ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕರಿಸಲು ಸಲಹೆ

ದಾವಣಗೆರೆ

       ಜಿಲ್ಲೆಯಿಂದ ಈ ಬಾರಿಯ ಲೋಕಸಭಾ ಚುನಾವಣೆಯ ಮುಸ್ಲಿಂ ಬಾಂಧವರು ಪಕ್ಷೇತರ ಅಭ್ಯರ್ಥಿಯಾಗಿರುವ ತಮ್ಮನ್ನು ಬೆಂಬಲಿಸಬೇಕೆಂದು ಮನವಿ ಮಾಡಿದ್ದಾರೆ.

        ಈ ಕುರಿತು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ಮುಸ್ಲಿಂ ಜನಾಂಗವನ್ನು ಕೇವಲ ವೋಟ್ ಬ್ಯಾಂಕ್ ಆಗಿ ಬಳಸಿಕೊಂಡಿದೆ. ನಾಮಕಾವಸ್ಥೆಗೆ ಅಲ್ಪಸಂಖ್ಯಾತರ ಪರ ಎಂಬುದಾಗಿ ಹೇಳುತ್ತದೆ ಎಂದು ಆರೋಪಿಸಿದರು.ಕಾಂಗ್ರೆಸ್‍ನಿಂದ ಮುಸ್ಲಿಂ ಸಮುದಾಯದ ಒಬ್ಬ ವ್ಯಕ್ತಿಗೂ ಟಿಕೆಟ್ ಕೊಡಿಸುವ ಪ್ರಯತ್ನ ಆಗಿಲ್ಲ. ಆದರೆ, ಕಾಂಗ್ರೆಸ್ ಮುಸ್ಲಿಮರ ಪರವಾಗಿದೆ ಎಂದು ಹೇಳಿ, ಜನರ ದಾರಿ ತಪ್ಪಿಸುತ್ತಿದ್ದು, ಈಗ ಮುಸ್ಲಿಮರು ಜಾಗೃತರಾಗಿದ್ದು, ದಾವಣಗೆರೆಯಲ್ಲಿ ಇನ್ನು ಮಂದೆ ಕಾಂಗ್ರೆಸ್‍ನದ್ದು ಮುಗಿದ ಅಧ್ಯಾಯ ಎಂದರು.

        ಇನ್ನೊಂದು ಕಡೆದ ಬಿಜೆಪಿ ನಮ್ಮ ಪಕ್ಷಕ್ಕೆ ಮುಸ್ಲಿಮರು ವೋಟು ಹಾಕುವುದಿಲ್ಲ, ನಮಗೂ ಬೇಡ ಎಂಬುದಾಗಿ ಹೇಳುವ ಮೂಲಕ ನಮ್ಮನ್ನು ದೂರವೇ ಇಟ್ಟಿದೆ. ಈ ಹಿನ್ನೆಲೆಯಲ್ಲಿ ಈ ಎರಡು ಪಕ್ಷಗಳಿಗೂ ಮತ ನೀಡದೇ ತಮಗೆ ಮತ ನೀಡಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಫರ್ವೀಜ್, ಬಸವರಾಜ್, ಫರೀದ್, ಅಜರತ್‍ಅಲಿ, ಶರ್ಫುದ್ದೀನ್, ಶೌಖತ್ ಅಲಿ ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link