ದಾವಣಗೆರೆ:
ದಾವಣಗೆರೆ ತಾಲೂಕಿನ ಮರುಳಸಿದ್ದನ ಪವಾಡ ಕ್ಷೇತ್ರವಾದ ಹೆಮ್ಮನಬೇತೂರು ಗ್ರಾಮದಲ್ಲಿ ಶುಕ್ರುವಾರ ಶ್ರೀ ಮರುಳಸಿದ್ದೇಶ್ವರ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.
ಭರತ್ ಹುಣ್ಣಿಮೆಯ ದಿನದಂದು ನಡೆಯುವ ಈ ರಥೋತ್ಸವಕ್ಕೆ ಇಡೀ ಗ್ರಾಮದಲ್ಲಿ ಬಂಧು, ಬಳಗ, ನೆಂಟರಿಸ್ಟರು ಸೇರಿಕೊಳ್ಳುವ ಈ ಹಬ್ಬದಲ್ಲಿ ಸಡಗರ, ಸಂಭ್ರಮದಿಂದ ತುಂಬಿತ್ತು. ಗ್ರಾಮದಿಂದ ಶ್ರೀ ಮರುಳಸಿದ್ದೇಶ್ವರಸ್ವಾಮಿಯು ಹೊರಗಡೆಯಿರುವ ಗುಡೆಯಲ್ಲಿ ವಾಸ್ತವ ಆಗಿ .ಅಲ್ಲಿಂದ ಸಂಜೆ 4 ಗಂಟೆಗೆ ಅಪಾರ ಭಕ್ತರೊಂದಿಗೆ ಪಲ್ಲಕ್ಕಿ ಉತ್ಸವದಲ್ಲಿ ಶ್ರಿಂಗಾರಗೊಂಡು ತಮಟೆ, ವಿವಿಧ ವ್ಯಾಧ್ಯಗಳೊಂದಿಗೆ ರಥೋತ್ಸವ ನಡೆಯುವ ಸ್ಥಳಕ್ಕೆ ಆಗಮಿಸಿತು.
ಬೆಳಗ್ಗೆ ತೇರಿನ ಎರಡು ಗಾಲಿಗಳಿಗೆ ಗಂಧ, ಅರಿಶಿನಿನ ಎಣ್ಣೆ ಹಚ್ಚಲಾಯಿತು. ಸಂಜೆ ಗ್ರಾಮದ ಗೌಡ್ರು ವಂಶಸ್ಥರಿಂದ ಎಡೆ ಕೊಡಲಾಯಿತು. ಪೂಜಾ ವಿಧಿ, ವಿಧಾನಗಳು ನಡೆದವು. ಶಿರಸ್ತಹಳ್ಳಿ ಶಿವಯೋಗಪ್ಪರವರು 30001 ರೂ. ಗಳಿಗೆ ಮರುಳಸಿದ್ದೇಶ್ವರಸ್ವಾಮಿ ಪಠವನ್ನು ಹರಾಜಿನಲ್ಲಿ ಪಡೆದುಕೊಂಡರು.
ರಥೋತ್ಸವಕ್ಕೆ ದೇವರ ಭಾವ ಚಿತ್ರಗಳು, ಬಣ್ಣ, ಬಣ್ಣದ ಪಠಗಳು ದೊಡ್ಡ, ಸಣ್ಣ ಹಾರಗಳು, ಸುತ್ತಲು ಬಾಳೆಕಂಬ, ತೆಂಗಿನ ಕಾಯಿ ಸೇರಿದಂತೆ ವಿವಿಧ ವಸ್ತುಗಳಿಂದ ಅಲಂಕರಿಸಲಾಗಿತ್ತು.
ಸಂಜೆ 6-15 ಕ್ಕೆ ರಥೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ ನೆರದಿದ್ದ ನೂರಾರು ಭಕ್ತರು ತೆಂಗಿನಕಾಯಿ ಹೊಡೆದು, ಬಾಳೆ ಹಣ್ಣು ಎಸೆದು ಸ್ವಾಮಿಯ ಕೃಪೆಗೆ ಪಾತ್ರರಾದರು.
ಈ ಸಂದರ್ಭದಲ್ಲಿ ತಾ.ಪಂ.ಅಧ್ಯಕ್ಷೆ ಮಮತಾ ಮಲ್ಲೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಡಂಡ್ಯಮ್ಮ, ಸದಸ್ಯರುಗಳಾದ ಮಂಜುಳಾರಾಜಶೇಖರಪ್ಪ, ಪ್ರಕಾಶ್, ಶೈಲಮ್ಮ, ವಿಎಸ್‍ಎಸ್‍ಎನ್ ಅಧ್ಯಕ್ಷರಾದ ಎಸ್.ಎಸ್.ವಿಶ್ವನಾಥಪ್ಪ, ಸ್ವಾಮಿಯ ಸಮಿತಿಯ ಅಧ್ಯಕ್ಷರುಗಳು, ಪದಾಧಿಕಾರಿಗಳು, ಗ್ರಾಮದ ಮುಖಂಡರುಗಳು, ಸೇರಿದಂತೆ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.