ಹಗರಿಬೊಮ್ಮನಹಳ್ಳಿ:
ಬಳ್ಳಾರಿ ಲೋಕಸಭಾ ಬಿಜೆಪಿ ಅಭ್ಯರ್ಥಿ ದೇವೇಂದ್ರಪ್ಪನವರನ್ನು ಗೆಲ್ಲಿಸುವ ಮೂಲಕ ಮೋದಿಜಿಯವರಿಗೆ ಬಲ ತುಂಬಬೇಕಾಗಿದೆ ಎಂದು ಪುರಸಭೆಯ 18ನೇ ವಾರ್ಡಿನ ಸದಸ್ಯ ಡಾ.ಎ.ಎಂ.ಎ. ಸುರೇಶ್ ಕುಮಾರ್ ಹೇಳಿದರು.
ಪಟ್ಟಣದ 18ನೇ ವಾರ್ಡ್‍ನಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ಮನೆ ಮನೆಗೆ ತೆರಳಿ ಪ್ರಚಾರ ಕಾರ್ಯ ಕೈಗೊಂಡಿದ್ದಾಗ ಅವರು ಮಾತನಾಡಿದರು. ಇಡೀ ದೇಶದಲ್ಲಿಯೇ ಬಿಜೆಪಿ ಪರ ಅಲೆ ಇದೆ. ಇದಕ್ಕೆ ಕಾರಣ ನರೇಂದ್ರ ಮೋದಿ ದೇಶದ ಜನಾಸೇವೆಯಲ್ಲಿ ಕೈಗೊಂಡಿರುವ ಹಾಗೂ ಜನಪರ ಕಾಳಜಿಯ ಯೋಜನೆಗಳನ್ನು ಅನುಷ್ಠಾನಗೊಳ್ಳಿಸುವಲ್ಲಿ ಯಶಸ್ವಿಯಾದ ಪ್ರಧಾನಮಂತ್ರಿಯವರ ಕಾರ್ಯವೈಖರಿಯೇ ಮಾದರಿಯಾಗಿದೆ. ಆದ್ದರಿಂದ ಮತ್ತೊಮ್ಮೆ ಅವರನ್ನು ಪ್ರಧಾನಿಯಾಗಿಸಲು ಈಗಾಗಲೇ ದೇಶದ ಜನತೆ ನಿರ್ಧರಿಸಿದ್ದಾರೆ. ಕಾರಣ ಜಿಲ್ಲಾ ಅಭ್ಯರ್ಥಿ ಆಯ್ಕೆಯಾಗಲಿದ್ದಾರೆ ಎಂದರು.
ಬಿಜೆಪಿ ನಗರ ಘಟಕ ಅಧ್ಯಕ್ಷ ಸಂದೀಪ್ ಶಿವಮೊಗ್ಗ, ಕುಮಾರ್ ಇಂಜಿನಿಯರ್ ಮುಖಂಡರಾದ ಡಿಶ್ ವೆಂಕಟೇಶ್, ಶ್ರೀಶೈಲ, ಎಲ್.ಐ.ಸಿ. ಮಲ್ಲಿಕಾರ್ಜುನ, ರಾಜು ಪಾಟೀಲ್, ಬಿ.ಅನಿಲ್, ಶ್ರೀಧರ ಶೆಟ್ಟಿ, ಸಂಗಪ್ಪ ಶೆಟ್ಟಿ ಇದ್ದರು.