ಬೆಂಗಳೂರು
ತಮಿಳುನಾಡು ಗಡಿಯಲ್ಲಿರುವ ಸೂಳಗಿರಿಯ ಮೇಲುಮಲೈ ಬೆಟ್ಟದ ಮೇಲಿನ ಸಣ್ಣ ಕೊಳದಲ್ಲಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಮಹಿಳೆಯನ್ನು ಕೊಲೆ ಮಾಡಿರುವ ದುರ್ಘಟನೆ ನಡೆದಿದೆ.ಕೊಲೆಯಾಗಿರುವ ಮಹಿಳೆಯು ಹಸಿರು ಮೇಲುಡುಗೆ, ನೀಲಿ ಪ್ಯಾಂಟ್ ಧರಿಸಿದ್ದಾಳೆ. ಕಾಲುಂಗುರ ಧರಿಸಿದ್ದು, ಕತ್ತಿನಲ್ಲಿ ತಾಳಿ ಇಲ್ಲ. ಎಡಗೈ ಮೇಲೆ ಪ್ರೇಮ್ ಹೆಸರಿನ ಟ್ಯಾಟೂ ಇದ್ದು ಸದ್ಯಕ್ಕೆ ಆಕೆಯ ಹೆಸರು ವಿಳಾಸ ಪತ್ತೆಯಾಗಿಲ್ಲ.
ಕಳೆದೆರಡು ದಿನಗಳಿಂದ ಸುರಿದ ಮಳೆಗೆ ಬಂಡೆಯ ಮೇಲಿನ ಕೊಳ್ಳದಲ್ಲಿ ನೀರು ನಿಂತಿದೆ.ಅದೇ ನೀರಲ್ಲಿ ತಲೆಯನ್ನು ಮುಳುಗಿಸಿ ದೊಡ್ಡ ಕಲ್ಲನ್ನಿಟ್ಟು ದುಷ್ಕರ್ಮಿಗಳು ಪರಾರಿಯಾಗಿದ್ದಾರೆಂದು ಮೇಲ್ನೋಟಕ್ಕೆ ತಿಳಿದುಬಂದಿದೆ.
ಸೂಳಗಿರಿ ಪೊಲೀಸರು ಸುತ್ತಮುತ್ತಲ ಗ್ರಾಮಗಳಿಗೆ ಫೋಟೋದೊಂದಿಗೆ ಗುರುತು ಪತ್ತೆಗಾಗಿ ಪ್ರಯತ್ನಿಸುತ್ತಿದ್ದಾರೆ. ಮಹಿಳೆಯನ್ನು ಕಂಡ ಪೊಲೀಸರು ಕರ್ನಾಟಕದವಳಿರಬಹುದೆಂಬ ಅನುಮಾನ ವ್ಯಕ್ತಪಡಿಸಿದ್ದಾರೆ.