ದಾವಣಗೆರೆ :
ಸಾಮಾಜಿಕನ್ಯಾಯ ತತ್ವದಡಿ ಕಾಂಗ್ರೆಸ್ ಪಕ್ಷ ಆಡಳಿತ ನಡೆಸುತ್ತಿದೆ. ಸಾಮಾಜಿಕ ತತ್ವದಿಂದ ಮಾತ್ರ ಎಲ್ಲಾ ಜಾತಿ-ಧರ್ಮಕ್ಕೂ ಅಧಿಕಾರವನ್ನು ಕಾಂಗ್ರೆಸ್ ಪಕ್ಷ ನೀಡಿದೆ ಎಂದು ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ತಿಳಿಸಿದರು. ನಗರದ ನರಹರಿಶೇಟ್ ಭವನದಲ್ಲಿ ನಡೆದ ಪರಿಶಿಷ್ಟ ಜಾತಿಯ ಕಾಂಗ್ರೆಸ್ ಪಕ್ಷದ ಮುಖಂಡರುಗಳ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯುವ ಪಕ್ಷ ದೇಶದಲ್ಲಿ ಎಲ್ಲಾ ಜಾತಿ-ಧರ್ಮದವರನ್ನು ಒಗ್ಗೂಡಿಸಿ ದೇಶವನ್ನು ಉನ್ನತ ಮಟ್ಟಕ್ಕೆ ಕೊಂಡೊಯಿದಿದ್ದು, ಆದರೆ ಇಂದು ಬಿಜೆಪಿ ಜಾತಿ-ಧರ್ಮವನ್ನು ಒಡೆದು ದೇಶದ ಸಮಗ್ರತೆ ಧಕ್ಕೆ ತರುತ್ತಿದೆ ಎಂದು ದೂರಿದರು.
ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನೇ ಬದಲಿಸಲು ಹೊರಟಿದ್ದು, ದೇಶದ ಸಮಗ್ರತೆಯನ್ನು ಸರ್ವನಾಶ ಮಾಡುವ ಹುನ್ನಾರ ನಡೆದಿದೆ ಎಂದ ಅವರು ಸಂವಿಧಾನವನ್ನು ಬದಲಾಯಿಸಲು ಹೊರಟಿರುವ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಹೆಚ್.ಆಂಜನೇಯ, ಕೆಪಿಸಿಸಿ ಕಾರ್ಯದರ್ಶಿ ಡಿ.ಬಸವರಾಜ್, ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಎಸ್.ಬಸವರಾಜ್, ಎಲ್.ಬಿ.ಹನುಮಂತಪ್ಪ, ಎಂ.ಹಾಲೇಶ್, ಜಯಣ್ಣ, ಬಿ.ಎಂ.ಹನುಮಂತಪ್ಪ, ಗಣೇಶ್ ದಾಸಕರಿಯಪ್ಪ, ನಾಗಪ್ಪ, ಪಾಪಣ್ಣ, ಗಂಗರಾಜ್, ರಂಗನಾಥ್, ಬಲ್ಕೀಶ್ ಬಾನು, ಮಂಜಪ್ಪ ಹಲಗೇರಿ, ಸೋಮ್ಲಾಪುರದ ಹನುಮಂತಪ್ಪ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
