ಹುಳಿಯಾರು
ಹುಳಿಯಾರಿನ ವಿಜಯನಗರ ನವಗ್ರಾಮ ಬಡಾವಣೆಯ ಮಂಜುಳಾ ವಿಶೇಷಚೇತನಳಾಗಿದ್ದು ತನ್ನ ಬುದ್ಧಿಮಾಂದ್ಯತೆಯಲ್ಲಿಯೂ ತನ್ನ ತಾಯಿಯ ನೆರವಿನೊಂದಿಗೆ ಪಟ್ಟಣದ ಎಂಪಿಎಸ್ ಮೈದಾನದಲ್ಲಿರುವ 46ನೇ ಮತಗಟ್ಟೆಯಲ್ಲಿ ತನ್ನ ಮತ ಚಲಾಯಿಸಿದರು.
ಪಟ್ಟಣದ 10ನೇ ಬ್ಲಾಕಿನ ನವಗ್ರಾಮ ಬಡಾವಣೆಯ ಗಿರಿಯಪ್ಪ ಎಂಬುವರ ಮಗಳಾದ 28 ವರ್ಷದ ಈಕೆ ಬುದ್ಧಿಮಾಂದ್ಯತೆ ಹೊಂದಿರುವುದಲ್ಲದೆ ಕೈ ಕಾಲು ಕೂಡ ಸ್ವಾಧೀನ ಹೊಂದಿಲ್ಲ.ಹಾಗಿದ್ದೂ ಕೂಡ ಈಕೆ ಇದುವರೆಗೂ ನಾಲ್ಕು ಚುನಾವಣೆಯಲ್ಲಿ ಮತ ಚಲಾಯಿಸಿದ್ದು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿಯೂ ಮತಚಲಾಯಿಸಿ ತನ್ನ ಹಕ್ಕು ಚಲಾಯಿಸಿದರು.ಮತದಾನ ಮಾಡಿದ ಕುರುಹಾಗಿ ತನ್ನ ತೋರು ಬೆರಳು ಪ್ರದರ್ಶನ ಮಾಡಿದ ಈಕೆ ಮತದಾನ ಮಾಡಿದ್ದರ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
