬಯಸುವುದು ಬಿಜೆಪಿ ಮಾತ್ರ ಪರಿಶಿಷ್ಟ ಜಾತಿಯವರನ್ನೇ ರಾಷ್ಟ್ರಪತಿ ಸ್ಥಾನಕ್ಕೆ ಆಯ್ಕೆ ಮಾಡಿದ ಹೆಗ್ಗಳಿಕೆ ಬಿಜೆಪಿಯದು. ಪ್ರಸ್ತುತ ಚುನಾವಣೆಯಲ್ಲಿ ಎಲ್ಲಾ ಮತದಾರರು ಹೆಚ್ಚು ಮತ ನೀಡಿ ಸಂಸದರಾನ್ನಾಗಿ ಆಯ್ಕೆ ಮಾಡಿದರೆ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುವೆ ಎಂದರು.

       ವೇದಿಕೆಯಲ್ಲಿ ಲೋಕಸಭಾ ಉಸ್ತುವಾರಿ ಡಾ.ಎ.ಎಚ್.ಶಿವಯೋಗಿಸ್ವಾಮಿ, ಜಿಲ್ಲಾಧ್ಯಕ್ಷ ಕೆ.ಎಸ್.ನವೀನ್, ಜಿಲ್ಲಾ ಉಪಾಧ್ಯಕ್ಷ ಬಾಳೆಮಂಡಿರಾಮದಾಸ್, ಬಿ.ಎಸ್.ಶಿವಪುತ್ರಪ್ಪ, ಮಾಜಿ ಶಾಸಕ ಜಿ.ಬಸವರಾಜಮಂಡಿಮಠ, ಬಿ.ವಿ.ಸಿರಿಯಣ್ಣ, ಎಂ.ಎಸ್.ಜಯರಾಮ್, ನಗರಸಭಾ ಸದಸ್ಯ ಎಸ್.ಜಯಣ್ಣ, ವೆಂಕಟೇಶ್, ಸಾಕಮ್ಮ, ಪಾಲಮ್ಮ, ರಾಮಕೃಷ್ಣರೆಡ್ಡಿ, ರತ್ನಮ್ಮ, ಜಯಪಾಲಯ್ಯ, ಸೂರನಹಳ್ಳಿ ಶ್ರೀನಿವಾಸ್, ಸೂರನಹಳ್ಳಿ ವಿಜಯಣ್ಣ, ವೆಂಕಟೇಶ್‍ಯಾದವ್, ಕರೀಕೆರೆ ತಿಪ್ಪೇಸ್ವಾಮಿ, ಜಿ.ಎಂ.ಸುರೇಶ್, ಸಿದ್ದೇಶ್‍ಯಾದವ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link