ದಾವಣಗೆರೆ:
ಭಾಷೆಗಳು ನಮ್ಮ ಸಂಬಂಧಗಳನ್ನು ಉತ್ತಮಗೊಳಿಸುತ್ತದೆ. ಎಷ್ಟೋ ಭಾಷೆಗಳು ಲಿಪಿ ಇಲ್ಲದೇ ಆಡು ಭಾಷೆಯಾಗಿ ಇವತ್ತಿಗೂ ಉಳಿದಿವೆ. ಭಾರತೀಯ ಸಂಸ್ಕøತಿಯ ಪುನರುತ್ಥಾನಕ್ಕೆ ಸಂಸ್ಕøತ ಭಾಷೆ ಅತ್ಯಂತ ಪೂರಕವಾಗಿದೆ ಎಂದು ಜೆ.ಜೆ. ಮೆಡಿಕಲ್ ಕಾಲೇಜಿನ ಅಂಗರಚನಾ ಶಾಸ್ತ್ರ ವಿಭಾಗದ ಕಲಾವಿದ ಶ್ರೀ ಕಿರಣ್ ವಿ. ಶೆಣೈ ಅಭಿಪ್ರಾಯಪಟ್ಟರು.
ಅವರು ಬುಧವಾಗ ಸಂಜೆ ನಗರದ ಕೆ.ಬಿ. ಬಡಾವಣೆಯಲ್ಲಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಾಲಯ ‘ಜಯ ನಿವಾಸ’ದಲ್ಲಿ “ಉಚಿತ ಸಂಸ್ಕೃತ ಸಂಭಾಷಣಾ ಶಿಬಿರ”ದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.
ನಾನು ಬಾಲಕನಾಗಿದ್ದಾಗ ಸಂಸ್ಕೃತವನ್ನು ಅತ್ಯಂತ ಆಸಕ್ತಿಯಿಂದ ಕಲೆಯುತ್ತಿದ್ದೆ. ಸಂಸ್ಕೃತ ಭಾಷೆಯ ಬಳಕೆಯಿಂದ ನಮ್ಮ ಮನಸ್ಸು ಪ್ರಫುಲ್ಲವಾಗುತ್ತದೆ. ಸಂಸ್ಕಾರ ಬರುತ್ತದೆ, ಇಂದಿನ ದಿನ ಮಾನಗಳಲ್ಲಿ ನಮ್ಮ ಭಾರತೀಯ ಸಂಸ್ಕೃತಿಯನ್ನು ಮರೆತು ಪಾಶ್ಚಾತ್ಯ ಸಂಸ್ಕೃತಿ ಕಡೆಗೆ ಯುವಜನಾಂಗ ಗಮನ ಹರಿಸುತ್ತಿದೆ, ಆದರೆ ವಿದೇಶಿಯರು ಭಾರತೀಯ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಇದೆಲ್ಲವಕ್ಕೂ ನಮ್ಮ ಹಿಂದಿನ ಪರಂಪರೆ ಕಾರಣವಾಗಿದೆ ಎಂದು ತಿಳಿಸುತ್ತಾ ಸಂಸ್ಕೃತವನ್ನು ಮಾತನಾಡುವುದರ ಮೂಲಕ ಇದರ ಪೋಷಣೆ ಮಾಡೋಣ ಎಂದು ತಿಳಿಸಿದರು.
ಇನ್ನೋರ್ವ ಮುಖ್ಯ ಅತಿಥಿ ಸಂಸ್ಕೃತ ಗುರು ಶ್ರೀ ಜಿ.ಎಸ್. ಗಣಪತಿ ಇವರು ಪ್ರಾಸ್ತಾವಿಕವಾಗಿ ಮಾತನಾಡಿ, ದೇವನಗರಿ ಲಿಪಿಯನ್ನು ಸಂಸ್ಕೃತ ಭಾಷೆಯಲ್ಲಿ ಬಳಸಲಾಗಿದೆ. ಸಂಸ್ಕೃತ ದೇವನಗರಿ ಲಿಪಿ, ಆದ್ದರಿಂದ ನಾವು ಸಂಸ್ಕೃತವನ್ನು ಮಾತನಾಡಿದರೆ ದೇವರಿಗೆ ಸಮಾನರು ಎಂಬ ಹೆಗ್ಗಳಿಕೆ ಇದೆ. ಸಾಮಾನ್ಯವಾಗಿ ಸಂಸ್ಕೃತ ತುಂಬಾ ಕಷ್ಟಕರವಾದ ವಿಷಯ ಎಂದು ಪೋಷಕರೇ ಮಕ್ಕಳನ್ನು ಸಂಸ್ಕೃತ ಭಾಷೆಯಿಂದ ದೂರ ಇಡುವ ಅನೇಕ ಉದಾಹರಣೆ ನಾವು ನೋಡಬಹುದು.
ಮಕ್ಕಳಿಗೆ ಯಾವ ಭಾಷೆಯೂ ಕಷ್ಟವಲ್ಲ. ಕಳೆದ 33 ವರ್ಷಗಳಿಂದ ಸಂಸ್ಕೃತ ಭಾರತಿ ಬೆಂಗಳೂರು ಭಾಷೆಯ ಉಳಿವಿಗಾಗಿ ಉಚಿತ ಸಂಸ್ಕೃತ ಸಂಭಾಷಣಾ ಶಿಬಿರವನ್ನು ದೇಶ-ವಿದೇಶಗಳಲ್ಲಿ ನಡೆಸುತ್ತಾ ಬಂದಿದೆ. ಇದರ ಪರಿಣಾಮವಾಗಿ ಪಾಶ್ಚಾತ್ಯ ದೇಶಗಳಲ್ಲಿ ಸಂಸ್ಕೃತ ಶ್ಲೋಕಗಳಿಂದ ಶಾಲೆಯಲ್ಲಿ ಪಾಠಗಳು ಪ್ರಾರಂಭವಾಗುತ್ತವೆ. ಇದು ನಮ್ಮ ಭಾರತೀಯ ಸನಾತನ ದೇವಭಾಷೆಯಾದ ಸಂಸ್ಕೃತಕ್ಕೆ ಇರುವ ಶಕ್ತಿ ಎಂದು ಸಂಸ್ಕೃತ ಭಾಷೆಯ ವಿಸ್ತಾರತೆಯನ್ನು ಹಾಗೂ ಕೈಗೊಂಡಿರುವ ಸೇವೆಯನ್ನು ವಿವರಿಸಿದರು.
ಪ್ರಾರಂಭದಲ್ಲಿ ಶ್ರೀಮತಿ ಭೈರಮ್ಮ ಪ್ರಾರ್ಥನೆ ಮಾಡಿದರು. ಕುಮಾರಿ ಸೌಜನ್ಯ ಎಲ್ಲರನ್ನು ಸ್ವಾಗತಿಸಿದರು. ಶ್ರೀಮತಿ ಅಶ್ವಿನಿ ಶಿಬಿರದ ಅನುಭವವನ್ನು ಹಂಚಿಕೊಂಡರು. ಶಿಬಿರಾರ್ಥಿಗಳಾದ ವಿಷ್ಣು, ನವೀನ, ಯಶಸ್ “ಮೂರ್ಖ ವೈದ್ಯ ಪ್ರಹಸನಂ”, ಶ್ರೀಮತಿ ಶಿಲ್ಪಾ ಹಾಗೂ ಭೈರವಿ “ಅತಿಥಿ ಸತ್ಕಾರ”, ಕುಮಾರಿ ಸುಕನ್ಯಾ, ಅರುಷಿ, ಸಮರ್ಪಿತ, ವೈಷ್ಣವಿ “ಮತದಾನಸ್ಯ ಮೌಲ್ಯಂ” ಎಂಬ ಕಿರು ನಾಟಕಗಳನ್ನು ಸಂಸ್ಕøತದಲ್ಲಿಯೇ ನಡೆಸಿಕೊಟ್ಟಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಯೋಗ ಶಿಕ್ಷಕ ಚಂದ್ರು ಕೊನೆಯಲ್ಲಿ ಎಲ್ಲರನ್ನೂ ವಂದಿಸಿದರು. 10 ದಿನಗಳ ಕಾಲ ಹರಿಹರದ ಸಂಸ್ಕøತ ಪ್ರಾಧ್ಯಾಪಕಿ ಶ್ರೀಮತಿ ಸುಮಂಗಲಾ ಭಟ್ ಇವರು ಯಶಸ್ವಿಯಾಗಿ ನಡೆಸಿಕೊಟ್ಟರು. 40ಕ್ಕೂ ಹೆಚ್ಚು ಆಸಕ್ತರು ಈ ಶಿಬಿರದ ಲಾಭವನ್ನು ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಜ್ಯೋತಿಷಿ ಪರಮೇಶ್ವರಪ್ಪ, ಕೃಷಿಕ ಆನೆಕೊಂಡ ಬಸವರಾಜಪ್ಪ, ಯೋಗ ಗುರುಗಳಾದ ಡಾ|| ರಾಘವೇಂದ್ರ ಗುರೂಜಿ ಸಂಪತ್‍ಕುಮಾರ್ ಇನ್ನಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ