ಮೊಬೈಲ್ ಬಂದ ಬಳಿಕ ಸಂಬಂಧಗಳೇ ನಾಶ

ಚಿತ್ರದುರ್ಗ

      ಇತ್ತೀಚಿನ ದಿನಮಾನದಲ್ಲಿ ಮೊಬೈಲ್ ನಿಂದಾಗಿ ಸಮಾಜ ಮತ್ತು ಮಾನವನ ಸಂಬಂಧಗಳು ದೂರವಾಗುತ್ತಿದೆ ಎಂದು ಹೊಳಲ್ಕೆರೆ ತಾಲ್ಲೂಕಿನ ಚಿತ್ರಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಪ್ರೊ, ಯಶೋಧ ವಿಷಾಧಿಸಿದ್ದಾರೆ.

      ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ 2018-19ನೇ ಶೈಕ್ಷಣಿಕ ವರ್ಷದ ಸಾಂಸ್ಕøತಿಕ, ಕ್ರೀಡಾ, ಎನ್.ಎಸ್.ಎಸ್, ಯುವ ರೆಡ್ ಕ್ರಾಸ್, ರೇಂಜರ್ಸ್ ಹಾಗೂ ಇತರೆ ಚಟುವಟಿಕೆಗಳ ಅಂಗವಾಗಿ ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

      ಹಿಂದಿನ ಕಾಲದಲ್ಲಿ ಮೊಬೈಲ್ ಆಗಲಿ ಪೋನ್ ಆಗಲಿ ಇರಲಿಲ್ಲ ಆಗ ಸಂಬಂಧಗಳು ಉತ್ತಮವಾಗಿದ್ದವು ಮನೆ ಮಂದಿಯಲ್ಲ ಸಮಯ ಸಿಕ್ಕಾಗ ಕೂತು ತಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಲುತ್ತಿದ್ದರು ಆದರೆ ಈಗ ಮೊಬೈಲ್ ಎಂಬ ಮಾಯ ಯಂತ್ರ ಈ ರೀತಿಯಾದ ಎಲ್ಲಾ ಸಂಬಂಧಗಳನ್ನು ದೂರ ಮಾಡಿ ತನನ್ನು ಮಾತ್ರ ಮನುಷ್ಯನಿಗೆ ಹತ್ತಿರವಾಗುವಂತೆ ಮಾಡಿದ್ದಾನೆ ಎಂದು ತಿಳಿಸಿದರು.

      ಈ ಮೊಬೈಲ್ ಬಳಕೆಯಲ್ಲಿ ಯುವಜನತೆಯ ಪಾತ್ರ ಹೆಚ್ಚಾಗಿದೆ, ಇಂದಿನ ದಿನ ಮಾನದಲ್ಲಿ ಪುಸ್ತಕ ಇಲ್ಲದೆ ಇರುತ್ತಾರೆ ಆದರೆ ಮೊಬೈಲ್ ಇಲ್ಲದೆ ಯಾರು ಸಹಾ ಇರಲಾರರು. ಮೊಬೈಲ್ ಬಳಕೆ ಇಂದಿನ ದಿನಮಾನದಲ್ಲಿ ಅತಿಯಾಗುತ್ತಿದೆ ಅದು ಉತ್ತಮ ಕಾರ್ಯಕ್ಕಾದರೆ ಸರಿ ಬೇರೆ ರೀತಿಯಾಗಿ ಬಳಕೆಯಾದರೆ ನಿಮ್ಮ ಜೀವನದ ಗುರಿ ತಪ್ಪುತ್ತದೆ ಎಚ್ಚರದಿಂದ ಇರುವಂತೆ ವಿದ್ಯಾರ್ಥಿನಿಯರಿಗೆ ಯಶೋದರವರು ಇಂದಿನ ದಿನಮಾನದಲ್ಲಿ ಉದ್ಯೋಗಕ್ಕಾಗಿ ಶಿಕ್ಷಣ ಎನ್ನುವ ಪರಿಪಾಟ ಬೆಳದಿದೆ ಶಿಕ್ಷಣ ಎನ್ನುವುದು ಬರೀ ಉದ್ಯೋಗ ಮಾತ್ರವಲ್ಲದೆ ಜ್ಞಾನವನ್ನು ಸಂಪಾದಿಸುವ ಪರಿಪಾಟವಾಗಬೇಕಿದೆ ಎಂದರು.

      ತಮ್ಮಲ್ಲಿನ ಪ್ರತಿಭೆಗಳನ್ನು ಹೂರ ಹಾಕಲು ಈ ರೀತಿಯಾದ ಕಾರ್ಯಕ್ರಮಗಳು ಅಗತ್ಯವಾಗಿದೆ ಇದರಿಂದ ನಿಮ್ಮ ಪ್ರತಿಭೆಗೆ ಪ್ರೋತ್ಸಾಹ ಸಿಕ್ಕಂತೆ ಆಗುತ್ತದೆ ಸಾಧ್ಯವಾದಷ್ಟು ಈ ರೀತಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಮನವಿ ಮಾಡಿ, ಶಿಕ್ಷಣ ಎನ್ನುವುದು ಹಿಂದಿನ ಕಾಲದಲ್ಲಿ ದಾನದ ರೂಪದಲ್ಲಿತ್ತು ಆದರೆ ಈಗ ಅದು ವ್ಯಾಪಾರಿಕರಣವಾಗುತ್ತಿರುವುದು ವಿಷಾಧ ಸಂಗತಿಯಾಗಿದೆ ಹಣ ಇದ್ದವರು ಖಾಸಗಿ ಶಾಲಾ ಕಾಲೇಜುಗಳಿಗೆ ಸೇರಿದರೆ ಬೇರೆಯವರು ಸರ್ಕಾರಿ ಶಾಲಾ ಕಾಲೇಜುಗಳೆ ಗತಿಯಾಗಿದೆ. ಉಪನ್ಯಾಸಕರಿಂದ ಉತ್ತಮವಾದ ಶಿಕ್ಷಣವನ್ನು ಪಡೆದಾಗ ಪರೀಕ್ಷೆಯಲ್ಲಿ ಉತ್ತಮವಾದ ಆಂಕಗಳನ್ನು ಪಡೆಯಲು ಸಾಧ್ಯವಿದೆ ಎಂದು ತಿಳಿ ಹೇಳಿದರು.

      ದೇಶ ಮತ್ತು ಸಮಾಜದ ಪ್ರಗತಿ ಬರೀ ಒಬ್ಬರಿಂದಲೇ ಸಾಧ್ಯವಾಗುವುದಿಲ್ಲ ಬೇರೆಯವರು ಕೈಜೋಡಿಸಬೇಕಿದೆ ಹಕ್ಕಿ ಮೇಲೆ ಹಾರಲು ಯಾವ ರೀತಿ ಎರಡು ರೆಕ್ಕೆಗಳು ಅಗತ್ಯ ಇದ್ದೇತೇ ಅದೇ ರೀತಿ ದೇಶ ಮತ್ತು ಸಮಾಜದ ಪ್ರಗತಿಗೆ ಪುರುಷ ಮತ್ತು ಮಹಿಳೆಯ ಪಾತ್ರ ಬಹಳ ಇದೆ, ಇಂದಿನ ದಿನಮಾನದಲ್ಲಿ ಮಹಿಳೆ ಮಾಡದ ಕೆಲಸ ಇಲ್ಲ ಎಲ್ಲದರಲ್ಲಿಯೂ ಸಹಾ ಮಹಿಳೆ ತನ್ನ ಛಾಪ್‍ನ್ನು ಮೂಡಿಸಿದ್ದಾಳೆ ಮನೆಯಿಂದ ಹಿಡಿದು ಆಕಾಶದವರೆಗೂ ಸಹಾ ಕೆಲಸವನ್ನು ಮಾಡಿದ್ದಾಳೆ ಯಾವುದೇ ಕಾರಣಕ್ಕೂ ನಿರ್ಲಕ್ಷ ಸರಿಯಲ್ಲ ಎಂದು ತಿಳಿಸಿ ಏ.18 ರಂದು ನಡೆಯುವ ಚುನಾವಣೆಯಲ್ಲಿ ಎಲ್ಲರು ತಪ್ಪದೆ ಮತದಾನವನ್ನು ಮಾಡುವಂತೆ ಹೇಳಿದರು.

     ಕಾಲೇಜಿನ ಪ್ರಾಂಶುಪಾಲ ಪ್ರೊ, ಬಿ.ಎಂ ಲಕ್ಷ್ಮಿ ನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಐ,ಕ್ಯೂ.ಎ.ಸಿ ಸಂಚಾಲಕ ಪ್ರೊ, ಬಸವರಾಜ ಸಿ, ಸಾಂಸ್ಕತಿಕ ಸಮಿತಿ ಸಂಚಾಲಕ ಪ್ರೊ, ಸಿದ್ದಪ್ಪ ಡಿ.ಓ ಆರ್ ಲೀಲಾವತಿ, ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಪಿಎಚ್‍ಡಿ ಪಡೆದ ಡಾ.ಮಹಾಂತೇಶ್ ಮತ್ತು ಡಾ. ಮಲ್ಲಿಕಾರ್ಜನ್ ರವರನ್ನು ಸನ್ಮಾನಿಸಲಾಯಿತು.ಮೇಘ ಪ್ರಾರ್ಥಿಸಿದರೆ, ಸುದರ್ಶನಿ ನಾಡಗೀತೆ ಗಾಯನ ಮಾಡಿದರು. ರಶ್ಮಿ ವಂದಿಸಿದರು. ಚನ್ನಕೇಶವ ಕಾರ್ಯಕ್ರಮ ನಿರೂಪಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap