ಮೈತ್ರಿ ಅಭಯರ್ಥಿಗಹಳಿಗೆ ಪ್ರಗತಿಪರರ ಬೆಂಬಲ …!!

ಹಾವೇರಿ

        ಲೋಕಸಭಾ ಕ್ಷೇತ್ರದ ಮೈತ್ರಿ ಪಕ್ಷದ ಅಭ್ಯರ್ಥಿಯಾದ ಡಿ.ಆರ್.ಪಾಟೀಲರವರಿಗೆ ಹಾಗೂ ಧಾರವಾಡ ಲೋಕಸಭಾ ಅಭ್ಯರ್ಥಿಯಾದ ವಿನಯ ಕುಲಕರ್ಣಿಯವರಿಗೆ ಜಿಲ್ಲಾ ಪ್ರಗತಿಪರ ದಲಿತ ಹಿಂದುಳಿದ ಸಂಘಟನೆಗಳ ಒಕ್ಕೂಟವೂ ಬೆಂಬಲವನ್ನು ನೀಡಿದೆ.

        ಹಾವೇರಿ ನಗರದ ಖಾಸಗಿ ಹೋಟೆಲನಲ್ಲಿ ದಲಿತ ಸಂಘಟನೆಗಳ ಮುಖಂಡರು ಸಭೆಯನ್ನು ಸೇರಿ ಹಾವೇರಿ ಲೋಕಸಭಾ ಅಭ್ಯರ್ಥಿ ಮತ್ತು ಧಾರವಾಡ ಲೋಕಸಭಾ ಅಭ್ಯರ್ಥಿಯಾದ ವಿನಯ ಕುಲಕರ್ಣಿಯವರಿಗೆ ಬೆಂಬಲ ನೀಡಲಾಯಿತು,

        ಪತ್ರಿಕಾ ಗೋಷ್ಟಿ ನಡೆಸಿದ ಎಸ್.ಎನ್.ಪಾಟೀಲ ಮಾಜಿ ಶಾಸಕರು ಮಾತನಾಡಿ ಭಾರತ ಸಂವಿಧಾನವನ್ನು ತಿದ್ದುಪಡಿ ಮಾಡಲು ಮುಂದಾಗಿರುವ ಬಿ.ಜೆ.ಪಿಯನ್ನು ಸೋಲಿಸಲು, ದಲಿತರು, ಹಿಂದುಳಿದ ವರ್ಗದವರು ಅಲ್ಪಸಂಖ್ಯಾತರ ಮತದಾರರಿಗೆ ಕರೆ ಕೊಟ್ಟರು

       ಭಾರತ ಸಂವಿಧಾನವು ಎಲ್ಲ ಜಾತಿ ಜನಾಂಗ ಧರ್ಮದವರಿಗೆ ಸಮಾನತೆಯ ಹಕ್ಕುಗಳನ್ನು ಸ್ವತಂತ್ರದ ಹಕ್ಕು, ಧಾರ್ಮಿಕ ಹಕ್ಕು, ಶೈಕ್ಷಣಿಕ ಹಕ್ಕು ನೀಡಿದ ಇಂತಹ ಸಂವಿಧಾನವನ್ನು ಬದಲಾಯಿಸುವುದು ಮತ್ತು ಈಗಾಗಲೆ ಆರ್.ಎಸ್.ಎಸ್.ಅಜೆಂಡಾದಲ್ಲಿ ಪ್ರತ್ಯೇಕ ಸಂವಿಧಾನವನ್ನು ಏಕರೂಪ/ಅಧ್ಯಕ್ಷತೆಯ ಸಂವಿಧಾನವನ್ನು ಜಾರಿಗೆ ತರುವ ಹುನ್ನಾರವು ಬಿಜೆಪಿಯ ಅಜೆಂಡಾದಲ್ಲಿ ಇರುವುದರಿಂದ ದೇಶದ ಶೇಕಡಾ 85 ರಷ್ಟು ಜನತೆಯ ಸಮಾನತೆಯ ಹಕ್ಕುಗಳು ರದ್ದಾಗುವ ಹಂತದಲ್ಲಿ ಇರುವುದರಿಂದ ದಲಿತ ಹಿಂದುಳಿದ ಅಲ್ಪಸಂಖ್ಯಾತ ಸಮುದಾಯವು ಈ ಬಾರಿ ಬಿಜೆಪಿಯನ್ನು ವಿರೋಧಿಸುವ ಮೂಲಕ ಕಾಂಗ್ರೇಸ ಅಭ್ಯರ್ಥಿಗಳಿಗೆ ಮತದಾನ ಮಾಡಲು ಕರೆ ನೀಡಿದರು.

        ವಾಯ್.ಎನ್.ಗೌಡ್ರ, ಕುರಿ ಉಣ್ಣೆ ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷರು ಮಾತನಾಡಿ ಪ್ರಧಾನಮಂತ್ರಿಯವರು ದೇಶದ ಬಡಜನತೆಗೆ ಯಾವುದೇ ಸೌಲಭ್ಯವನ್ನು ಕಲ್ಪಿಸದೇ ಕೇವಲ ಮನ್ ಕಿ ಬಾತ್ ಚೌಕಿದಾರ ಅಂತಾ ಹೇಳುತ್ತಾ ತೋಳ ಬಂತಲೆ ತೋಳ ಎಂಬ ಕಥೆಯನ್ನು ಹೇಳುತ್ತಾ ದೇಶದ ಜನರನ್ನು ಜಾತಿ ಮತ್ತು ಕೋಮುವಾದದಲ್ಲಿ ಪ್ರತಿಬಿಂಬಿಸುತ್ತಿದ್ದಾರೆ, ನರೇಂದ್ರ ಮೋದಿಯವರ ಸಂವಿಧಾನ ವಿರೋಧಿ ಪರಿಕಲ್ಪನೆಯ ಅನುಷ್ಠಾನವನ್ನು ಅಮಿತ ಶಾ ಹಾಗೂ ಅನಂತರಕುಮಾರ ಹೆಗಡೆ, ಯುಪಿ ಸಂಸದರಾದ ಸಾಕ್ಷಿ ಮಹರಾಜ ಇವರ ಮೂಲಕ ಹೇಳಿಕೆಯನ್ನು ಕೊಡಿಸುತ್ತಾ ದೇಶವನ್ನು ಅದೋಗತಿಗೆ ತಳ್ಳುತ್ತಿದ್ದಾರೆ,

       ಜಿಲ್ಲಾ ಪ್ರಗತಿಪರ ದಲಿತ ಹಿಂದುಳಿದ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರಾದ ಎನ್.ಎನ್.ಗಾಳೆಮ್ಮನವರ ಮಾತನಾಡಿ ಬಾಬಾ ಸಾಹೇಬ ಅಂಬೇಡ್ಕರವರು ಎರಡೂವರೆ ವರ್ಷಕ್ಕಿಂತ ಹೆಚ್ಚು ಕಾಲ ಪ್ರಪಂಚದ ಎಲ್ಲಾ ರಾಷ್ಟ್ರಗಳ ಸಂವಿಧಾನಗಳನ್ನು ಅಧ್ಯಯನ ಮಾಡಿ ಭಾರತಕ್ಕೆ ಲಿಖಿತ ಸಂವಿಧಾನವನ್ನು ನೀಡಿರುವುದು ಭಾರತಕ್ಕೆ ಪ್ರಪಂಚದಲ್ಲಿಯೇ ಅಗ್ರ ಸ್ಥಾನ ಮತ್ತು ಹೆಮ್ಮೆಯ ವಿಷಯವಾಗಿದೆ.

      ಅಂಬೇಡ್ಕರವರು ಬರೆದಿರುವ ಸಂವಿಧಾನದಲ್ಲಿ ಇಲ್ಲಿಯವರೆಗೆ ಕೇವಲ 20 % ಮಾತ್ರ ಅನುಷ್ಠಾನಗೊಂಡಿದೆ ಇನ್ನು ಉಳಿದ 80 % ಅನುಷ್ಟಾನಗೊಳಿಸಲು ಈ ಹಿಂದೆ ಆಳಿದ ಸರ್ಕಾರಗಳು ಕಡೆಗಣಿಸಿವೆ. ಮತ್ತು ಹಲವು ತಿದ್ದುಪಡಿಗಳನ್ನು ಮಾಡುವುದರ ಮೂಲಕ ಸಮಾನತೆ ಸೋದರತ್ವವನ್ನು ಉಳಿಸಿದೆ ಆದರೇ ಭಾರತೀಯ ಜನತಾ ಪಕ್ಷವು ಸಂವಿಧಾನವನ್ನೆ ಬದಲಾಯಿಸುವುದರ ಮೂಲಕ ದೇಶದಲ್ಲಿ ಅಧ್ಯಕ್ಷತೆಯ ಆಡಳಿತವನ್ನು ತರುವ ಆತೂರದಲ್ಲಿದ್ದಾರೆ. ಬಾಬಾ ಅಂಬೇಡ್ಕರ ಅನುಯಾಯಿಗಳು ಶಾಂತಿ ಮತ್ತು ಸಮಾನತೆಯನ್ನು ಬಯಸುವವರು ಈ ಬಾರಿ ಬಿಜೆಪಿಯ ವಿರುದ್ದ ಮತದಾನ ಮಾಡುವ ಮೂಲಕ ಕಾಂಗ್ರೇಸ ಅಭ್ಯರ್ಥಿಗಳನ್ನು ಬೆಂಬಲಿಸಬೇಕೆಂದು ಕರೆ ನೀಡಿದರು

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link