ಹಂಪಿ ವಿಜಯನಗರ ಕಾಲದ ಸ್ಮಾರಕಗಳನ್ನು ರಕ್ಷಿಸುವಂತೆ ಸ್ಥಳೀಯರ ಒತ್ತಾಯ.

ಹೊಸಪೇಟೆ :

     ತಾಲೂಕಿನ ಕಮಲಾಪುರ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಬಳಿ ಇರುವ ಪ್ರದೇಶದಲ್ಲಿ ವಿಜಯನಗರ ಸಾಮ್ರಾಜ್ಯದ ಶ್ರೀ ಕೃಷ್ಣ ದೇವರಾಯನ ಕಾಲದಲ್ಲಿ ನಿರ್ಮಾಣವಾದ ಗುಡಿ ಗೋಪುರಗಳು ನಿರ್ವಹಣೆ ಇಲ್ಲದೇ ಪಾಳು ಬಿದ್ದಿವೆ. ಎಷ್ಟೋ ದೇವಸ್ಥಾನಗಳು ಮಣ್ಣಿನಲ್ಲಿ ಹಾಗೇ ಮುಳುಗಿ ಹೋಗಿವೆ. ಇತ್ತ ನಾಗರೀಕರು ಒತ್ತುವರಿ ಮಾಡಿ ಮನೆಗಳನ್ನು ನಿರ್ಮಿಸುತ್ತಿದ್ದಾರೆ. ಹೀಗಾಗಿ ಸಂಬಂಧಿಸಿದವರು ಇತ್ತ ಗಮನ ಹರಿಸಿ ವಿಜಯನಗರ ಗತಕಾಲದ ವೈಭವದ ಸ್ಮಾರಕಗಳನ್ನು ಸಂರಕ್ಷಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

        ಗುಡಿ ಗೋಪುರ, ಸ್ಮಾರಕಗಳ ಜೀರ್ಣೋಧ್ದಾರಕ್ಕಾಗಿ ಸರ್ಕಾರ ಹಾಗು ಯುನೆಸ್ಕೋ ಕೋಟಿ ಕೋಟಿ ಹಣ ಖರ್ಚು ಮಾಡುತ್ತಿದ್ದರೂ ಸ್ಮಾರಕಗಳ ರಕ್ಷಣೆ ಕೆಲಸ ಮಾತ್ರ ಆಗುತ್ತಿಲ್ಲ. ಸಂಬಂಧಿಸಿದ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದರಿಂದ ಇಂಥ ಅನೇಕ ಗುಡಿ ಗೋಪುರಗಳು ಕಣ್ಮರೆಯಾಗುತ್ತಿವೆ. ಹೀಗಾಗಿ ಸಂಬಂಧಪಟ್ಟ ಇಲಾಖೆಯವರು ಇತ್ತ ಗಮನಹರಿಸಿ ಇಂಥ ಸ್ಮಾರಕ, ಗುಡಿ ಗೋಪುರಗಳನ್ನು ಪತ್ತೆ ಹಚ್ಚಿ ಅವುಗಳನ್ನು ಜೀರ್ಣೋಧ್ದಾರ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link