10 ವರ್ಷದಲ್ಲಿ ಉದಾಸಿ ಸಾಧನೆ ಏನು??

ಹಾವೇರಿ:

      ಕಳೆದ 10 ವರ್ಷಗಳಿಂದ ಸಂಸದರಾಗಿರುವ ಶಿವಕುಮಾರ ಉದಾಸಿ, ದೇಶದಲ್ಲಿ ಆಡಳಿತ ನಡೆಸಿದ ಮೋದಿ ಅವರು ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಈ ಚುನಾವಣೆಯಲ್ಲಿ ಅವರು ಮಾಡಿರುವ ಸಾಧನೆಗಳನ್ನು ಹೇಳಿ ಮತ ಕೇಳುವ ನೈತಿಕೆಯನ್ನು ಬಿಜೆಪಿ ಉಳಿಸಿಕೊಂಡಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಬಿಜೆಪಿ ವಿರುದ್ಧ ಹರಿಹಾಯ್ದರು.

       ಹಾವೇರಿಯಲ್ಲಿ ಡಿ.ಆರ್.ಪಾಟೀಲ ಪರ ಪ್ರಚಾರಕ್ಕೆ ಆಗಮಿಸಿದ ವೇಳೆ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.
ಹಾಲಿ ಸಂಸದ ಶಿವಕುಮಾರ ಉದಾಸಿಯನ್ನು ಜಿಲ್ಲೆಯ ಮತರಾರರು ಎರಡು ಬಾರಿ ಆಯ್ಕೆ ಮಾಡಿದ್ದಾರೆ. ಅವರು ತಮ್ಮ ಸಾಧನೆಗಳನ್ನು ಹೇಳಿ ಮತ ಕೇಳಬೇಕು. ಅದನ್ನು ಬಿಟ್ಟು, ನನ್ನ ಮುಖ ನೋಡಬೇಡಿ, ನರೇಂದ್ರ ಮೋದಿ ಮುಖ ನೋಡಿ ಮತ ನೀಡಿ ಎನ್ನುತ್ತಿದ್ದಾರೆ. ಇವರ ಮುಖ ನೋಡಬಾರದು ಎಂದು ಉದಾಸಿ ಬುರ್ಕಾ ಆದರೂ ಹಾಕಿಕೊಂಡು ಮತ ಕೇಳಲಿ ಮೋದಿ ಮೋದಿ ಎನ್ನುವ ಸಂಸದರ ನಡೆಯನ್ನು ಲೇವಡಿ ಮಾಡಿದರು.

      ನರೇಂದ್ರ ಮೋದಿ ದೇಶದ ಜನರಿಗೆ, ರೈತರಿಗೆ ಏನು ಕೊಡುಗೆ ನೀಡಿದ್ದಾರೆ? ಅವರಿಗೆ ಯಾಕೆ ಮತ ನೀಡಬೇಕು? ದೇಶದಲ್ಲಿ ಅಧಿಕಾರಕ್ಕೆ ಬಂದರೆ ಬೆಲೆ ಏರಿಕೆ ತಗ್ಗಿಸುವೆ ಎಂದಿದ್ದ ಪ್ರಧಾನಿ, 80 ಗಡಿಯಾಚೆಗೆ ತೈಲ ಮಾರಾಟ ಮಾಡಿದ್ದಾರೆ. ಬಹುಸಂಖ್ಯಾತರು ಬಳಕೆ ಮಾಡುವ ಗ್ಯಾಸ್ ನ್ನು 400 ರೂ ಇಂದ 900 ಸಾವಿರಕ್ಕೆ ಏರಿಕೆ ಮಾಡಿದ್ದಾರೆ. ಇಷ್ಟೇಲ್ಲಾ ಅವಾಂತರ ಸೃಷ್ಠಿ ಮಾಡಿರುವ ಮೋದಿ ಮುಖ ನೋಡಿ ಜನರು ಹೇಗೆ ನೀಡುತ್ತಾರಾ? ಇದ್ದ ಒಬ್ಬ ಪತ್ನಿಯ ಮುಖ ಚನ್ನಾಗಿಲ್ಲ ಅಂತ, ಹೆಂಡತಿಯನ್ನು ಬಿಟ್ಟಿದ್ದಾರೆ. ಇಂತವರ ಮುಖ ನೋಡಿ ಮತ ನೀಡಲು ಸಾಧ್ಯವಾ ಎಂದು ಪ್ರಧಾನಿ ಕುರಿತು ವ್ಯಂಗ್ಯವಾಡಿದರು.

       ದೇಶದಲ್ಲಿ ಜನರು ಬದಾವಣೆ ಬಯಸಿದ್ದಾರೆ. ಡಿ.ಆರ್.ಪಾಟೀಲ ಅವರು ಗೆಲ್ಲುವ ಅಭ್ಯರ್ಥಿಯಾಗಿದ್ದಾರೆ. ಅಭಿವೃದ್ಧಿ ವಿಚಾರದಲ್ಲಿ ಡಿ.ಆರ್.ಪಾಟೀಲ ಉತ್ತಮರು. ನಾಲ್ಕು ಬಾರಿ ಎಂ.ಎಲ್.ಎ ಆಗಿರುವ ಅನುಭವ ಹೊಂದಿದ್ದಾರೆ. ಈ ಬಾರಿ ಪಾಟೀಲ್ ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

       ಮುಂದಿನ ಎಂ.ಎಲ್.ಎ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಹೆಚ್ಚಿನ ಸ್ಥಾನಗಳನ್ನು ಪಡೆದುಕೊಳ್ಳಲಿದೆ. ಆಗ ಪುನಃ ಮತ್ತೇ ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಯಾಗುತ್ತೆನೆ ಎಂದಿದ್ದಾರೆ. ಅದರಲ್ಲಿ ಯಾವುದೇ ತಪ್ಪಿಲ್ಲ. ರಾಜ್ಯದ ಜನರು ಸಿದ್ದರಾಮಯ್ಯನವರನ್ನು ಮತ್ತೆ ಮುಖ್ಯಮಂತ್ರಿಯಾಗಿ ನೋಡುವ ಬಯಕೆ ಹೊಂದಿದ್ದಾರೆ ಎಂದು ಸಿದ್ಧರಾಮಯ್ಯ ಹೇಳಿಕೆಯನ್ನು ಮತ್ತೇ ಸಮರ್ಥಿಸಿಕೊಂಡರು.

       ರಾಜ್ಯದಲ್ಲಿ ಲೋಕಸಭಾ ಚುನಾವಣೆಯನ್ನು ಜೆಡಿಎಸ್ ಹಾಗೂ ಕಾಂಗ್ರೆಸ್ ಜೊತೆಗೆ ಮಾಡುತ್ತಿವೆ. ಈ ಸರಕಾರವನ್ನು ಕೆಡವಲು ಬಿಜೆಪಿ ಮೊದಲಿನಿಂದಲೂ ಪ್ರಯತ್ನ ಮಾಡುತ್ತಿದೆ. ಈ ಹಿಂದೆಯೂ ಆಫರೇಷನ್ ಕಮಲದ ಮೂಲಕ ಶಾಸಕರನ್ನು ಖರೀದಿ ಮಾಡಲು ಜನರ ಮುಂದೆ ಹರಾಜಾಗಿತ್ತು. ಆದರೆ, ಬಿಜೆಪಿಯ ಸರಕಾರ ಕೆಡುವಂತ ಯಾವ ಪ್ರಯತ್ನ ಯಶ್ವಸಿಯಾಗಿಲ್ಲ. ಮೆ. 23 ಬಳಿಕ ಮೈತ್ರಿ ಸರಕಾರ ಸುಭದ್ರವಾಗಿರುತ್ತೇ ಎಂದು ವಿಶ್ವಾಸ ವ್ಯಕ್ತಪಡಿಸಿದರು.

        ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಬರಿ ಒಂದು ಕ್ಷೇತ್ರವನ್ನು ಅಲ್ಪಸಂಖ್ಯಾತರಿಗೆ ನೀಡಿದ್ದಕ್ಕೆ ಮುಸ್ಲಿಂ ನಾಯಕರಲ್ಲಿ ಯಾವುದೇ ಅಸಮಾಧಾನವಿಲ್ಲ. ಕಾಂಗ್ರೆಸ್ ಹೈ ಕಮಾಂಡ್ ಈ ಹಿಂದೆ ಸ್ಪರ್ಧಿಸಿದ್ದ ಸಲಿಂ ಅಹ್ಮದ್ ಅವರನ್ನು ಸ್ಪರ್ಧಿಸುವ ಬಗ್ಗೆ ಅಭಿಪ್ರಾಯ ಕೇಳಲಾಗಿತ್ತು.

         ಅವರು, ಸ್ಪರ್ಧಿಸಲು ಒಪ್ಪದಿದ್ದಾಗ, ಡಿ.ಆರ್.ಪಾಟೀಲ ಹೆಸರು ಘೋಷಣೆ ಮಾಡಲಾಯಿತು. ಧಾರವಾಡ, ಬಿದರನಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಲು ಪಕ್ಷ ತಯಾರಿತ್ತು. ನಾವೇ ಕೋಮವಾದಿ ಪಕ್ಷವನ್ನು ಅಧಿಕಾರದಿಂದ ದೂರವಿಡಲು, ದೇಶವನ್ನು ಉಳಿಸಲು ನಮಗೆ ಒಂದೇ ಸ್ಥಾನ ಸಾಕು ಎಂದಿದ್ದೇವಿ. ಸಲಿಂ ಅಹ್ಮದ್ ಅವರಿಗೆ ತೆಲಂಗಾಣದ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಅದಕ್ಕಾಗಿ ಅವರು ಪ್ರಚಾರಕ್ಕೆ ಬಂದಿಲ್ಲ. ಅವರ ತಮ್ಮನಾಗಿ ನಾನು ಪ್ರಚಾರ ಮಾಡುತ್ತಿರುವೆ. ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವೆ ಎಂದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link