ಹಾವೇರಿ:
ಪ್ರಜಾಸತ್ತೆಯ ಹೆಸರಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಜಾರಿಯಲ್ಲಿದೆ. ಏಕ ವ್ಯಕ್ತಿಯ ಜಪದಲ್ಲಿ ಸರ್ವಾಧೀಕಾರಿಯತ್ತ ದೇಶವನ್ನು ಮುನ್ನಡೆಸಿಕೊಂಡು ಹೋಗಲಾಗುತ್ತಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಹೇಳಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಒಕ್ಕೂಟ ವ್ಯವಸ್ಥೆ ರಕ್ಷಿತವಾಗಬೇಕು. ಅದಕ್ಕಾಗಿ, ಪ್ರಜಾಪ್ರಭುತ್ವಕ್ಕೆ ಗಂಡಾತಂರ ಬಂದಿದೆ. ಸಂವಿಧಾನಕ್ಕೆ ಗಂಡಾತಂರ ಬಂದಿದೆ. ಇವುಗಳನ್ನು ಸಂವರಕ್ಷಿಸಲು ಬಿಜೆಪಿ ವಿರುದ್ಧವಾಗಿ ಸಂಘಟಿತವಾಗಿ ಮತ ನೀಡಬೇಕಾದ ಅಗತ್ಯ ಈ ಹಿಂದಿನಗಿಂತಲೂ ಇಂದು ಅನಿವಾರ್ಯವಾಗಿದೆ.
ದೇಶದಲ್ಲಿ ಕಳೆದ ಐದು ವರ್ಷದಲ್ಲಿ ಬಹುತ್ವ ಭಾರತಕ್ಕೆ ದೊಡ್ಡ ಅಪಾಯ ಬಂದಿದೆ. ದೇಶದಲ್ಲಿ ಪ್ರಜಾಪ್ರಭುತ್ವದ ಅಡಿಯಲ್ಲಿ ನಡೆಯುವ ಚುನಾವಣೆಯಲ್ಲಿ ಧ್ವೇಷವನ್ನು ಹುಟ್ಟುಹಾಕುವಂತ ವಾತಾವರಣ ಸೃಷ್ಠಿಯಾಗಿದೆ. ಮೋದಿ ಅವರು ಬರಿ ಮಾತಿನಲ್ಲಿ ಪ್ರಗತಿ ಹೇಳಿಕೊಂಡು ಬರುವ ಮೂಲಕ ದೇಶದ ಅಭಿವೃದ್ಧಿಗೆ ಹಿನ್ನಡೆ ತಂದಿದ್ದಾರೆ. ದೇಶದ ಅಭಿವೃದ್ಧಿ ವಾಸ್ತವಿಕ ರೂಪದಲ್ಲಿ ಏನು ಬದಲಾವಣೆ ಹೊಂದಿಲ್ಲ. ಇದನ್ನು ಪ್ರಜೆಗಳು ಅರ್ಥ ಮಾಡಿಕೊಳ್ಳಬೇಕು.
ಮೋದಿ ನೀತಿಗಳಿಂದ ದೇಶದಲ್ಲಿ ಅಮಾಯಕ ಜನರು ಜೀವ ಕಳೆದುಕೊಂಡರು, ಏಷ್ಟೊ ಜನ ಯುವಕರು ಉದ್ಯೋಗವಿಲ್ಲದ ಯಾತನೆ ಅನುಭವಿಸಿದ್ದಾರೆ. ಇವೇಲ್ಲವನ್ನು ನೆನಪು ಮಾಡಿಕೊಂಡರೆ ಮೋದಿಗೆ ಯಾರ ಮತ ನೀಡುವುದಿಲ್ಲ.
ದೇಶದಲ್ಲಿ ನೋಟ್ ಬ್ಯಾನ್ ಮಾಡುವ ಮುನ್ನ ಆರ್.ಬಿ.ಐ ಸಂಪರ್ಕ ಮಾಡಿದ್ದರಾ? ದೇಶದ ಯಾವುದೇ ಸ್ವಾಯತ್ತ ಸಂಸ್ಥೆಯ ಬಗ್ಗೆ ಸರಕಾರ ತಿರ್ಮಾನ ತೆಗೆದುಕೊಳ್ಳಬೇಕಾದ ಆ ಸಂಸ್ಥೆಯನ್ನು ಸಂಪರ್ಕಿಸಬೇಕಾಗಿದ್ದ ಪ್ರಜಾಪ್ರಭುತ್ವದ ಕರ್ತವ್ಯ ಕೂಡ ಇಂತಹ ಅನೇಕ ಉದಾರಣೆಗಳು ಇವೆ. ಪ್ರಜಾಪ್ರಭುತ್ವದಲ್ಲಿ ನಡೆಯುವ ಚುನಾವಣೆಯು ಇಂದು ಅಭ್ಯರ್ಥಿಗಳ ವಿಚಾರಗಳ ಮೇಲೆ ನಡೆಯುತ್ತಿಲ್ಲ. ವ್ಯಕ್ತಿ ಕೇಂದ್ರಿತವಾಗಿ ಈ ಚುನಾವಣೆ ನಡೆಯುತ್ತಿದೆ.
ಚುನಾವಣೆಗೆ ಸ್ಫರ್ಧಿಸಿರುವ ಅಭ್ಯರ್ಥಿಗಳು ತಾವು ಮಾಡುವ ಅಭಿವೃದ್ಧಿ ವಿಚಾರಗಳಿಗೆ ಓಟು ನೀಡಿ ಎನ್ನದೇ ಮೋದಿಗೆ ಓಟು ಕೋಡಿ ಎನ್ನುವ ಮಟ್ಟಿಗೆ ಪ್ರಜಾಪ್ರಭುತ್ವವನ್ನು ಹಾಳು ಮಾಡಿದ್ದಾರೆ. ಈ ಎಲ್ಲ ಅಂಶಗಳನ್ನು ಗಮನಿಸಿದರೆ ದೇಶವನ್ನು ಸವಾಧಿಕಾರಿ ಧೋರಣೆಯಡೆಗೆ ತೆಗೆದುಕೊಂಡು ಹೋಗುವ ಮಟ್ಟಿಗೆ ಸಾಗಿದೆ.
ಈ ವ್ಯವಸ್ಥೆಯ ಮೂಲಕ ಸಾಮಾನ್ಯ ನಾಗರಿಕರ ಮೇಲೆ ಭಯ ಹುಟ್ಟಿಸಲು ಮುಂದಾಗಿದ್ದಾರೆ. ಒಂದು ನೆನಪು ಮಾಡಿಕೊಳ್ಳಬೇಕು, ಸ್ವಾತಂತ್ರ್ಯ ಭಾರತದಲ್ಲಿ ಭಾರತ ಮಾಡಿದ ಎಲ್ಲ ಯುದ್ಧಗಳಲ್ಲಿ ಭಾರತದ ಸೈನಿಕರು ವಿಜಯದ ಪತಾಕೆ ಹಾರಿಸಿದ್ದಾರೆ. ಆದರೆ ಎಲ್ಲ ಸರಕಾರಗಳು ವಾಜಿಪೇಯಿ ಸರಕಾರ ಸೇರಿದಂತೆ ಯಾರು ಸಹ ಚುನಾವಣೆ ಪ್ರಚಾರಕ್ಕೆ ಸೈನ್ಯವನ್ನು ಬಳಸಿಕೊಳ್ಳಲಿಲ್ಲ. ಇಂದು, ಒಂದು ರಾಜ್ಯದ ಮುಖ್ಯಮಂತ್ರಿಯೊಬ್ಬ ಭಾರತದ ಸೈನ್ಯವನ್ನು ಮೋದಿ ಸೈನ್ಯ ಎಂದು ಹೇಳಬೇಕಾದರೆ, ದೇಶ ಎಂತಹ ದುರ್ಗತಿಗೆ ಹೋಗಿದೆ ಎಂದು ಗೊತ್ತಾಗುತ್ತದೆ. ಇದು ದೇಶ ತಲೆ ತಗ್ಗಿಸುವ ಹೇಳಿಕೆ.
ಸಂವಿಧಾನದಲ್ಲಿ ಸಮಾನತೆಯನ್ನು ವಿರೋಧಿಸುವ ಪಕ್ಷ ಯಾವುದಾದರೂ ಇದ್ದರೆ ಅದು ಬಿಜೆಪಿ. ರಾಜ್ಯದ 28 ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಓಬಿಸಿ ವರ್ಗಕ್ಕೆ ಒಂದೇ,ಒಂದು ಸೀಟು ಕೊಡದೇ ಇರುವದರ ಉದ್ಧೇಶ ಏನು, ಕೇಂದ್ರದ ಸಚಿವ ಸಂಪುಟವನ್ನು ಒಮ್ಮೆ ನೋಡಿ, ಯಾವ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಗೊತ್ತಾಗತ್ತದೆ.
ಅವರ ಹಿಡನ್ ಅಜೇಂಡಾ ಚಾರ್ತುವರ್ಣ ಪದ್ಧತಿಯನ್ನು ಪುನಃ ಜಾರಿಗೆ ತರುವದಾಗಿದೆ. ಅದಕ್ಕಾಗಿ ಈ ರೀತಿಯ ಆಡಳಿತ ವ್ಯವಸ್ಥೆಯನ್ನು ಜಾರಿಗೆ ತರುತ್ತಿದ್ದಾರೆ. ಈ ಸೂಕ್ಷ್ಮಗಳನ್ನು ಅರ್ಥ ಮಾಡಿಕೊಂಡು ನಮ್ಮ ಪ್ರಜಾಪ್ರಭುತ್ವವನ್ನು ಉಳಿಸಲು, ಸಂವಿಧಾನ ಉಳಿಸಿಕೊಳ್ಳಲು ಅನಿವಾರ್ಯವಾಗಿ ಈ ಬಾರಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಪಣ ತೊಡಬೇಕಾಗಿದೆ ಎಂದು ತಿಳಿಸಿದರು.
ಇದೇ ಚಿತ್ರ ನಟ ಕಾಂಗ್ರೆಸ್ ಮುಖಂಡ ಮುಖ್ಯಮಂತ್ರಿ ಚಂದ್ರ ಮಾತನಾಡಿ, ಭಾರತ ಒಕ್ಕೂಟ ವ್ಯವಸ್ಥೆಯನ್ನು ಒಳಗೊಂಡ ದೇಶ. ವಿಭಿನ್ನ ಸಂಸ್ಕತಿ, ವಿಭಿನ್ನ ಭಾಷೆ, ಸಂಪ್ರದಾಯಗಳನ್ನು ಒಳಗೊಂಡ ದೇಶ. ಈ ದೇಶ ಮಾನವೀಯ ಮೌಲ್ಯವನ್ನು ಏತ್ತಿ ಹಿಡಿದ ದೇಶವಾಗಿದೆ. ಸರ್ವಾಧೀಕಾರಿ ಧೋರಣೆಯ ವಿರುದ್ಧ, ಭ್ರಷ್ಟಾಚಾರದ ವಿರುದ್ಧ ನಡೆಯುತ್ತಿರುವ ಚುನಾವಣೆಯಾಗಿದೆ. ಕಾಂಗ್ರೆಸ್ ಒಕ್ಕೂಟದ ವ್ಯವಸ್ಥೆಯನ್ನು ಕಾಪಾಡಲು ಈ ಚುನಾವಣೆ ಎದುರಿಸುತ್ತಿದೆ ಎಂದು ತಿಳಿಸಿದರು.
ಮೋದಿ ಅವರು ಬರಿ ಹಸಿ ಹಸಿ ಸುಳ್ಳಗಳನ್ನು ಹೇಳಿಕೊಂಡು ಅಧಿಕಾರ ನಡೆಸಿದರು. ಯು.ಪಿ.ಎ. ಚಂದ್ರಯಾನಕ್ಕ ಖರ್ಚು ಮಾಡಿದ ಹಣಕ್ಕಿಂತ 10 ಪಟ್ಟು ಖರ್ಚು ಮಾಡಿ ವಿದೇಶ ಸುತ್ತಿ, ಸುಳ್ಳು ಹೇಳಿಕೊಂಡು ಬಂದರು. ಅದರಿಂದ ಲಾಭ ಏನಾಗಿದೇಯೋ ಗೊತ್ತಿಲ್ಲ. ಮೋದಿ ಅವರು ಹಿಂದುಳಿದ ವರ್ಗಕ್ಕೆ ನ್ಯಾಯ ದೊರಕಿಸದೇ, ಒಂದು ವರ್ಗಕ್ಕೆ ಹೆಚ್ಚು ಪಾಧಾನ್ಯತೆ ನೀಡುವ ಮೂಲಕ ಸಂವಿಧಾನವನ್ನು ಕಡೆಗಣಿಸುತ್ತಿರುವದು ಅರಿವಿಗೆ ಬರುತ್ತದೆ. ಈ ಕಾರಣದಿಂದ ಜನರು ಪ್ರಜ್ಞಾವಂತಿಕೆಯಿಂದ ಈ ಬಾರಿ ಮತ ಚಲಾವಣೆ ಮಾಡಬೇಕು ಎಂದು ತಿಳಿಸಿದರು.
ನಿವೃತ್ತ ಅಧಿಕಾರಿ ರುದ್ರಪ್ಪ ಹನಗವಾಡಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಂ.ಹಿರೇಮಠ, ಉಪಾಧ್ಯಕ್ಷ ಸಂಜೀವಕುಮಾರ ನೀರಲಗಿ, ನಗರ ಘಟಕದ ಅಧ್ಯಕ್ಷ ಪ್ರಭುಗೌಡ ಭಿಷ್ಟನಗೌಡ್ರ ಹಾಜರಿದ್ದರು.